ಮಂಗಳವಾರ, ಏಪ್ರಿಲ್ 29, 2025
HomeBreakingಕುಬ್ಜನ ಜೊತೆ ಬೆಲ್ ಬಾಟಂ ಬೆಡಗಿ…! ಕೊನೆಗೂ ನನ್ನ ಆಸೆ ಈಡೇರಿತು ಎಂದ್ರು ಹರಿಪ್ರಿಯಾ…!!

ಕುಬ್ಜನ ಜೊತೆ ಬೆಲ್ ಬಾಟಂ ಬೆಡಗಿ…! ಕೊನೆಗೂ ನನ್ನ ಆಸೆ ಈಡೇರಿತು ಎಂದ್ರು ಹರಿಪ್ರಿಯಾ…!!

- Advertisement -

ಸಿನಿಮಾದಲ್ಲಿ ಎಷ್ಟೇ ಹೆಸರು ಗಳಿಸಿದ್ರೂ ನಟ-ನಟಿಯರಿಗೆ ತಮ್ಮ ಇಷ್ಟದ ಹೀರೋ ಜೊತೆ ಒಂದು ಸಿನಿಮಾ ಮಾಡಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ ಎಲ್ಲರ ಕನಸು ನನಸಾಗೋದಿಲ್ಲ. ಬೆಲ್ ಬಾಟಂ ಬೆಡಗಿ ಹರಿಪ್ರಿಯಾ ಮಾತ್ರ ತಮ್ಮ ಕನಸು ನನಸಾದ ಖುಷಿಯಲ್ಲಿದ್ದಾರೆ. ಹರಿಪ್ರಿಯಾಗೆ ಉಪ್ಪಿ ಜೊತೆ ನಟಿಸೋ ಆಸೆ ಇತ್ತಂತೆ. ಈಗ ಆ ಕನಸು ನನಸಾಗಿದೆ.

ಉಪೇಂದ್ರ ಅವರ ಜೊತೆ ಇನ್ನು ಹೆಸರಿಡದ ಚಿತ್ರವೊಂದಕ್ಕೆ ಹರಿಪ್ರಿಯಾ ನಾಯಕಿಯಾಗಿ ಆಯ್ಕೆಯಾಗಿದ್ದು, ಅವಕಾಶ ಸಿಗುತ್ತಿದ್ದಂತೆ ಹರಿಪ್ರಿಯಾ ಮರುಮಾತಿಲ್ಲದೇ ಒಪ್ಪಿಕೊಂಡಿದ್ದಾರಂತೆ. ಇದಕ್ಕೆ ಕಾರಣ ಹರಿಪ್ರಿಯಾ ಉಪೇಂದ್ರ ಜೊತೆಗೆ  ಒಂದಾದರೂ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆ ಇತ್ತಂತೆ.

ಮೊಗ್ಗಿನ ಮನಸ್ಸು, ಕೃಷ್ಣನಲವ್ ಸ್ಟೋರಿ ಸೇರಿದಂತೆ ಹಲವು ಚಿತ್ರ ನಿರ್ದೇಶಿಸಿರುವ  ಶಶಾಂಕ್ ಆಕ್ಷ್ಯನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಉಪೇಂದ್ರ, ಹರಿಪ್ರಿಯಾ ಜೊತೆ ಇನ್ನಷ್ಟು ದೊಡ್ಡದಾದ ತಾರಾಗಣ ಇರಲಿದೆ. ಸದ್ಯ ಪೆಟ್ರೋಮ್ಯಾಕ್ಸ್ ಶೂಟಿಂಗ್ ಮುಗಿಸಿರೋ ಹರಿಪ್ರಿಯಾ ಏಪ್ರಿಲ್ ನಿಂದ ಉಪ್ಪಿ ಜೊತೆ  ಶೂಟಿಂಗ್ ಆರಂಭಿಸಲಿದ್ದಾರೆ.

ಶಶಾಂಕ್ ಅವರ ಚಿತ್ರದಲ್ಲಿ ನಾಯಕಿಯರ ಪಾತ್ರಕ್ಕೆ ಪ್ರಾಧಾನ್ಯತೆ ಇರುತ್ತೆ. ಈ ಚಿತ್ರದಲ್ಲೂ ಅಷ್ಟೇ ಸುಶಿಕ್ಷಿತ ಹೆಣ್ಣುಮಗಳ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ ಎಂದಿರುವ ಹರಿಪ್ರಿಯಾ ಚಿತ್ರದ ಬಗ್ಗೆ ಹೆಚ್ಚಿನ ಡಿಟೇಲ್ಸ್ ಕೊಡದೆ ಜಾರಿಕೊಂಡಿದ್ದಾರೆ.

ಕುಬ್ಜ್ ಶೂಟಿಂಗ್ ನಲ್ಲಿರೋ ಉಪೇಂದ್ರ ಅದಾದ ಬಳಿಕ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಇದಲ್ಲದೇ ಬೆಲ್ ಬಾಟಂ -2 ದಲ್ಲೋ ನಟಿಸ್ತಿರೋ ಹರಿಪ್ರಿಯಾ ಸಾಕಷ್ಟು ಆಫರ್ ಗಳ ಮಧ್ಯೆ ಉಪ್ಪಿ ಜೊತೆಗೂ ತೆರೆ ಹಂಚಿಕೊಳ್ತಿದ್ದಾರೆ.

RELATED ARTICLES

Most Popular