ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (31-10-2020)

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಶುಕ್ಲ ಪಕ್ಷದ ಪೌರ್ಣಮಿ ತಿಥಿ, ಅಶ್ವಿನಿ ನಕ್ಷತ್ರ, ಸಿದ್ಧಿ ಯೋಗ, ಭವ ಕರಣ , ಅಕ್ಟೋಬರ್ 31 , ಶನಿವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಬೆಳಗ್ಗೆ 9 ಗಂಟೆ 57 ನಿಮಿಷದಿಂದ 11 ಗಂಟೆ 39 ನಿಮಿಷದವರೆಗೂ ಇದೆ.

ದೇವಾಲಯದ ಹಿಂದೆ ಮುಂದೆ ಅಕ್ಕ ಪಕ್ಕದಲ್ಲಿ ಮನೆಗಳಿದ್ದರೆ ಏನಾಗುತ್ತದೆ ? ನಟಿ ವಿಶೇಷವಾಗಿ ಶಿವ ದೇವಾಲಯದ ಮುಂದೆ ಮನೆ ಇರಬಾರದು. ದೇವಾಲಯದ ಸುತ್ತಮುತ್ತ ದೈವಿಕ ಶಕ್ತಿಯ ವೈಬ್ರೆಶನ್ ಹೆಚ್ಚಾಗಿ ಇರುತ್ತದೆ. ಚಿನ್ನ ಪ್ರಚ್ಛನ್ನ ಮಾಡಲು ಹೋಗಬಾರದು. ಅದರಲ್ಲೂ ವಿಶೇಷವಾಗಿ ಶಿವಾಲಯದ ಮುಂದೆ ಮನೆ ಇದ್ದರೆ ಶಾಪವಾಗಿ ಬಿಡುತ್ತದೆ. ದೇವಾಲಯದ ಮುಂದೆ ಮನೆ ಇದ್ದರೆ ಅದು ನಿಮ್ಮ ದೌರ್ಭಾಗ್ಯ. ಶಿವ ಅಂದರೆ ಅಲ್ಪತೃಪ್ತ ಇರುವುದರಲ್ಲೇ ತೃಪ್ತಿ ಪಟ್ಟು ಕೊಳ್ಳುವವನು.

ಶಿವ ವೈರಾಗ್ಯ ಕಾರಕ, ಶಿವನ ದೇವಾಲಯಕ್ಕೆ ಆಸೆಯನ್ನು ತ್ಯಜಿಸಿ ಬರಬೇಕು. ಸಾಮಾನ್ಯವಾಗಿ ಶಿವನ ದೇವಾಲಯಕ್ಕೆ ಬರುವವರು ವೈರಾಗಿಗಳು, ತಪಸ್ವಿಗಳು, ಮಹರ್ಷಿಗಳು, ಅಲ್ಪ ತೃಪ್ತ ಭಾವ, ಸಾಕು ಎಂಬ ಭಾವವನ್ನು ಇಟ್ಟುಕೊಂಡವರು ಮಾತ್ರ ಶಿವನ ದೇವಾಲಯಕ್ಕೆ ಬರಬೇಕು. ಭೋಗ, ಭಾಗ್ಯ, ಅಧಿಕಾ,ರ ಆಸ್ತಿ ಅಂತಸ್ತು, ಆಸೆ, ಎಲ್ಲವನ್ನು ಮರೆತು ಬರಬೇಕು. ಶಿವನ ದೇವಾಲಯಕ್ಕೆ ಬರುವವರು ಸಾಕು ಎಂಬ ವೈರಾಗ್ಯಭಾವದಿಂದ ಬಂದಿರುತ್ತಾರೆ. ಶಿವನ ದೇವಾಲಯದ ಮುಂದೆ ಮನೆ ಇದ್ದರೆ ಅದನ್ನು ನೋಡಿ ನಲ್ಲಿ ಬಂದಿರುವ ಭಕ್ತರಿಗೆ ಭೋಗಭಾಗ್ಯ ವೈಭೋಗದ ಮೇಲೆ ಆಸಕ್ತಿ ಉಂಟಾಗುತ್ತದೆ ಆದ್ದರಿಂದ ಆ ಮನೆಯವರಿಗೆ ಶಾಪ ತಗಲುತ್ತದೆ. ಹಾಗಾಗಿ ಶಿವ ದೇವಾಲಯದ ಮುಂದೆ ಮನೆ ಇರಬಾರದು.

ಮೇಷ ರಾಶಿ
ಚೆನ್ನಾಗಿದೆ, ಚಂದ್ರ ಕೇತು ಸಂಸಾರದಲ್ಲಿದ್ದು ಕೇತು ಬುಧನ ಸಾರದಲ್ಲಿದ್ದಾನೆ. ಬುಧ ಕೇಂದ್ರ ಸ್ಥಾನದಲ್ಲಿ ನಿಮ್ಮನ್ನು ನೋಡುತ್ತಿರುವುದರಿಂದ ಬುದ್ದಿ ಉಪಯೋಗಿಸಿ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಪ್ರಗತಿ. ವಿಶೇಷವಾಗಿ ರಿಯಲ್ ಎಸ್ಟೇಟ್ ಬಿಜಿನೆಸ್ ನಲ್ಲಿ ಇರುವವರಿಗೆ ಪರಿಶ್ರಮದಿಂದ ಹೆಚ್ಚು ಫಲ ದೊರೆಯುತ್ತದೆ.

ವೃಷಭ ರಾಶಿ
ಜಾಗ್ರತೆಯಿಂದ ಇರಿ, ಸ್ಟಾಕ್ ಮಾರ್ಕೆಟ್, ಮನಿ ಡಬ್ಲಿಂಗ್, ಬೆಟ್ಟಿಂಗ್, ಗ್ಯಾಬ್ಲಿಂಗ್, ದಿಢೀರ್ ದುಡ್ಡು ಸುತ್ತು ದಿಢೀರ್ ಲಾಭ, ವಿಷಯಗಳಿಗೆ ಹೋಗಬೇಡಿ ಬುಧ ವಕ್ರವಾಗಿರುವುದರಿಂದ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತೀರಾ.

ಮಿಥುನ ರಾಶಿ
ಬುಧ ವಕ್ರವಾಗಿದ್ದು, ಚಂದ್ರ ಕೇತು ಸಾರದಲ್ಲಿ ನೇರವಾಗಿ ಇರುವುದರಿಂದ ಬುದ್ದಿ ತುಂಬಾ ತೀಕ್ಷ್ಣವಾಗಿ ಓಡುತ್ತದೆ. ತುಂಬಾ ಬುದ್ದಿ ಉಪಯೋಗಿಸಲು ಹೋಗಬೇಡಿ ಸಾಮಾನ್ಯರಂತೆ ಇರಿ.

ಕರ್ಕಾಟಕ ರಾಶಿ
ಉದ್ಯೋಗದಲ್ಲಿ ಸಣ್ಣ ಶಾಟ್ ಕಟ್ ಕಡೆ ಗಮನ ಹರಿಯುತ್ತದೆ ಸಣ್ಣ ಶಾರ್ಟ್ ಕಟ್ ಇರಬೇಕು ಆದರೆ ಅದು ಅತಿಯಾಗಬಾರದು.

ಸಿಂಹ ರಾಶಿ
ತಂದೆಯ ಆರೋಗ್ಯದ ಕಡೆ ಗಮನ ಕೊಡಿ. ಹಿರಿಯರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಾಗುವಂತೆ ಮಾಡಲು ಶಂಕರ ಅಮೃತವನ್ನು ಕೊಡಿ.

ಕನ್ಯಾ ರಾಶಿ
ಗುರು ದರ್ಶನ ,ದೈವ ದರ್ಶನ ,ಆಕಸ್ಮಿಕವಾಗಿ ವಿಷ್ಣುಕ್ಷೇತ್ರ, ಶಿವಕ್ಷೇತ್ರ ಕ್ಕೆ ಹೋಗುವ ಸುಯೋಗವಿದೆ.

ತುಲಾ ರಾಶಿ
ಚೆನ್ನಾಗಿದೆ ಪಾಲುದಾರಿಕೆಯಲ್ಲಿ ಎಚ್ಚರಿಕೆ, ಯಾರೋ ನಿಮ್ಮ ತಲೆಗೆ ಹುಳಿ ಹಿಂಡಿ ತಪ್ಪಾದ ಕಡೆ ಇನ್ವೆಸ್ಟ್ಮೆಂಟ್ ಮಾಡಿಸಿಬಿಡುತ್ತಾರೆ ಎಚ್ಚರಿಕೆಯಿಂದ ಇರಿ.

ವೃಶ್ಚಿಕ ರಾಶಿ
ಪರಿಶ್ರಮದಿಂದ ಫಲವನ್ನು ನೋಡುತ್ತೀರಾ, ಮೆಡಿಕಲ್ ಫೀಲ್ಡ್ ನಲ್ಲಿ ಇರುವವರೆಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಧನಸ್ಸು ರಾಶಿ
ತುಂಬಾ ಚನ್ನಾಗಿದೆ, ತೊಂದರೆಯೇನೂ ಇಲ್ಲ. ಏನು ನಾವು ಪುಣ್ಯ ಮಾಡಿದ್ದೆವೋ ಅದೇ ನಮ್ಮ ಜೊತೆ ಉಳಿಯೋದು. ನೀವು ಮಾಡಿದ ಪುಣ್ಯ ನಿಮ್ಮನ್ನು ರಕ್ಷಿಸುತ್ತದೆ.

ಮಕರ ರಾಶಿ
ತಾಯಿಗೆ ಇಲ್ಲವೇ ತಾಯಿ ಸಮಾನರಾದ ಅತ್ತೆ ಚಿಕ್ಕಮ್ಮ ದೊಡ್ಡಮ್ಮ ಮುಂತಾದವರ ಆರೋಗ್ಯದಲ್ಲಿ ಸಣ್ಣ ಏರುಪೇರು. ಶುದ್ಧ ಕೊಬ್ಬರಿ ಎಣ್ಣೆಯನ್ನು ಬಿಸಿ ನೀರಿನಲ್ಲಿ ಕರಗಿಸಿ ಪ್ರತಿದಿನ ಒಂದು ಚಮಚವನ್ನು ಸೇವಿಸಿ. ಜೊತೆಗೆ ಚರ್ಮಕ್ಕೂ ಕೂಡ ಈ ಎಣ್ಣೆಯನ್ನು ಉಪಯೋಗಿಸಬಹುದು. ತಾಯಿಯ ಹಾಲಿನಷ್ಟೆ ಶ್ರೇಷ್ಠವಾದುದು ಈ ತೆಂಗಿನ ಎಣ್ಣೆ , ಅಮೃತಕ್ಕೆ ಸಮಾನ.

ಕುಂಭ ರಾಶಿ
ಒಡಹುಟ್ಟಿದವರ ವಿಚಾರದಲ್ಲಿ ಶುಭ ಕಾರ್ಯ ನಡೆಯುತ್ತದೆ ಜವಾಬ್ದಾರಿ ನಿಮ್ಮದು.

ಮೀನ ರಾಶಿ
ಚೆನ್ನಾಗಿದೆ ಆದರೆ ಕುಟುಂಬದ ವಿಚಾರದಲ್ಲಿ, ವೃತ್ತಿ ವಿಚಾರದಲ್ಲಿ, ಸ್ವಲ್ಪ ಪರಿಶ್ರಮ ಇರುತ್ತದೆ. ಮನೆಯಿಂದ ಹೊರಗೆ ಹೋಗುವಾಗ ದುರ್ಗಾ ದೇವಿಗೆ ಅರ್ಚನೆ ಮಾಡಿಸಿ ದಂತಹ ಕುಂಕುಮ ವನ್ನಿಟ್ಟುಕೊಂಡು ದೇವರ ತೀರ್ಥವನ್ನು ಸೇವಿಸಿ ಆನಂತರ ಹೊರಗೆ ಹೋಗಿ.

Comments are closed.