ರಾಜ್ಯದಲ್ಲಿ ಮತ್ತೆ ಜಾರಿಯಾಗುತ್ತಾ ಲಾಕ್ ಡೌನ್ ..? ಸಿಎಂ ಯಡಿಯೂರಪ್ಪ ಕೊಟ್ರು ಖಡಕ್ ವಾರ್ನಿಂಗ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಆತಂಕವನ್ನು ತಂದೊಡ್ಡಿದೆ. ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ರೂಲ್ಸ್ ಗಳನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸಿದ್ದು, ಕಠಿಣ ರೂಲ್ಸ್ ಜಾರಿಗೆ ತಲುವುದಾಗಿ ಹೇಳಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಹೇರಿಕೆಯಾಗುವ ಮುನ್ಸೂಚನೆ ನೀಡಿದ್ದಾರೆ.

ಕಳೆದ 6 ತಿಂಗಳಿಗೆ ಹೋಲಿಸಿದ್ರೆ ಮಾರ್ಚ್ ತಿಂಗಳ ಆರಂಭದಿಂದಲೇ ಕೊರೊನಾ ವೈರಸ್ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದೊಂದು ವಾರದಿಂದಲೂ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಳವಾಗಿದೆ. 1 % ರಷ್ಟು ಪಾಸಿಟಿವಿಟಿ ರೇಟ್ ಒಂದೇ ವಾರದಲ್ಲಿ ಹೆಚ್ಚಳವಾಗಿರೋದು ಎರಡನೇ ಅಲೆಯ ಮುನ್ಸೂಚನೆಯನ್ನು ತೋರಿಸುತ್ತಿದೆ. ಅಲ್ಲದೇ ರಾಜ್ಯದಲ್ಲಿ ನಿತ್ಯವೂ 700 ಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗುತ್ತಿದ್ದಾರೆ.

ನೆರೆಯ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಶುರುವಾಗಿದೆ. ಇದೀಗ ರಾಜ್ಯದಲ್ಲಿಯೂ ಎರಡನೇ ಅಲೆಯ ಭೀತಿ ಶುರುವಾಗಿದೆ. ಸದ್ಯದ ಅಂಕಿಅಂಶಗಳನ್ನು ನೋಡಿದ್ರೆ ರಾಜ್ಯದಲ್ಲಿಯೂ ಎರಡನೇ ಅಲೆಯ ಸ್ಪಷ್ಟ ಮುನ್ಸೂಚನೆ ಲಭಿಸುತ್ತಿದೆ. ರಾಜ್ಯದಲ್ಲಿ ಮತ್ತೆ ಕಠಿಣ ನಿಯಮಗಳನ್ನು ಜಾರಿಗೆಯಾಗುವ ಸಾಧ್ಯತೆಯಿದೆ.

https://kannada.newsnext.live/maharastra-corona-cases-hike-lockdown/

ಸಿಎಂ ಯಡಿಯೂರಪ್ಪ ಜನರು ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಪಾಲನೆ ಮಾಡುವುದನ್ನು ಜನರು ಪಾಲಿಸಬೇಕು ಎಂದು ಹೇಳಿದ್ದಾರೆ. ಒಂದೊಮ್ಮೆ ಕೊರೊನಾ ಸೋಂಕಿತರ ಪ್ರಮಾಣ ಇನ್ನಷ್ಟು ಹೆಚ್ಚಳವಾದ್ರೆ ರಾಜ್ಯದಲ್ಲಿ ಕಠಿಣ ರೂಲ್ಸ್ ಜಾರಿಗೆ ಬರೋದು ಪಕ್ಕಾ. ಈಗಾಗಲೇ ತಡರಾತ್ರಿಯ ಪಾರ್ಟಿಗಳ ಮೇಲೆ ಸರಕಾರ ನಿಷೇಧ ಹೇರಿದ್ದು, ಶುಭ ಸಮಾರಂಭಗಳಿಗೂ ಶೇ.50ರ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ. ಎರಡನೇ ಅಲೆ ಆರಂಭವಾದ್ರೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗೋದು ಪಕ್ಕಾ.

Comments are closed.