ಸೋಮವಾರ, ಏಪ್ರಿಲ್ 28, 2025
HomeBreakingBiggboss: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ…! ಸ್ಪರ್ಧಿಗಳಿಗೆ ಶುಭಕೋರಿದ ಸುದೀಪ್…!

Biggboss: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ…! ಸ್ಪರ್ಧಿಗಳಿಗೆ ಶುಭಕೋರಿದ ಸುದೀಪ್…!

- Advertisement -

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಖ್ಯಾತಿಯ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ನಡೆದಿದ್ದು, ಇಂದು ಹಾಗೂ ನಾಳೆ ಫಿನಾಲೆ ನಡೆಯಲಿದೆ. ಗ್ರ್ಯಾಂಡ್ ಫಿನಾಲೆ ತಲುಪಿರೋ ಸ್ಪರ್ಧಿಗಳಿಗೆ ಸುದೀಪ್ ಶುಭಕೋರಿದ್ದಾರೆ.

20 ಸ್ಪರ್ಧಿಗಳಿಂದ ಆರಂಭವಾದ ಶೋದಲ್ಲಿ 5 ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಗೆ ಎಂಟ್ರಿಕೊಟ್ಟಿದ್ದು, ಶನಿವಾರ ಹಾಗೂ ಭಾನುವಾರ ಫಿನಾಲೆ ನಡೆದು ಭಾನುವಾರ ರಾತ್ರಿ ವಿನ್ನರ್ಸ್ ಘೋಷಣೆಯಾಗಲಿದೆ.

ಶನಿವಾರ ಸಂಜೆ 6 ಗಂಟೆಯಿಂದ ಆರಂಭವಾಗಲಿರುವ ಗ್ರ್ಯಾಂಡ್ ಫಿನಾಲೆಗೆ ಕಲರ್ಸ್ ಕನ್ನಡ ಶೋ ವೇದಿಕೆ ಸಜ್ಜುಗೊಂಡಿದ್ದು, ಈಗಾಗಲೇ ಎಲಿಮಿನೇಶನ್ ನಿಂದ ಹೊರಬಂದಿರೋ ಸ್ಪರ್ಧಿಗಳು, ಫೈನಲಿಸ್ಟ್ ಗಳು ಹಾಡಿ ಸಖತ್ ಡ್ಯಾನ್ಸ್ ಮಾಡಿ ರಂಜಿಸಲಿದ್ದಾರೆ.

ನಟಿಯರಾದ ಪ್ರಿಯಾಂಕಾ ತಿಮ್ಮೇಶ್, ರಾಜೀವ್, ಪ್ರಶಾಂತ್ ಸಂಬರಗಿ ಭರ್ಜರಿ ಡ್ಯಾನ್ಸ್ ಮಾಡಿದ್ದು, ವಿಶ್ವನಾಥ ಗಾನಸುಧೆ ಹರಿಸಿದ್ದು, ಪ್ರೋಮೋದಲ್ಲಿ ಸಖತ್ ಹೈಲೈಟ್ ಆಗಿದೆ.ಸುದೀಪ್ ಕೂಡ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

https://www.instagram.com/p/CSRXxDbjh-_/?utm_source=ig_web_copy_link

ವೈಷ್ಣವಿ, ಪ್ರಶಾಂತ್ ಸಂಬರಗಿ,ಮಂಜುಪಾವಗಡ,ಕೆ.ಪಿ.ಅರವಿಂದ್,ದಿವ್ಯ ಉರುಡುಗ ಅಂತಿಮ ಹಂತ ತಲುಪಿದ್ದಾರೆ. ಬಹುತೇಕ ಮಂಜು ಪಾವಗಡ್ ಬಿಗ್ ಬಾಸ್ ಸೀಸನ್ 8 ವಿನ್ನರ್ ಎನ್ನಲಾಗುತ್ತಿದ್ದು,ನಾಳೆ ಸಂಜೆ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.  

https://www.instagram.com/p/CSQ7-fuMqjB/?utm_source=ig_web_copy_link

ಮಾಜಿ ಸ್ಪರ್ಧಿಗಳು ಆಡಿಯೋ ಮೂಲಕ ಅಂತಿಮ ಹಂತ ತಲುಪಿದ ಸ್ಪರ್ಧಿಗಳಿಗೆ ಶುಭಕೋರಿದ್ದು, ಕಿಚ್ಚ ಸುದೀಪ್ ಕೂಡ ಫೈನಲ್ ಹಂತ ತಲುಪಿದ ಸ್ಪರ್ಧಿಗಳಿಗೆ ಟ್ವೀಟ್ ಮೂಲಕ ಶುಭಕೋರಿದ್ದಾರೆ.

RELATED ARTICLES

Most Popular