ಹೊಸ ಪ್ರೆಂಡ್ ಜೊತೆ ಶೃತಿ ಹಾಸನ್ ಬ್ಯಾಕ್ ಲೆಸ್…! ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ …!!

ನಟಿ ಶೃತಿ ಹಾಸನ್ ತನ್ನ ಹೊಸ ಪ್ರೆಂಡ್ ಜೊತೆ ಬ್ಯಾಕ್ ಲೆಸ್ ಪೋಸ್ ನೀಡಿರೋ ವಿಡಿಯೋ ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಅರೇ ಇದೇನು ಇಂಥ ವಿಡಿಯೋ ಅಂತ ಹುಬ್ಬೆರಿಸ್ತಾ ಇದ್ದಿರಾ. ವೈರಲ್ ಆಗಿರೋದು ಶೃತಿ ಬ್ಯಾಕ್ ಲೆಸ್ ಗೌನ್ ನಲ್ಲಿ ಪಿಯಾನೋ ನುಡಿಸುತ್ತಿರುವ ವಿಡಿಯೋ. ತನ್ನ ಹೊಸ ಪಿಯಾನೋವನ್ನು ಹೊಸ ಪ್ರೆಂಡ್ ಎಂದಿರುವ ಶೃತಿ ಇದಕ್ಕೆ ಏನೆಂದು ಕರೆಯಲಿ ಎಂದು ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲ ನನ್ನ ಹೊಸ ಸ್ನೇಹಿತ ಪಿಯಾನೋ. ಇದಕ್ಕೆ ಏನೆಂದು ಹೆಸರಿಡಲಿ ? ಬಹುಷ: ಲೈರಾ ಎಂದು ಬರೆದಿದ್ದು ಸಖತ್ ವೈರಲ್ ಆಗಿದೆ.

ಬ್ಯಾಕ್ ಲೆಸ್ ಗೌನ್ ಧರಿಸಿ ಪಿಯಾನೋ ನುಡಿಸೋದರಲ್ಲಿ ಮಗ್ನರಾಗಿರೋ ಶೃತಿ ಹಾಸನ್ ವೀಡಿಯೋಗೆ ಅಭಿಮಾನಿಗಳು ಮೆಚ್ಚಿಕೊಂಡಿದ್ದು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.

ಹಿಂದಿ ಹಾಗೂ ಸೌತ್ ಇಂಡಿಯನ್ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಶೃತಿ ಕಳೆದ ವರ್ಷ ರವಿತೇಜ್ ಜೊತೆ ಕ್ರ್ಯಾಕ್ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ಶೃತಿ ಸಂಗೀತದಲ್ಲಿ ತೊಡಗಿಸಿಕೊಂಡಿದ್ದು, ಈಗ ಪವನ್ ಕಲ್ಯಾಣ ನಟನೆಯ ವಕೀಲ್ ಸಾಬ್ ದಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚಿಗಷ್ಟೆ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಜನಮನಸೆಳೆದಿದೆ. ಕೆಲದಿನಗಳ ಹಿಂದೆ ತಂದೆ ಅನಾರೋಗ್ಯ ಹಾಗೂ ಆಪರೇಷನ್ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಶೃತಿ ಈಗ ಈ ರೋಮ್ಯಾಂಟಿಕ್ ವಿಡಿಯೋ ಜೊತೆ ಅಭಿಮಾನಿಗಳನ್ನು ಸೆಳೆದಿದ್ದಾರೆ.

Comments are closed.