ಕೊರೋನಾ ಎರಡನೇ ಅಲೆ….! ಸಂಕಷ್ಟದಲ್ಲಿ ಮಹಾರಾಷ್ಟ್ರ….! ಹೆಚ್ಚುತ್ತಲೇ ಇದೆ ಸೋಂಕಿತರ ಸಂಖ್ಯೆ…!

ಮಹಾರಾಷ್ಟ್ರ: ಕೊರೋನಾದಿಂದ  ತೀವ್ರ ಸಂಕಷ್ಟಕ್ಕೊಳಗಾಗಿದ್ದ ಮಹಾರಾಷ್ಟ್ರದಲ್ಲಿ ಎರಡನೇ ಅಲೆ ಕೊರೋನಾ ಅಬ್ಬರವೂ ಜೋರಾಗಿದ್ದು, ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಪ್ರಕರಣಗಳ ಪೈಕಿ ಅರ್ಧದಷ್ಟು ಪ್ರಕರಣಗಳು ಮಹಾರಾಷ್ಟ್ರದಿಂದಲೇ ವರದಿಯಾಗುತ್ತಿದೆ.

ಕೇಂದ್ರ ಆರೋಗ್ಯ ಸಚಿವಾಲಯ  ಈ ಕುರಿತು ಮಾಹಿತಿ ನೀಡಿದ್ದು, ಬುಧವಾರ 14 ಸಾವಿರ ಹಾಗೂ ಗುರುವಾರ 13 ಸಾವಿರ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿವೆ ಎಂಬ ಕಳವಳಕಾರಿ ಸಂಗತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಬಹಿರಂಗಗೊಳಿಸಿದೆ.

ಈಗಾಗಲೇ ಮಹಾರಾಷ್ಟ್ರದ ಥಾನೆ ಸೇರಿದಂತೆ ಹಲವು ಪ್ರದೇಶದಲ್ಲಿ ಮಾರ್ಚ್ 13 ರಿಂದ 31 ರವರೆಗೆ ಲಾಕ್ ಡೌನ್ ಜಾರಿಯಾಗಿದೆ. ಕೊರೋನಾ ಹರಡುತ್ತಿರುವ ಹಾಟ್ ಸ್ಪಾಟ್ ಗಳನ್ನು ಗುರುತಿಸಿ ಲಾಕ್ ಡೌನ್ ಜಾರಿ ಮಾಡಲಾಗಿದೆ. ಆದರೂ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ.

ಮಹಾರಾಷ್ಟ್ರ ಸರ್ಕಾರ ಕೊರೋನಾ ಟೆಸ್ಟ್ ಗಳನ್ನು ಕಡ್ಡಾಯಗೊಳಿಸಿಲ್ಲ ಹಾಗೂ ಟೆಸ್ಟ್ ಗಳನ್ನು ಸಮರ್ಪಕವಾಗಿ ನಡೆಸುತ್ತಿಲ್ಲ. ಅಲ್ಲದೇ ಸೋಂಕಿತರ ಹಿಸ್ಟರಿ, ಸಂಪರ್ಕಕ್ಕೆ ಬಂದವರ ಕ್ವಾರಂಟೈನ್ ಸೇರಿದಂತೆ ಯಾವುದೇ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಕೊರೋನಾ ಏರುತ್ತಿದ್ದರೂ ಜನರಿಗೆ ಅದ್ದೂರಿಯಾಗಿ ಮದುವೆ ಸೇರಿದಂತೆ ಸಮಾರಂಭ ನಡೆಸಲು ಅವಕಾಶ ನೀಡಲಾಗುತ್ತಿದೆ.

ಈ ಎಲ್ಲ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ಕೊರೋನಾ ಸಂಖ್ಯೆ ಏರುತ್ತಲೇ ಇದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಕಡ್ಡಾಯ ಲಾಕ್ ಡೌನ್ ಜಾರಿಯಾದರೂ ಅಚ್ಚರಿ ಏನಿಲ್ಲ ಎಂಬ ಮಾತು ಕೇಳಿಬರುತ್ತಿದೆ.

Comments are closed.