ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಇದೀಗ ಡ್ರಗ್ಸ್ ಡೂಪ್ ಟೆಸ್ಟ್ ವೇಳೆಯಲ್ಲಿ ಕಿರಿಕ್ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಡ್ರಗ್ಸ್ ಡೂಪ್ ಟೆಸ್ಟ್ ಮಾಡಿಸೋದಕ್ಕೆ ರೆಡಿಯಿಲ್ಲ. ನೀವು ನನ್ನನ್ನ ಬಕ್ರಾ ಮಾಡಿ ಕರೆತಂದಿದ್ದೀರಿ ಅಂತಾ ಪೊಲೀಸರಿಗೆ ಅವಾಜ್ ಹಾಕಿದ್ದಾಳೆ.

ಡ್ರಗ್ಸ್ ದಂಧೆ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ವಶದಲ್ಲಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರನ್ನು ಇಂದು ಬೆಂಗಳೂರು ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಡ್ರಗ್ಸ್ ಡೂಪ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಸಿಸಿಬಿ ಪೊಲೀಸರು ಇಬ್ಬರನ್ನೂ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆತಂದು ಡ್ರಗ್ಸ್ ಡೂಪ್ ಟೆಸ್ಟ್ ಗೆ ಒಳಪಡಿಸುವ ವೇಳೆಯಲ್ಲಿ ಸಂಜನಾ ಕಿರಿಕ್ ತೆಗೆದಿದ್ದಾಳೆ.

ನಾನು ಡ್ರಗ್ ಡೂಪ್ ಟೆಸ್ಟ್ ಮಾಡಿಸೋದಕ್ಕೆ ರೆಡಿಯಲ್ಲಾ. ನನಗೆ ಡೂಪ್ ಟೆಸ್ಟ್ ಬೇಡಾ. ಡ್ರಗ್ ಡೂಪ್ ಟೆಸ್ಟ್ ನ್ನು ವಿರೋಧಿಸುವ ಹಕ್ಕು ನನಗೆ ಇದೆ. ನೀವು ನನ್ನನ್ನ ಬಕ್ರಾ ಮಾಡಿ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿದ್ದೀರಿ. ನನಗೆ ಯಾವುದೇ ಟೆಸ್ಟ್ ಮಾಡಿಸಿಕೊಳ್ಳಲು ಇಷ್ಟವಿಲ್ಲ. ನನಗೆ ಆರೋಗ್ಯ ಸರಿಯಿಲ್ಲ ಎಂದು ಪೊಲೀಸರ ಮುಂದೆಯೇ ಕಿರಿಕ್ ತೆಗೆದಿದ್ದಾರೆ. ನನ್ನ ವಿರುದ್ದ ಯಾವುದೇ ಸಾಕ್ಷಾಧಾರಗಳು ಇಲ್ಲ. ನಾನು ಡ್ರಗ್ಸ್ ವಿಚಾರವಾಗಿ ಯಾರೊಂದಿಗೂ ಮಾತನಾಡಿಲ್ಲ ಎಂದು ಹೇಳಿದ್ದಾಳೆ.

ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಸಂಜನಾ ಆರಂಭದಿಂದಲೂ ಒಂದಿಲ್ಲೊಂದು ಕಿರಿಕ್ ತೆಗೆಯುತ್ತಳೇ ಇದ್ದಾಳೆ. ಡ್ರಗ್ಸ್ ವಿಚಾರದಲ್ಲಿ ಡೂಪ್ ಟೆಸ್ಟ್ ಮಾಡಿದ್ರೆ ಎಲ್ಲಿ ಬಂಡವಾಳ ಬಯಲಾಗುತ್ತೋ ಅನ್ನೋ ಭಯದಿಂದಲೇ ಸಂಜನಾ ವಿರೋಧಿಸುತ್ತಿದ್ದಾಳೆ ಅನ್ನೋ ಮಾತುಗಳು ಕೇಳಿಬರುತ್ತಿದೆ.