ಚುನಾವಣೆಗೂ ಮುನ್ನವೇ ಅಣ್ಣಾಮಲೈಗೆ ಶಾಕ್…! ನಾಮಪತ್ರಕ್ಕೆ ತಡೆ ನೀಡಿದ ಚುನಾವಣಾ ಆಯೋಗ….!!

ತಮಿಳುನಾಡು ಚುನಾವಣೆಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಗೆಲ್ಲಿಸಲು ಸರ್ಕಸ್ ನಡೆಸಿದ್ದ ಬಿಜೆಪಿಗೆ ಶಾಕ್ ಎದುರಾಗಿದ್ದು, ಅಣ್ಣಾಮಲೈ ಸಲ್ಲಿಸಿದ್ದ ನಾಮಪತ್ರಕ್ಕೆ  ಚುನಾವಣಾ ಆಯೋಗ ತಡೆ ನೀಡಿದೆ.

ತಮಿಳುನಾಡಿನ ಕರೂರಿನ ಆರವಕುರಚಿ ಗ್ರಾಮದಿಂದ ವಿಧಾನಸಭೆಗೆ ಆಯ್ಕೆ ಬಯಸಿ ಸೈಕಲ್ ಮೇಲೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದ ಅಣ್ಣಾಮಲೈಗೆ ಚುನಾವಣಾ  ಆಯೋಗ ಶಾಕ್ ನೀಡಿದ್ದು, ತಮ್ಮ ಮೇಲಿನ ಅಪರಾಧ ಪ್ರಕರಣಗಳ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.

ಆರವಕುರಚಿಯಿಂದ ನಾಮಪತ್ರ ಸಲ್ಲಿಸಿರುವ ಅಣ್ಣಾಮಲೈ ತಮ್ಮ ವಿರುದ್ಧದ 10 ಕ್ಕೂ ಅಪರಾಧ ಪ್ರಕರಣಗಳ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿಗಳು ಆರೋಪಿಸಿದ್ದಲ್ಲದೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಆರೋಪದಡಿ  ನಾಮಪತ್ರವನ್ನು ತಡೆಹಿಡಿಯಲಾಗಿದೆ.

ಡಿಎಂಕೆಯ ಭದ್ರಕೋಟೆಯೆಂದೇ ಕರೆಯಿಸಿಕೊಳ್ಳುವ ಆರವಕುರಚಿಯಿಂದ ಅಣ್ಣಾಮಲೈ ಕಣಕ್ಕಿಳಿದಿದ್ದು, ಮಾರ್ಚ್ 18 ರಂದು ಸೈಕಲ್ ಮೇಲೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದರು.  ಅಣ್ಣಾಮಲೈಗೆ ಬೆಂಗಳೂರು ದಕ್ಷಿಣಸಂಸದ ತೇಜಸ್ವಿ ಸೂರ್ಯ ಕೂಡ ಸಾಥ್ ನೀಡಿದ್ದರು.

ಈಗ ಅಣ್ಣಾಮಲೈ ವಿರುದ್ಧ ನಾಮಪತ್ರ ಸಲ್ಲಿಸುವಾಗ ತಪ್ಪು ಮಾಹಿತಿ ನೀಡಿದ ಆರೋಪ ಕೇಳಿಬಂದಿದೆ. ಎಐಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ತಮಿಳುನಾಡಿನಲ್ಲಿ 20 ಕ್ಷೇತ್ರಗಳನ್ನು ಎಐಡಿಎಂಕೆ ನೀಡಿದ್ದು, ಅದರಲ್ಲಿ ಆರವಕುರಚಿ ಕೂಡ ಒಂದು. ಪೊಲೀಸ್ ಅಧಿಕಾರಿಯೇ ಆಗಿದ್ದ ಅಣ್ಣಾಮಲೈ ಸ್ವತಃ ಇದೀಗ ಆರೋಪಿ ಸ್ಥಾನದಲ್ಲಿ ನಿಂತಂತಾಗಿದ್ದು, ರಾಜಕೀಯದ ಅಸಲಿ ಆಟ ಆರಂಭವಾದಂತಾಗಿದೆ.

ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಕ್ಷೇತ್ರಗಳಿಗಾಗಿ ಮತದಾನ ನಡೆಯಲಿದ್ದು, ಎಐಡಿಎಂಕೆ ಬಿಜೆಪಿ ಹಾಗೂ ಡಿಎಂಕೆ ಕಾಂಗ್ರೆಸ್ ಜಂಟಿಯಾಗಿ ಚುನಾವಣೆ ಎದುರಿಸಲು ಸಿದ್ಧವಾಗಿವೆ.

Comments are closed.