ಸ್ಯಾಂಡಲ್ ವುಡ್ ನ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಸಾಕಷ್ಟು ಶ್ರಮವಹಿಸಿ,ದೇಹದಂಡಿಸಿ ಪಾತ್ರಕ್ಕೆ ತಕ್ಕಂತೆ ನಟಿಸಿ ಸಿದ್ಧಪಡಿ ಸಿರೋ ಬಹುನೀರಿಕ್ಷಿತ ಚಿತ್ರ ಪೊಗರು ರಿಲೀಸ್ ಗೆ ಮುಹೂರ್ತ ಸಿದ್ಧವಾಗಿದೆ. ಆದರೆ ಧ್ರುವ್ ಸರ್ಜಾ ಮಾತ್ರ ಫರ್ಸ್ಟ್ ಡೇ ಫರ್ಸ್ ಶೋ ನೋಡೋಕಾಗಲ್ಲ ಅನ್ನೋ ಕೊರಗಿನಲ್ಲಿದ್ದಾರೆ…

ನಂದಕಿಶೋರ್ ನಿರ್ದೇಶನದಲ್ಲಿ ಮೂರು ಭಾಷೆಯಲ್ಲಿ ಮೂಡಿ ಬರ್ತಿರೋ ಬಹುನೀರಿಕ್ಷಿತ ಚಿತ್ರ ಪೊಗರು. ಈಗಾಗಲೇ ಹಾಡುಗಳ ವೀಕ್ಷಣೆಯಲ್ಲಿ ದಾಖಲೆ ಬರೆದಿರೋ ಪೊಗರು ರಿಲೀಸ್ ಗೆ ಫೆ.19 ರಂದು ಮುಹೂರ್ತ ನಿಗದಿಯಾಗಿದೆ.

ಈ ಚಿತ್ರಕ್ಕಾಗಿ ಸಖತ್ ಬಾಡಿ ಬಿಲ್ಡರ್ ಬಾಯ್ ಆಗಿ ಹಾಗೂ 17 ವರ್ಷದ ಹುಡುಗನಾಗಿ ಹೀಗೆ ಎರಡು ಶೇಡ್ ನಲ್ಲಿ ನಟಿಸಿರೋ ಧ್ರುವ್ ಸರ್ಜಾ ಚಿತ್ರಕ್ಕಾಗಿ ಎರಡೆರಡು ಭಾರಿ ದೇಹ ದಂಡಿಸಿದ್ದಾರೆ.

ಹೇರ್ ಸ್ಟೈಲ್ ಕೂಡ ಬದಲಾಯಿಸಿಕೊಂಡು ವರ್ಷಗಳ ಕಾಲ ಕೇವಲ ಚಿತ್ರಕ್ಕಾಗಿಯೇ ಊಟ ತಿಂಡಿ ಬಿಟ್ಟು ಶ್ರಮಿಸಿದ್ದಾರೆ. ಕೊರೋನಾದಿಂದ ವಿಳಂಬ ವಾಗಿದ್ದ ಚಿತ್ರದ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.
ಆದರೆ ತಮ್ಮ ಚಿತ್ರಗಳನ್ನು ರಿಲೀಸ್ ಆದ ದಿನವೇ ಫರ್ಸ್ಟ್ ಡೇ ಫರ್ಸ್ಟ್ ಶೋ ನೋಡ್ತಿದ್ದ ಧ್ರುವ್ ಈ ಭಾರಿ ತಮ್ಮ ಪ್ರೀತಿಯ ಸಿನಿಮಾ ಪೊಗರು ನೋಡೋಕೆ ಕಷ್ಟಪಡ್ತಿದ್ದಾರಂತೆ. ಕಾರಣ ಅಣ್ಣನ ನಿಧನ.ಹೌದು ಧ್ರುವ್ ಸಿನಿಮಾ ಇಂಡಸ್ಟ್ರಿಗೆ ಬಂದಾಗಿನಿಂದ ತಮ್ಮ ಸಿನಿಮಾ ಸೀನ್ ನಿಂದ ಆರಂಭಿಸಿ ಎಲ್ಲ ಸಂಗತಿಗಳನ್ನು ಚಿರು ಜೊತೆ ಚರ್ಚಿಸುತ್ತ ಬಂದಿದ್ದಾರೆ.

ಅಲ್ಲದೇ ಯಾವಾಗಲೂ ಫರ್ಸ್ಟ್ ಡೇ ಫರ್ಸ್ಟ್ ಶೋ ಅಣ್ಣನ ಜೊತೆನೇ ನೋಡ್ತಿದ್ದರಂತೆ.ಆದರೆ ಈ ಭಾರಿ ತಮ್ಮ ಈ ವಿಭಿನ್ನ ಸಿನಿಮಾ ನೋಡೋಕೆ ಅಣ್ಣ ಇಲ್ಲ ಅನ್ನೋದು ಧ್ರುವ್ ಕಣ್ಣಿರಿಗೆ ಕಾರಣವಾಗಿದೆ.

ಪೊಗರು ರಿಲೀಸ್ ಕುರಿತ ಸುದ್ದಿಗೋಷ್ಟಿಯಲ್ಲೂ ಭಾವುಕರಾದ ಧ್ರುವ್ ಈ ಸಂದರ್ಭದಲ್ಲೂ ನಾನು ಅಣ್ಣನನ್ನು ನೆನಪಿಸಿಕೊಳ್ತಿನಿ. ಚಿತ್ರದ ಪ್ರತಿಯೊಂದು ಸೀನ್ ಶೂಟಿಂಗ್ ವೇಳೆಯಲ್ಲೂ ನನಗೆ ಗೈಡ್ ಮಾಡಿದ್ದ ಎಂದಿದ್ದಾರೆ.