ಸೋಮವಾರ, ಏಪ್ರಿಲ್ 28, 2025
HomeBreakingಬಾಲಿವುಡ್ ಅಂಗಳದಲ್ಲಿ ರಶ್ಮಿಕಾ‌ ಜಾಕ್ ಪಾಟ್....! ಹೊಸ ಚಿತ್ರಕ್ಕೆ ಕೊಡಗಿನ‌ಬೆಡಗಿಯ ಸಂಭಾವನೆ ಎಷ್ಟು ಗೊತ್ತಾ...?!

ಬಾಲಿವುಡ್ ಅಂಗಳದಲ್ಲಿ ರಶ್ಮಿಕಾ‌ ಜಾಕ್ ಪಾಟ್….! ಹೊಸ ಚಿತ್ರಕ್ಕೆ ಕೊಡಗಿನ‌ಬೆಡಗಿಯ ಸಂಭಾವನೆ ಎಷ್ಟು ಗೊತ್ತಾ…?!

- Advertisement -

ಸಧ್ಯ ಬಾಲಿವುಡ್,ಟಾಲಿವುಡ್ ಸೇರಿ ಬಹುಭಾಷೆಗಳಲ್ಲೂ ನಟಿ ರಶ್ಮಿಕಾರದ್ದೆ ಮಾತು.‌ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಸಿನಿಮಾ ಸಂಖ್ಯೆ ಜೊತೆ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ‌.

ಕಳೆದ ಎರಡು ವರ್ಷದಿಂದ ತೆಲುಗು, ತಮಿಳಿನಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಈಗ ಬಾಲಿವುಡ್ ನಲ್ಲೂ ಎರಡೆರಡು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಬಹುಭಾಷಾ ಬ್ಯುಸಿ ನಟಿಯಾದ ರಶ್ಮಿಕಾ ಸಂಭಾವನೆಯಲ್ಲಿ ಕೋಟಿ ಗಡಿ ದಾಟಿದ್ದಾರೆ.

ಬಾಲಿವುಡ್ ನ ಮೊದಲ ಚಿತ್ರದಲ್ಲೇ ಬಿಗ್ ಬಿ ಅಮಿತಾಬ್ ಬಚ್ಚನ್‌ ಜೊತೆ ನಟಿಸೋ‌ ಅವಕಾಶ‌ ಪಡೆದಿರೋ ರಶ್ಮಿಕಾ ಈ ಸಿನಿಮಾದಲ್ಲಿ‌ ಅಮಿತಾಬ್ ಬಚ್ಚನ್‌ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವಿಕಾಸ್ ಬಹ್ಲ್ ನಿರ್ದೇಶನದ ಈ ಸಿನಿಮಾಕ್ಕಾಗಿ ರಶ್ಮಿಕಾ‌ ಸಂಭಾವನೆಯನ್ನು ಏರಿಸಿಕೊಂಡಿದ್ದು ಬರೋಬ್ಬರಿ ೫ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

ಆರಂಭದಲ್ಲಿ ರಶ್ಮಿಕಾ,ಬಿಗ್ ಬಿ ಪ್ರಮುಖ‌ ಪಾತ್ರದಲ್ಲಿರೋ ಈ ಸಿನಿಮಾಗೆ ಡೆಡ್ಲಿ ಎಂದು ಹೆಸರಿಡಲಾಗಿತ್ತು. ಆದರೆ ಈಗ ಚಿತ್ರದ ಟೈಟಲ್ ನ್ನು ಗುಡ್ ಬಾಯ್ ಎಂದು ಬದಲಿಸಲಾಗಿದೆ.

ಮಾರ್ಚ್ ೨೯ ರಿಂದ ಗುಡ್ ಬಾಯ್ ಶೂಟಿಂಗ್ ಆರಂಭವಾಗಲಿದ್ದು ರಶ್ಮಿಕಾ ಸಿನಿಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಬಾಲಿವುಡ್ ನ ಮೊದಲ ಚಿತ್ರಕ್ಕೆ ೫ ಕೋಟಿ ಸಂಭಾವನೆ ಪಡೆದಿರೋ ರಶ್ಮಿಕಾ ಸಖತ್ ಖುಷಿಯಾಗಿದ್ದು ಮುಂಬೈ ನಲ್ಲಿ ಐಷಾರಾಮಿ ಫ್ಲ್ಯಾಟ್ ಖರೀದಿಸಿ ಸೆಟ್ಲ್ ಆಗ್ತಿದ್ದಾರಂತೆ.

ಪೊಗರು ಬಳಿಕ ಸ್ಯಾಂಡಲ್ ವುಡ್ ನಲ್ಲಿ ಯಾವುದೇ ಸಿನಿಮಾ ಒಪ್ಪಿಕೊಳ್ಳದ ರಶ್ಮಿಕಾ ದುಬಾರಿ ಸಂಭಾವನೆ, ಅದ್ದೂರಿ ಸಿನಿಮಾ ಬಳಿಕ‌ ಮತ್ತೆ ಕನ್ನಡಕ್ಕೆ ಮರಳೋದು ಅನುಮಾನ ಅಂತಿದ್ದಾರೆ ಸಿನಿಮಾ ಮಂದಿ.

RELATED ARTICLES

Most Popular