ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಬರೋಬ್ಬರಿ 144 ದಿನಗಳ ಕಾಲ ಜೈಲುವಾಸ ಅನುಭವಿಸಿ ಹೊರಬಂದ ರಾಗಿಣಿ ಅಪ್ಪಟ ದೈವಭಕ್ತೆಯಾಗಿ ಬದಲಾಗಿದ್ದಾರೆ. ಮನೆಯಲ್ಲಿ ಸಂಭ್ರಮದಿಂದ ಶಿವರಾತ್ರಿ ಆಚರಿಸಿದ ರಾಗಿಣಿ ಕಲರ್ ಫುಲ್ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜೈಲು ಸೇರುವ ಮೊದಲಿನಿಂದಲೂ ರಾಗಿಣಿ ದ್ವಿವೇದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ನಟಿ. ಸದಾಕಾಲ ಒಂದಿಲ್ಲೊಂದು ಅಡುಗೆ ಮಾಡಿ ಆವಿಡಿಯೋ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಆದರೆ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ರಾಗಿಣಿ ಹೊರಬಂದ ಮೇಲೂ ಕೆಲಕಾಲ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು.

ಈಗ ಮತ್ತೆ ಆಕ್ಟಿವ್ ಆಗಿದ್ದಾರೆ. ಶಿವರಾತ್ರಿ ಹಬ್ಬವನ್ನು, ಲಿಂಗಪೂಜೆಯನ್ನು ಅದ್ದೂರಿಯಾಗಿ ಆಚರಿಸಿರುವ ರಾಗಿಣಿ ಆ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೈಲಿನಿಂದ ಬಂದ ಹಲವಾರು ದೇವಾಲಯ ಹಾಗೂ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದ ರಾಗಿಣಿ ಶಿವರಾತ್ರಿಯನ್ನು ಉಪವಾಸದೊಂದಿಗೆ ಶಾಸ್ತ್ರೋಕ್ತವಾಗಿ ಆಚರಿಸಿದ್ದಾರೆ.
https://www.instagram.com/p/CMRYNq-ndMq/?igshid=1llgi9qb6ukwc
ನಗು ಮತ್ತು ನಂಬಿಕೆ ಬದುಕಿನ ಮಹತ್ವದ ಅಸ್ತ್ರಗಳು ಎಂಬರ್ಥದಲ್ಲಿ ರಾಗಿಣಿ ಪೋಸ್ಟ್ ಹಾಕಿದ್ದಾರೆ. ಸೋಷಿಯಲ್ ಮೀಡಿಯಾ ಮಾತ್ರವಲ್ಲ ನಟನೆಗೂ ಮರಳಿರುವ ರಾಗಿಣಿ ಸದ್ಯ ಕರ್ವ-3 ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದು, ಇದರೊಂದಿಗೆ ಹಲವು ಚಿತ್ರಗಳ ಕತೆ ಕೇಳಿದ್ದು, ಸಿನಿಮಾ ಸಹಿ ಮಾಡೋ ಚಿಂತನೆಯಲ್ಲಿದ್ದಾರಂತೆ.

ಇನ್ನು ರಾಗಿಣಿ ಅಭಿಮಾನಿಗಳು ನೆಚ್ಚಿನ ನಟಿಯ ಪೋಸ್ಟ್ ಹಾಗೂ ನಾರ್ಮಲ್ ಬದುಕಿಗೆ ಕಮ್ ಬ್ಯಾಕ್ ಮಾಡಿರೋ ಕ್ಷಣಗಳನ್ನು ನೋಡಿ ಸಂಭ್ರಮಿಸುತ್ತಿದ್ದು, ಶುಭಹಾರೈಸುತ್ತಿದ್ದಾರೆ.