ಮಂಗಳವಾರ, ಮೇ 6, 2025
HomeBreakingಪುಟ್ಟ ಅಭಿಮಾನಿಗೆ ಮನಸೋತ ದಚ್ಚು...! ಸ್ಪೆಶಲ್ ಗಿಫ್ಟ್ ಜೊತೆ ಬರ್ತಡೇ....!!

ಪುಟ್ಟ ಅಭಿಮಾನಿಗೆ ಮನಸೋತ ದಚ್ಚು…! ಸ್ಪೆಶಲ್ ಗಿಫ್ಟ್ ಜೊತೆ ಬರ್ತಡೇ….!!

- Advertisement -

ದರ್ಶನ್ ಅಭಿಮಾನಿಗಳ ಪ್ರೀತಿಯ ಒಡೆಯ. ವಯಸ್ಸಿನ ಹಂಗಿಲ್ಲದೇ ಎಲ್ಲ ವಯೋಮಾನದ ಅಭಿಮಾನಿಗಳಿಗೂ ಪ್ರೀತಿಯಿಂದ ಸ್ಪಂದಿಸುವ ದರ್ಶನ್ ಪುಟ್ಟ ಅಭಿಮಾನಿಯ ಕೇಕ್ ಕಟಿಂಗ್ ನಲ್ಲಿ ಭಾಗವಹಿಸಿ ಮನಗೆದ್ದಿದ್ದಾರೆ.

ನಟ ಹಾಗೂ ಹಾಸ್ಯ ಕಲಾವಿದ ಶಿವರಾಜ್ ಕೆ.ಆರ್.ಪೇಟೆ ಪುತ್ರನ ಬರ್ತಡೇ ಇವತ್ತು. ಮೂರು ವರ್ಷದಿಂದಲೂ ಈ ಬಾಲಕ ದರ್ಶನ್ ಫ್ಯಾನ್.


ಟಿವಿಯಲ್ಲಿ ಸದಾ ದರ್ಶನ್ ಹಾಡು ಕುಣಿತ ಸಿನಿಮಾ ನೋಡೋ ಮಗನ ಬರ್ತಡೇಗಾಗಿ ಶಿವರಾಜ್ ಕೆ.ಅರ್.ಪೇಟೆ ಮಗನಿಗೆ ಸಪ್ರೈಸ್ ಆಗಿ ದರ್ಶನ್ ಅವರನ್ನು ಭೇಟಿ ಮಾಡಿಸಿದ್ದಾರೆ.

ತನ್ನ ನೆಚ್ಚಿನ ನಟನನ್ನು ಕಂಡು ಖುಷಿಯಾದ ವಂಶಿಕ್ ಶಿವರಾಜ್ ದರ್ಶನ್ ಸಮ್ಮುಖದಲ್ಲೇ ಕೇಕ್ ಕತ್ತರಿಸಿ ದರ್ಶನ್ ಗೂ ತಿನ್ನಿಸಿ ಸಂಭ್ರಮಿಸಿದ್ದಾನೆ.


ಪುಟ್ಟ ಅಭಿಮಾನಿಗೆ ಕೇಕ್ ತಿನ್ನಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದ ದರ್ಶನ್ ತಾವು ತೆಗೆದ ವನ್ಯಜೀವಿ ಪೋಟೋವೊಂದನ್ನು ಗಿಫ್ಟ್ ನೀಡಿ ಶುಭಹಾರೈಸಿದ್ದಾರೆ.ಈ ಸಂಗತಿಯನ್ನು ಹಾಸ್ಯನಟ ಶಿವರಾಜ್ ಕೆ.ಅರ್.ಪೇಟೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಮಗನ ಆಸೆಯನ್ನು ಈಡೇರಿಸಿದೆ. ದರ್ಶನ್ ಸರ್ ಪ್ರೀತಿಯಿಂದ ಕೇಕ್ ಕಟ್‌ಮಾಡಿಸಿ ಶುಭಹಾರೈಸಿದರು. ಕಿರಿಯರಿಗೂ ಅವರ ತೋರುವ ಪ್ರೀತಿಗೆ ನಾನು ಚಿರ ಋಣಿ. ಥ್ಯಾಂಕ್ಯು ಡಿ.ಬಾಸ್ ಎಂದಿದ್ದಾರೆ

RELATED ARTICLES

Most Popular