ಕಿರುತೆರೆಯಲ್ಲಿ ಮಾತಿನ ಬಂಡವಾಳ ಹೂಡಿ ಗೆದ್ದು,ಬಳಿಕ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಟ್ಟು ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ಗೆದ್ದ ಹುಡುಗ ಗಣೇಶ್. ಕಾಮಿಡಿ ಟೈಂ ಗಣೇಶ್ ರಿಂದ ಗೋಲ್ಡನ್ ಸ್ಟಾರ್ ಆಗಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರೋ ಗಣೇಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ನವಿರಾದ ಪ್ರೇಮಕತೆ. ಮನತಟ್ಟುವ ಹಾಡುಗಳು ಹಾಗೂ ವಿಭಿನ್ನ ರೋಲ್ ಗಳ ಮೂಲಕ ಕನ್ನಡದಲ್ಲಿ ತನ್ನದೇ ಆದ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡ ಗಣೇಶ್ ಸಾಲು ಸಾಲು ಚಿತ್ರಗಳ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.

ಕೊರೋನಾ ಎರಡನೇ ಅಲೆಯ ಸಂಕಷ್ಟ ಹಾಗೂ ಹಲವು ಆತ್ಮೀಯರ ಅಗಲಿಕೆಯಿಂದ ನೊಂದ ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದು, ಈ ಕುರಿತು ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.

ನೋವಿನಲ್ಲಿ ಸಂಭ್ರಮ ಬೇಡ. ನನ್ನ ಹುಟ್ಟುಹಬ್ಬದ ಆಚರಣೆಗೆ ನೀವು ಖರ್ಚು ಮಾಡುವ ಹಣವನ್ನು ಕೊರೋನಾ ಸಂಕಷ್ಟದಲ್ಲಿರುವ ಸಂತ್ರಸ್ಥರಿಗೆ ನೀಡಿ ಎಂದು ಮನವಿ ಮಾಡಿದ್ದಾರೆ.

ಸದ್ಯ ಗಾಳಿಪಟ-2, ತ್ರಿಬಲ್ ರೈಡಿಂಗ್ ಸೇರಿದಂತೆ ಹಲವು ಚಿತ್ರಗಳು ರಿಲೀಸ್ ಗೆ ಸಿದ್ಧವಾಗಿದ್ದು, ಯಾವ ಚಿತ್ರ ಮೊದಲು ತೆರೆಗೆ ಬರಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

2001 ರಲ್ಲಿ ನಟನೆಗೆ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಗೆ 2006 ರಲ್ಲಿ ತೆರೆಕಂಡ ಮುಂಗಾರುಮಳೆ ಸಿನಿಮಾ ದೊಡ್ಡ ಬ್ರೇಕ್ ತಂದುಕೊಟ್ಟಿತ್ತು. ಅದಾದ ಬಳಿಕ ಚೆಲುವಿನ ಚಿತ್ತಾರ, ಕೃಷ್ಣಾ,ಗಾಳಿಪಟ,ಮಳೆಯಲಿ ಜೊತೆಯಲಿ ಸೇರಿ ಹಲವು ಸಿನಿಮಾದಲ್ಲಿ ಗಣೇಶ್ ನಟಿಸಿದ್ದಾರೆ.