ಕೊರೋನಾ ಜಾಗೃತಿ ಮೂಡಿಸಲು ಹೋಗಿ ಟ್ರೋಲ್ ಆದ್ರು ನ್ಯಾಶನಲ್ ಕ್ರಶ್ ರಶ್ಮಿಕಾ…!!

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಏನೇ ಮಾಡಿದರೂ ಸುದ್ದಿಯಾಗ್ತಾರೆ. ಹಿಂದೊಮ್ಮೆ ಪ್ರವಾಹ ಸ್ಥಿತಿಯಲ್ಲಿ ಹೈದ್ರಾಬಾದಿಗರಿಗೆ ಸಾಂತ್ವನ ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಶ್ಮಿಕಾ ಇದೀಗ ಕೊರೋನಾಕ್ಕೆ ಧೈರ್ಯ ತುಂಬಿ ಮತ್ತೆ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.

ಕೊರೋನಾ ಎರಡನೇ ಅಲೆ ಎಲ್ಲೆಡೆ ವ್ಯಾಪಿಸಿದ್ದು ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ವೈಯಕ್ತಿಕವಾಗಿ ಕೊರೋನಾ ಪೀಡಿತರಿಗೆ ಯಾವ ಸಹಾಯವನ್ನು ಮಾಡದೇ ದೂರ ಉಳಿದಿದ್ದ ರಶ್ಮಿಕಾ ಇಷ್ಟು ದಿನಗಳ ಬಳಿಕ ಕೊರೋನಾ ಬಗ್ಗೆ ವಿಡಿಯೋವೊಂದನ್ನು ಮಾಡಿದ್ದಾರೆ.

ಒಂದು ಯುದ್ಧದಂತಹ ಭೀಕರ ಸನ್ನಿವೇಶದಲ್ಲಿರುವ ನಾವೆಲ್ಲರೂ ಪಾಸಿಟಿವ್ ಚಿಂತನೆಗಳ ಜೊತೆ ಹುಶಾರಾಗಿ ಇರೋಣ. ನಮ್ಮನ್ನು ನಾವು ಆರೋಗ್ಯಕರವಾಗಿ ಕಾಪಾಡಿಕೊಳ್ಳೋಣ. ಹುಶಾರಾಗಿರಿ ಎಂದೆಲ್ಲ ಮಾತನಾಡಿರುವ ರಶ್ಮಿಕಾ ವೈಯಕ್ತಿಕವಾಗಿ ಕೊರೋನಾ ನನಗೂ ಭಯತಂದಿದೆ ಎಂದಿದ್ದಾರೆ.

https://kannada.newsnext.live/sandalwood-meghanaraj-chiru-jrchiru-7month-photo-viral/

ಅಷ್ಟೇ ಅಲ್ಲ ಮುಂದಿನ ಕೆಲವು ವಾರಗಳ ಕಾಲ ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲೂ ಧೈರ್ಯಗೆಡದೆ ಹೋರಾಡಿದ ಕೆಲವು ಮಾದರಿ ವ್ಯಕ್ತಿಗಳನ್ನು ನಿಮಗೆ ಪರಿಚಯಿಸುತ್ತೇನೆ. ನಿಮ್ಮ ಆತಂಕ ಅಳಿಸಿ, ನಿಮ್ಮ ಮುಖದಲ್ಲಿ ನಗು ಅರಳಿಸಲು ಇಂತಹೊಂದು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

https://kannada.newsnext.live/ramesh-jarakiholi-cd-case-big-twist/

ಆದರೆ ರಶ್ಮಿಕಾ ಜನರಲ್ಲಿ ಹಾಗೂ ಅಭಿಮಾನಿಗಳಲ್ಲಿ ಧೈರ್ಯ ತುಂಬಲು ಮಾಡಿರುವ ಈ ವಿಡಿಯೋ ಇದೀಗ ವಿವಾದ ಸೃಷ್ಟಿಸಿದ್ದು, ಕಾರಣ ಇಂಗ್ಲೀಷ್ ಭಾಷೆ. ಹೌದು ಅಪ್ಪಟ ಕನ್ನಡತಿ ಈ ವಿಡಿಯೋವನ್ನು ಇಂಗ್ಲಿಷ್ ಭಾಷೆಯಲ್ಲಿ ಮಾಡಿದ್ದು, ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ.

ಕನ್ನಡ,ಹಿಂದಿ,ತೆಲುಗು,ತಮಿಳು ಭಾಷೆಯಲ್ಲಿ ಗುರುತಿಸಿಕೊಂಡಿರುವ ನಿಮಗೆ ಮಾತನಾಡಲು ಇಂಗೀಷ್ ಭಾಷೆಯೇ ಬೇಕೆ. ಕನ್ನಡದಲ್ಲಿ ಮಾತನಾಡಬಹುದಿತ್ತಲ್ಲ ಎಂದು ಹಲವರು ರಶ್ಮಿಕಾ ಕಾಲೆಳೆದಿದ್ದಾರೆ.

Comments are closed.