ಕೊರೋನಾ ಕಡಿಮೆಯಾಗಿ ಥಿಯೇಟರ್ ಗಳಲ್ಲಿ ನೂರಕ್ಕೆ ನೂರು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಈ ಖುಷಿಯಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದ ರಾಬರ್ಟ್ ಚಿತ್ರಕ್ಕೆ ಕಂಟಕ ಎದುರಾಗಿದೆ.

ದರ್ಶನ್ ಬಹುನೀರಿಕ್ಷಿತ ಚಿತ್ರ ರಾಬರ್ಟ್ ಶಿವರಾತ್ರಿಯಂದು ತೆರೆಗೆ ಬರಲು ಸಜ್ಜಾಗಿದ್ದು ಈಗಲೇ ಪ್ರಮೋಶನ್ ಕೂಡ ಆರಂಭಿಸಿದೆ ಚಿತ್ರತಂಡ. ಆದರೆ ತೆಲುಗಿನಲ್ಲಿ ಚಿತ್ರ ರಿಲೀಸ್ ಮಾಡಲು ಅಡ್ಡಿ ಎದುರಾಗಿದೆ.

ಚಿಕ್ಕಪುಟ್ಟ ಚಿತ್ರಗಳ ರಿಲೀಸ್ ಕಾರಣ ಮುಂದಿಟ್ಟುಕೊಂಡು ಮಾರ್ಚ್ ೧೧ ರಂದು ರಾಬರ್ಟ್ ರಿಲೀಸ್ ಗೆ ತೆಲುಗು ಸಿನಿಮಾ ಇಂಡಸ್ಟ್ರಿಗೆ ಅಡ್ಡಿ ಮಾಡುತ್ತಿದೆ ಎನ್ನಲಾಗಿದೆ. ತೆಲುಗು ಇಂಡಸ್ಟ್ರಿಯ ಈ ವರ್ತನೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಟ್ಟಾಗಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಯಾವುದೇ ದೊಡ್ಡ ,ಚಿಕ್ಕ ಚಿತ್ರಗಳ ರಿಲೀಸ್ ಇದ್ದರೂ ತೆಲುಗು ಚಿತ್ರ ರಿಲೀಸ್ ಮಾಡ್ತಾರೆ. ಅದಕ್ಕೆ ಮುಕ್ತವಾಗಿ ಅವಕಾಶವನ್ನು ನೀಡ್ತಾರೆ. ಆದರೆ ತೆಲುಗಿನಲ್ಲಿ ಕನ್ನಡ ಸಿನಿಮಾಗೆ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲ ತೆಲುಗು ಚಿತ್ರರಂಗದ ಈ ತಾರತಮ್ಯ ನೀತಿ ವಿರುದ್ಧ ನಟ ದರ್ಶನ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಲು ನಿರ್ಧರಿಸಿದ್ದಾರೆ.

ನಾಳೆ ೧೧ ಗಂಟೆಗೆ ದರ್ಶನ್ ದೂರು ನೀಡಲಿದ್ದಾರೆ. 2020 ರ ಡಿಸೆಂಬರ್ ನಲ್ಲೇ ರಿಲೀಸ್ ಆಗಬೇಕಿದ್ದ ರಾಬರ್ಟ್ ಕೊರೋನಾ ಹಿನ್ನೆಲೆಯಲ್ಲಿ ಪೋಸ್ಟ್ ಪೋನ್ ಆಗಿತ್ತು. ಈಗ ಶೂಟಿಂಗ್ ಮುಗಿಸಿರೋ ಚಿತ್ರ ರಿಲೀಸ್ ಗೆ ಸಿದ್ಧವಾಗಿದೆ.