ಎಲ್ಲ ಹೆಣ್ಣುಮಕ್ಕಳು ತಾಯ್ತನದ ಸಂದರ್ಭದಲ್ಲಿ ತನ್ನ ಪತಿ ಸದಾಕಾಲ ತನ್ನೊಂದಿಗೆ ಸಮಯ ಕಳೆಯಬೇಕು. ಇಷ್ಟವಾದ ವಸ್ತು,ಒಡವೆ,ಊಟ-ತಿಂಡಿ ಕೊಡಿಸಬೇಕೆಂದು ಬಯಸುತ್ತಾರೆ. ಆದರೆ ನಟಿ ಮೇಘನಾ ರಾಜ್ ಮಾತ್ರ ಬದುಕಿನ ಸುಂದರ ಗಳಿಗೆ ತಾಯ್ತನದ ಹೊಸ್ತಿಲಿನಲ್ಲೇ, ಪತಿಯನ್ನು ಶಾಶ್ವತವಾಗಿ ಕಳೆದುಕೊಂಡರು. ತಮ್ಮೆಲ್ಲ ನೋವುಗಳನ್ನು ಮನಸ್ಸಿನಲ್ಲೇ ಮುಚ್ಚಿಟ್ಟುಕೊಂಡು ಜ್ಯೂನಿಯರ್ ಸರ್ಜಾನನ್ನು ಆರೋಗ್ಯವಾಗಿ ಭೂಮಿಗೆ ತಂದ ಖ್ಯಾತಿ ಮೇಘನಾ ರಾಜ್ ರದ್ದು.

ಈ ಪಯಣದಲ್ಲಿ ಅವರು ಅನುಭವಿಸಿದ ನೋವು,ತಲ್ಲಣ ನೊರೆಂಟು. ಚಿರುವನ್ನು ಕಳೆದುಕೊಂಡಾಗಿ ನಿಂದ ಆರಂಭಿಸಿ, ಜ್ಯೂನಿಯರ್ ಚಿರುವನ್ನು ಮನೆ ತುಂಬಿಸಿಕೊಂಡವರೆಗಿನ ಜರ್ನಿಯನ್ನು ಸ್ವತಃ ಮೇಘನಾರಾಜ್ ಅಭಿಮಾನಿಗಳ ಜೊತೆ ಹಂಚಿಕೊಳ್ಳಲಿದ್ದು, ನವೆಂಬರ್ 1 ರಂದು ಮಾಧ್ಯಮಗಳ ಜೊತೆ ಮಾತನಾಡಲು ನಿರ್ಧರಿಸಿದ್ದಾರೆ.

ಅಕ್ಟೋಬರ್ 22 ರಂದು ಜ್ಯೂನಿಯರ್ ಚಿರುಗೆ ಜನ್ಮನೀಡಿರುವ ಮೇಘನಾರಾಜ್ ವಿಜಯದಶಮಿಯ ಶುಭಗಳಿಗೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಮ್ಮ ತಾಯಿಮನೆಗೆ ತೆರಳಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಮೇಘನಾ ರಾಜ್ ಸಧ್ಯ ಸಂಪ್ರದಾಯದಂತೆ ತಮ್ಮ ತಾಯಿ ಮನೆಯಲ್ಲೇ ಇರಲಿದ್ದು, ಮೂರು ತಿಂಗಳ ನಂತರ ಅದ್ದೂರಿಯಾಗಿ ಪುತ್ರನ ನಾಮಕರಣ ನಡೆಸಲಿದ್ದಾರೆ. ಅದಾದ ಬಳಿಕ ಸರ್ಜಾ ನಿವಾಸಕ್ಕೆ ತೆರಳುತ್ತಾರಂತೆ.

ಮಗು ಹುಟ್ಟುತ್ತೆ ಅನ್ನೋ ಸುದ್ದಿ ತಿಳಿದಾಗಿನಿಂದ ಚಿರು ಪತ್ನಿಯ ಸೀಮಂತ, ಡೆಲಿವರಿ,ಮಗುವಿನ ನಾಮಕರಣ ಹೀಗೆ ಎಲ್ಲ ವಿಚಾರಗಳ ಬಗ್ಗೆಯೂ ನೊರೆಂಟು ಕನಸು ಕಂಡಿದ್ದರಂತೆ. ಆದರೆ ಆ ಕನಸುಗಳು ನನಸಾಗುವ ಮುನ್ನ ಚಿರು ಪತ್ನಿಯನ್ನು ಅಗಲಿದ್ದಾರೆ. ಹೀಗಾಗಿ ಪತಿಯ ಕನಸುಗಳಿಗೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರಂತೆ ಪತ್ನಿ ಮೇಘನಾ ರಾಜ್.

ಚಿರು ಸಾವಿನ ಬಳಿಕ ಇದುವರೆಗೂ ಮೇಘನಾ ರಾಜ್ ಮಾಧ್ಯಮಗಳ ಎದುರು ಮನಬಿಚ್ಚಿ ಮಾತನಾಡಿಲ್ಲ. ಚಿರು ಹುಟ್ಟಿದ ಹಬ್ಬದಂದು ಚಿರು ಸಮಾಧಿಗೆ ತೆರಳುವ ವೇಳೆ ಚುಟುಕಾಗಿ ಮಾಧ್ಯಮದ ಜೊತೆ ಮಾತನಾಡಿದ್ದ ಮೇಘನಾ, ಚಿರು ಈ ಭೂಮಿಗೆ ಯಾವಾಗ ಬರಲು ಬಯಸುತ್ತಾರೋ ಅವಾಗಲೇ ಬರಲಿ ಎಂದಿದ್ದರು.

ಇದನ್ನು ಓದಿ : ಮೇಘನಾಗೆ ಇನ್ನು ಚಿರು ಸಾವನ್ನುಅರಗಿಸಿಕೊಳ್ಳೋಕಾಗಿಲ್ಲ….! ಮಗಳ ನೋವನ್ನು ಬಿಚ್ಚಿಟ್ಟ ಸುಂದರ ರಾಜ್…!!
ಇದೀಗ ನವೆಂಬರ್ 1 ರಂದು ಮೇಘನಾ ಲೈವ್ ಬರಲಿದ್ದು, ಬಹುಷಃ ಮಗುವಿನ ನಾಮಕರಣ, ಮಗುವಿನ ಹೆಸರು ಸೇರಿದಂತೆ ತಾವು ಇದುವರೆಗೂ ಎದುರಿಸಿದ ಕಠಿಣ ಪರಿಸ್ಥಿತಿಯ ಬಗ್ಗೆ, ನೋವಿನ ಹಾದಿಯ ಬಗ್ಗೆ ಹಂಚಿಕೊಳ್ಳುವ ಸಾಧ್ಯತೆ ಇದೆ. ವಿಜಯದಶಮಿಯಂದೇ ಮೇಘನಾ ಲೈವ್ ಬರಲು ನಿರ್ಧರಿಸಿದ್ದರಂತೆ. ಆದರೆ ಮಗುಜನಿಸಿದ 11 ದಿನದೊಳಗೆ ಹೊರಕ್ಕೆ ಬರಬಾರದು ಎಂಬ ಶಾಸ್ತ್ರದ ಹಿನ್ನೆಲೆಯಲ್ಲಿ ನವೆಂಬರ್ 1 ಕ್ಕೆ ಲೈವ್ ಬರಲಿದ್ದಾರೆ.

ಇದನ್ನು ಓದಿ : ಮೂರು ತಿಂಗಳ ಬಳಿಕ ಅದ್ದೂರಿ ನಾಮಕರಣ….! ಜ್ಯೂನಿಯರ್ ಚಿರುಗೆ ಮೇಘನಾ ಇಟ್ಟ ಹೆಸರೇನು ಗೊತ್ತಾ…!!
ಮೇಘನಾ ತಾಳ್ಮೆ,ಸಹನೆ ಹಾಗೂ ಚಿರುವಿನ ಅನುಪಸ್ಥಿತಿಯಲ್ಲಿ ಪರಿಸ್ಥಿತಿಯನ್ನು ಎದುರಿಸಿದ ರೀತಿಗೆ ಚಲನಚಿತ್ರರಂಗವೇ ತಲೆಬಾಗಿ ಹ್ಯಾಟ್ಸಫ್ ಹೇಳಿದ್ದು, ಇದೀಗ ಮೇಘನಾ ನವೆಂಬರ್ 1 ರಂದು ಲೈವ್ ಬರೋದು ಎಲ್ಲರಲ್ಲೂ ಒಂದು ರೀತಿಯ ಕುತೂಹಲ ಮೂಡಿಸಿದೆ.