ಹೊತ್ತಿದ್ದು,ಹೆತ್ತಿದ್ದು ನಾನು…! ಹೋಲಿಕೆ ಅಪ್ಪಂದು…! ಕುಟ್ಟಿಮಾ ಸ್ಟೇಟಸ್ ನಲ್ಲೂ ಫನ್ನಿ ಕಂಪ್ಲೆಂಟ್…!!

ಸಾಮಾನ್ಯವಾಗಿ ಎಲ್ಲ ಮನೆಯಲ್ಲೂ ಮಕ್ಕಳು ತಂದೆಯ ಹೋಲಿಕೆಯನ್ನೇ ಜಾಸ್ತಿ ತಂದಿರತಾರೆ. ಅದಕ್ಕೆ ಹೊತ್ತಿದ್ದು, ಹೆತ್ತಿದ್ದು ನಾನು. ಮೂರು ಹೊತ್ತು ನೋಡಿಕೊಳ್ಳೋದು ನಾನು. ಹೋಲಿಕೆ ಇರೋದು ಅಪ್ಪನ ತರ, ಮಲಗೋದು,ನಗೋದು ಎಲ್ಲ ಅಪ್ಪನ ತರನೇ ಅಂತ ತಾಯಂದಿರು ಕಂಪ್ಲೆಂಟ್ ಮಾಡ್ತಾರೆ. ಇದಕ್ಕೆ ನಟಿ ಮೇಘನಾ ರಾಜ್ ಕೂಡ ಹೊರತಲ್ಲ. ಇನ್ ಸ್ಟಾಗ್ರಾಂನಲ್ಲಿ ಕುಟ್ಟಿಮಾ ಕೂಡ ಇಂತಹುದೇ ಹುಸಿಮುನಿಸಿದ ಪೋಸ್ಟ್ ಹಾಕಿದ್ದಾರೆ.

ಮೇಘನಾರಾಜ್ ಹಾಗೂ ಚಿರಂಜೀವಿ ಸರ್ಜಾ ಹಲವು ವರ್ಷ ಪ್ರೀತಿಸಿ ಮದುವೆಯಾಗಿ ಹೊಸಬದುಕಿಗೆ ಕಾಲಿಟ್ಟಿದ್ದರು. ಆದರೆ ಮದುವೆಯಾಗಿ ಎರಡು ವರ್ಷ ಕಳೆಯೋದ್ರಲ್ಲೇ ಚಿರು ಇನ್ನಿಲ್ಲವಾಗಿದ್ದಾರೆ. ಆದರೂ ಚಿರು ಪ್ರೀತಿಯ ಕಾಣಿಕೆ ಮೇಘನಾ ಗರ್ಭದಿಂದ ಧರೆಗೆ ಬಂದಿದ್ದು, ಕುಟುಂಬದ ನೋವನ್ನು ಮರೆಸುವ ಶಕ್ತಿಯಾಗಿದೆ.

ತಂದೆಯಿಲ್ಲದ ಮಗುವನ್ನು, ತಾಯಿ-ತಂದೆ ಎರಡೂ ಆಗಿ ನೋಡಿಕೊಳ್ತಿರೋ ಮೇಘನಾ ಜ್ಯೂನಿಯರ್ ಚಿರು ಪೋಟೋ,ವಿಡಿಯೋಗಳನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ. ಅಷ್ಟೇ ಅಲ್ಲ ಮಕ್ಕಳು, ತಾಯಂದಿರ ಬಗ್ಗೆ ಇರೋ ಜೋಕ್ ಗಳನ್ನು ಹಂಚಿಕೊಳ್ಳೋದರಲ್ಲಿ ಮುಂದೇ ಇರ್ತಾರೆ.

ಈಗಲೂ ಅಷ್ಟೇ 9 ತಿಂಗಳು ಹೊತ್ತು, 12 ತಾಸು ಹೆರಿಗೆ ನೋವು ತಿಂದು, ನೂರು ತಾಸು ನಿದ್ದೆಗೆಟ್ಟು ನೋಡಿಕೊಳ್ಳೋದು ನಾನು. ನೀವು ನಿಮ್ಮ ಅಪ್ಪನಂತೆ ಮಲಗ್ತಿಯಾ ಅನ್ನೋ ಮಗು ಬಗೆಗಿನ ಫನ್ನಿ ಪೋಸ್ಟರ್ ವೊಂದನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ.

https://instagram.com/stories/megsraj/2554443509274180694?igshid=1fyo2ogn3t850

ಅಷ್ಟೇ ಅಲ್ಲ ಚಿಂಟು ಸೋ ಟ್ರೂ ಅನ್ನೋ ಕಮೆಂಟ್ ಕೂಡ ಮಾಡಿದ್ದಾರೆ. ಈಗಾಗಲೇ ಹಲವು ಭಾರಿ ಚಿರುವಿನಂತದ್ದೆ ಶರ್ಟ್ ಹಾಕಿದ ಜ್ಯೂನಿಯರ್ ಚಿರು, ತಂದೆಯಂತೆ ಬಾಕ್ಸಿಂಗ್ ಪೋಸ್ ನೀಡಿದ ಜ್ಯೂನಿಯರ್ ಚಿರುವಿನ ಪೋಟೋಗಳನ್ನು ಟ್ವಿನ್ವಿಂಗ್ ವಿತ್ ಫಾದರ್ ಎಂಬ ಟ್ಯಾಗ್ ಲೈನ್ ನಲ್ಲಿ ಮೇಘನಾ ರಾಜ್ ಹಂಚಿಕೊಂಡಿದ್ದರು.

ಈಗ ಮತ್ತೊಮ್ಮೆ ಜೋಕ್ ಹಂಚಿಕೊಳ್ಳೋ ಮೂಲಕ ಜ್ಯೂನಿಯರ್ ಚಿರು ಕೂಡ ಥೇಟ್ ಅಪ್ಪನ ಹಾಗೇ ಇದ್ದಾನೆ ಅನ್ನೋ ಸಂಗತಿಯನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿ ಎಂಜಾಯ್ ಮಾಡಿದ್ದಾರೆ. ಸದ್ಯ 5 ತಿಂಗಳು ಮುಗಿಸಿ ಆರನೇ ತಿಂಗಳಿಗೆ ಕಾಲಿಟ್ಟಿರೋ ಜ್ಯೂನಿಯರ್ ಚಿರುಗೆ ಸದ್ಯದಲ್ಲೇ ನಾಮಕರಣ ನಡೆಯಲಿದೆಯಂತೆ.

Comments are closed.