ಮಂಗಳವಾರ, ಜೂನ್ 17, 2025
HomeBreakingಬಾಸ್ ಪರ್ವ ಹೆಸರಿನಲ್ಲಿ ಕಾಮನ್ ಡಿಪಿ…! ಚಾಲೆಂಜಿಂಗ್ ಸ್ಟಾರ್ ಬರ್ತಡೇಗೆ ಅಭಿಮಾನಿಗಳ ಸೆಲಿಬ್ರೇಶನ್…!!

ಬಾಸ್ ಪರ್ವ ಹೆಸರಿನಲ್ಲಿ ಕಾಮನ್ ಡಿಪಿ…! ಚಾಲೆಂಜಿಂಗ್ ಸ್ಟಾರ್ ಬರ್ತಡೇಗೆ ಅಭಿಮಾನಿಗಳ ಸೆಲಿಬ್ರೇಶನ್…!!

- Advertisement -

ಪ್ರಾಣಿಪ್ರಿಯ, ಪಕ್ಷಿಪ್ರಿಯ ಡಿಬಾಸ್ ಬರ್ತಡೇಗೆ ಮೂರು ದಿನಗಳಿರುವಾಗಲೇ ಚಾಲೆಂಜಿಂಗ್ ಸ್ಟಾರ್,ಡಿಬಾಸ್ ಅಭಿಮಾನಿಗಳು ಕಾಮನ್ ಡಿಪಿ ಮೂಲಕ ಸಂಭ್ರಮಿಸುತ್ತಿದ್ದಾರೆ. ಡಿಬಾಸ್ ಬರ್ತಡೆಯನ್ನು ಬಾಸ್ ಪರ್ವ ಎಂದಿರುವ ಅಭಿಮಾನಿಗಳು ಸಿದ್ಧಪಡಿಸಿರುವ ಡಿಪಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕಾಡು, ಪ್ರಾಣಿ,ಪಕ್ಷಿ ಸಫಾರಿ ಎಂದರೇ ಪ್ರಾಣ. ಶೂಟಿಂಗ್ ಮುಗಿದ ಬಿಡುವಿನಲ್ಲಿ ಸದಾ ಪ್ರಾಣಿಗಳ ಸೇವೆ, ಕಾಡಿನಲ್ಲಿ ಕಳೆದುಹೋಗಲು ಬಯಸುವ ದರ್ಶನ್ ಈಗಾಗಲೇ ಅರಣ್ಯ ಇಲಾಖೆಯ ರಾಯಭಾರಿಯಾಗಿ ಸಹ ಕೆಲಸ ಮಾಡಿದ್ದಾರೆ. ಹೀಗಾಗಿ ದರ್ಶನ್ ಅಭಿಮಾನಿಗಳು ಅವರ ಪ್ರೀತಿಯ ಹವ್ಯಾಸವನ್ನು ಬಳಸಿಕೊಂಡು ಕಾಮನ್ ಡಿಪಿ ಸಿದ್ಧಪಡಿಸಿದ್ದಾರೆ.

DARShan 2

ಕಾಡಿನಲ್ಲಿ ಹುಲಿ,ಸಿಂಹ,ಜಿಂಕೆ ಸೇರಿದಂತೆ ಎಲ್ಲ ಪ್ರಾಣಿಗಳ ಜೊತೆ ಕ್ಯಾಮರಾ ಹಿಡಿದು ಕೂತಿರುವ ದರ್ಶನ್ ರನ್ನು ಒಳಗೊಂಡ ಡಿಪಿ ಸಿದ್ಧವಾಗಿದ್ದು, ಡಿಬಾಸ್ ಪರ್ವ ಬಾಸ್ ಎಂದು ಬರೆದಿರುವ ಬೋರ್ಡ್ ಹಾಕಲಾಗಿದೆ. ಈ ಡಿಪಿ ಇದೀಗ ನಟರಾದ ಜಗ್ಗೇಶ್, ನಟ ಸುಧೀರ್,ನಟಿ ಸುಮಲತಾ, ಧನಂಜಯ್ ಸೇರಿದಂತೆ ಹಲವು ನಟ-ನಟಿಯರು ತಮ್ಮ ಡಿಪಿಯಾಗಿ ಬಳಸಿಕೊಂಡಿದ್ದಾರೆ.

Robert Dar 1

ತಿಂಗಳು ಮೊದಲೇ ಈ ಭಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿರುವುದಾಗಿ ಘೋಷಿಸಿರುವ ನಟ ದರ್ಶನ್, ಕೊರೋನಾ ಹಿನ್ನೆಲೆಯಲ್ಲಿ ಯಾರು ಮನೆಯ ಬಳಿ ಬರಬೇಡಿ. ಅನಗತ್ಯವಾಗಿ ಹಣ ವೆಚ್ಚ ಮಾಡಬೇಡಿ.ಕೊರೋನಾ ಸಂದರ್ಭದಲ್ಲಿ ನೀವೆಲ್ಲ ಸುರಕ್ಷಿತವಾಗಿರೋದು ನನಗೆ ಮುಖ್ಯ. ಹೀಗಾಗಿ ಮನೆಯಲ್ಲೇ ಸುರಕ್ಷಿತವಾಗಿರಿ. ಬರ್ತಡೆಗೆ ಖರ್ಚು ಮಾಡುವ ಹಣವನ್ನು ಅಗತ್ಯವಿರುವರಿಗೆ ನೀಡಿ ಎಂದಿದ್ದಾರೆ.

Robert

ಫೆ.16 ರಂದು ದರ್ಶನ್ ಬರ್ತಡೇ ಹಿನ್ನೆಲೆಯಲ್ಲಿ ಅವರ ಬಹುನೀರಿಕ್ಷಿತ ಚಿತ್ರ ರಾಬರ್ಟ್ ನ ಟ್ರೇಲರ್ ರಿಲೀಸ್ ಆಗಲಿದ್ದು, ಜೊತೆಗೆ ಹಲವು ಬಹುನೀರಿಕ್ಷಿತ ಚಿತ್ರಗಳು ಘೋಷಣೆಯಾಗುವ ಸಾಧ್ಯತೆ ಕೂಡ ಇದೆ.  

RELATED ARTICLES

Most Popular