ರಿಲೀಸ್ ಗೂ ಮುನ್ನವೇ ಯುವ ರತ್ನನಿಗೆ ಸಂಕಷ್ಟ…! ವರದಿ‌ ಕೇಳಿದ ಹೈಕೋರ್ಟ್…!

ಕರೋನಾ‌ ಬಳಿಕ. ಬಿಡುಗಡೆಯಾಗುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನಕ್ಕೆ ಸಂಕಷ್ಟ ಎದುರಾಗಿದೆ. ಸಿನಿಮಾ ತಂಡದ ಪ್ರಮೋಶನ್ಸ್ ಕಾರ್ಯಕ್ರಮದ ಬಗ್ಗೆ ಹೈಕೋರ್ಟ್ ವರದಿ ಕೇಳಿದೆ.

ಕರ್ನಾಟಕದಲ್ಲಿ ಕೊರೋನಾ ಎರಡನೆ ಅಲೆ ತೀವ್ರಗೊಳ್ಳುತ್ತಿರುವ ವೇಳೆ ಯಲ್ಲೂ ಯುವ ರತ್ನ ತಂಡ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಯುವ ರತ್ನ ಫ್ರೀ ರಿಲೀಸ್ ಇವೆಂಟ್ ನಡೆಸಿತ್ತು.

ಬೆಳಗಾವಿ,ಕಲ್ಬುರ್ಗಿ, ತುಮಕೂರು,ಮಂಡ್ಯ,ಮೈಸೂರು ಸೇರಿದಂತೆ ಹಲವೆಡೆ ನಡೆದ‌ ಪುನೀತ್ ರಾಜ್ ಕುಮಾರ್ ಯುವರತ್ನ ಶೋಗೆ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು. ಜನಜಂಗುಳಿಯೇ ನೆರೆದು ಕೆಲವೆಡೆ ಲಾಠಿಚಾರ್ಜ್ ಕೂಡ ನಡೆದಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಸೇರಿದಂತೆ ಹಲವರು ಆಕ್ಷೇಪ ಹಾಗೂ ಅಸಮಧಾನ ವ್ಯಕ್ತಪಡಿಸಿದ್ದರು. ಕರೋನಾ ವೇಳೆ ಈ ರೀತಿ ಜನ ಸೇರಿಸಿ ಶೋ ಮಾಡೋದು ಸರಿಯಲ್ಲ ಮಾತು ಕೇಳಿಬಂದಿತ್ತು.

ಈ ಮಧ್ಯೆ ಗಣ್ಯ ರಿಂದ ಕೊರೋನಾ ನಿಯಮ ಉಲ್ಲಂಘನೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ರಾಯಚೂರು ಬಿಜೆಪಿ ಸಮಾವೇಶ ಹಾಗೂ ಯುವರತ್ನ ಸಿನಿಮಾ ಇವೆಂಟ್ ವಿರುದ್ಧ ಗರಂ ಆಗಿದ್ದು ಈ ಎರಡು ಘಟನೆ ಬಗ್ಗೆ ಏಪ್ರಿಲ್ ೮ ಒಳಗೆ ವರದಿ ಸಲ್ಲಿಸಲು ಸೂಚಿಸಿದೆ.

ಸರ್ಕಾರದ ವೈಫಲ್ಯ ಎಂದೇ ಪರಿಗಣಿಸಿರುವ ಹೈಕೋರ್ಟ್ ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ. ಯುವರತ್ನ ಪ್ರಚಾರ ಸಭೆಗೆ ಸೋಷಿಯಲ್ ಮೀಡಿಯಾದಲ್ಲೂ ಆಕ್ರೋಶ ವ್ಯಕ್ತವಾಗಿತ್ತು.

ಜನಸಾಮಾನ್ಯರು ಮಾಸ್ಕ್ ಹಾಕದಿದ್ದರೇ ದಂಡ ಹಾಕುವ ಸರ್ಕಾರ ಸಿನಿಮಾ ಕಾರ್ಯಕ್ರಮ ಗಳ ಮೇಲೆ‌ನಿರ್ಭಂದ ಹೇರುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.ಇದಕ್ಕೂ ಮುನ್ನ ಪೊಗರು,ರಾಬರ್ಟ್ ಸಿನಿಮಾ ತಂಡಗಳು ಕೂಡ ಕರೋನ ಮರೆತು ಅದ್ದೂರಿ ಪ್ರಚಾರ ಹಮ್ಮಿಕೊಂಡಿದ್ದವು.

Comments are closed.