ಭಾನುವಾರ, ಏಪ್ರಿಲ್ 27, 2025
HomeBreakingBiggboss:ಬಿಗ್ ಬಾಸ್ ಮನೆಯಲ್ಲಿ ಅವಘಡ…! ಟಾಸ್ಕ್ ನಿಂದ ಗಾಯಾಳುವಾದ ದಿವ್ಯಾ ಉರುಡುಗ…!!

Biggboss:ಬಿಗ್ ಬಾಸ್ ಮನೆಯಲ್ಲಿ ಅವಘಡ…! ಟಾಸ್ಕ್ ನಿಂದ ಗಾಯಾಳುವಾದ ದಿವ್ಯಾ ಉರುಡುಗ…!!

- Advertisement -

ಕನ್ನಡ ಬಿಗ್ ಬಾಸ್ ಮತ್ತೊಮ್ಮೆ ಆರಂಭಗೊಂಡಾಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ.  ಗ್ರ್ಯಾಂಡ್ ಫಿನಾಲೆಗೆ  ಕೆಲವೇ ವಾರಗಳು ಬಾಕಿ ಇರುವಾಗಲೇ ಟಾಸ್ಕ್ ವೇಳೆ ದಿವ್ಯಾ ಉರುಡುಗ ಗಾಯಗೊಂಡಿದ್ದು, ಕಣ್ಣೀರಿಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಗ್ರ್ಯಾಂಡ್ ಫಿನಾಲೆಗೆ ಸಿದ್ಧತೆ ನಡೆದಿದ್ದು, 8 ಸದಸ್ಯರು ನಾಮಿನೇಟ್ ಆಗುವ ಮೂಲಕ  ಬಿಗ್ ಬಾಸ್ ಮತ್ತಷ್ಟು ಕುತೂಹಲದ ಘಟ್ಟ ತಲುಪಿದೆ. ಆದರೆ ಬಿಗ್ ಬಾಸ್ ನೀಡಿದ್ದ ಟಾಸ್ಕ್ ವೇಳೆ ನಡೆದ ಅವಘಡ ಎಲ್ಲರನ್ನು ಬೆಚ್ಚಿ ಬೀಳಿಸಿದೆ.

ನಾಮಿನೇಶನ್ ನಿಂದ ತಪ್ಪಿಸಿಕೊಳ್ಳೋಕೆ  ಬಿಗ್ ಬಾಸ್  ಟಾಸ್ಕ್ ನೀಡಿದ್ದು, ಸ್ಪರ್ಧಿಗಳನ್ನು ಎರಡು ತಂಡ ಮಾಡಿದೆ. ಒಂದಕ್ಕೆ ವಿಜಯಪಥ ಎಂದು ಹೆಸರಿಡಲಾಗಿದ್ದರೇ, ಇನ್ನೊಂದು ತಂಡಕ್ಕೆ  ನಿಂಗ್ ಐತೆ ಎಂದು ಹೆಸರಿಡಲಾಗಿದೆ.  ವಿಜಯಪಥಕ್ಕೆ  ಅರವಿಂದ್ ನಾಯಕರಾಗಿದ್ದು, ನಿಂಗ್ ಐತೆ ತಂಡಕ್ಕೆ  ಮಂಜು ಪಾವಗಡ ನಾಯಕರಾಗಿದ್ದಾರೆ.

ನಕ್ಷತ್ರ ಅಂಟಿಸುವ ಟಾಸ್ಕ್ ನೀಡಲಾಗಿದ್ದು,  ಈ ಟಾಸ್ಕ್ ಪ್ರಕಾರ  ಪ್ರತಿ ತಂಡದ ಓರ್ವ ಸದಸ್ಯಜಾಕೆಟ್ ಹಾಕಬೇಕು. ಆ ಜಾಕೆಟ್ ಗೆ ಎದುರಾಳಿ ತಂಡದ ಸದಸ್ಯರ ನಕ್ಷತ್ರ ಅಂಟಿಸಬೇಕು. ನಿಂಗ್ ಐತೆ ತಂಡದಿಂದ ದಿವ್ಯ ಉರುಡುಗ ಜಾಕೆಟ್ ಹಾಕಿದ್ದು, ಅವರಿಗೆ ಎದುರಾಳಿ ತಂಡದವರು ನಕ್ಷತ್ರ ಅಂಟಿಸಲು ಮುಂದಾದರು.

ಈ ವೇಳೆ ದಿವ್ಯ ಕೈಗೆ ಗ್ಲಾಸ್ ತಾಗಿದ್ದು ರಕ್ತ ಸುರಿಯಲು ಆರಂಭಿಸಿದೆ.  ದಿವ್ಯ ನೋವಿನಿಂದ ಕಣ್ಣೀರಿಟ್ಟಿದ್ದು, ತಕ್ಷಣ ಅವರನ್ನು ಕನ್ ಫೆಶನ್ ರೂಂಗೆ ಕರೆದೊಯ್ದು ಚಿಕಿತ್ಸೆ  ನೀಡಲಾಗಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಪ್ರತಿನಿತ್ಯ ಆಟ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಟ್ರೋಫಿ ಗೆಲ್ಲಲು ಸ್ಪರ್ಧಿಗಳ ಸರ್ಕಸ್ ಆರಂಭವಾಗಿದೆ.

RELATED ARTICLES

Most Popular