Neeraj Chopra Makes History : ಭಾರತಕ್ಕೆ ಚಿನ್ನದ ಕಿರೀಟ ತಂದ ನೀರಜ್‌ : ಪ್ರಧಾನಿ ಮೋದಿ ಅಭಿನಂದನೆ, ನನಸಾಯ್ತು ಭಾರತೀಯರ ಕನಸು

Tokyo Olympics : ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಬೇಕೆಂಬ ಶತಕೋಟಿ ಭಾರತೀಯರ ಕನಸು ಕೊನಗೂ ನನಸಾಗಿದೆ‌. ಒಲಿಂಪಿಕ್ಸ್ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಿದ್ದಾರೆ. ಈ ಮೂಲಕ ಭಾರತ ಮೊದಲ ಬಾರಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೀರಜ್‌ ಚೋಪ್ರಾ ಸಾಧನೆಯನ್ನು ಕೊಂಡಾಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಜಾವೆಲಿನ್‌ ಥ್ರೋನ ಎರಡನೇ ಎಸೆತದಲ್ಲೇ 87.58 ಮೀಟರ್ ದೂರಕ್ಕೆ ಎಸೆಯುವ ಮೂಲಕ ವಿಶ್ವದಾಖಲೆ ನಿರ್ಮಿಸುವ ಮೂಲಕ ಚಿನ್ನದ ಪದಕವನ್ನು ಜಯಿಸಿದ್ದಾರೆ. ಟೋಕಿಯೋ ಒಲಿಪಿಂಕ್ಸ್‌ನಲ್ಲಿ ಆರು ಪದಕ ಜಯಿಸಿದ್ದರೂ ಕೂಡ ಚಿನ್ನದ ಪದಕ ಗೆದ್ದಿರಲಿಲ್ಲ. ಇದೀಗ ಜಾವೆಲಿನ್‌ ಥ್ರೋನಲ್ಲಿ ಚಿನ್ನ ಜಯಿಸುವ ಮೂಲಕ ನಿರಾಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ‌.

ಈ ಹಿಂದೆ 2008ರ ಬೀಜಿಂಗ್ ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ ಜಯಿಸಿದ್ದರೆ, ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಎರಡನೇ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.

ಅರ್ಹತಾ ಸುತ್ತಿನಲ್ಲಿ 15ನೇ ಸ್ಥಾನದಲ್ಲಿದ್ದ ನೀರಜ್ ಚೋಪ್ರಾ, ಮೊದಲ ಎಸೆತವನ್ನೇ 86.59 ಮೀ. ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ದಾಖಲೆ ಬರೆದಿದ್ದರು. ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ್ದ ನೀರಜ್‌ ಚೋಪ್ರಾ ಅಂತಿಮವಾಗಿ ಫೈನಲ್‌ನಲ್ಲಿ ಚಿನ್ನ ಜಯಿಸುವ ಮೂಲಕ ಭಾರತೀಯರ ಕನಸನ್ನು ನನಸು ಮಾಡಿದ್ದಾರೆ. ನೀರಜ್‌ ಚೋಪ್ರಾ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಭಜರಂಗ್ ಪುನಿಯಗೆ

( Neeraj Chopra Makes History :Tokyo Olympics Men’s Javelin Throw Wins 1st Gold in Athletics and 2nd Individual Overall )

Comments are closed.