ಕನ್ನಡ ಕೋಗಿಲೆ ಮೂಲಕ ಕರ್ನಾಟಕದ ಮನೆಮಾತಾದ ಮಲ್ಲಿಗೆ ಹೂವಿನಂತ ಹೆಣ್ಣುಮಗಳು ಅಖಿಲಾ ಪಜಮಣ್ಣು ಎಂಗೇಜ್ ಆಗಿದ್ದಾರೆ.

ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಅಖಿಲಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಕನ್ನಡ ಕೋಗಿಲೆ ಸೀಸನ್ ೧ ಹಾಗೂ ೨ ರ ರನ್ನರ್ ಅಪ್ ಆಗಿರುವ ಅಖಿಲಾ ತಮ್ಮ ಸುಮಧುರ ಕಂಠ ಹಾಗೂ ಮುಗ್ಧ ಸೌಂದರ್ಯದಿಂದ ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಅಖಿಲಾ ಸದ್ಯ ಕಿರುತೆರೆಯಲ್ಲಿ ಪ್ರಸಾರವಾಗೋ ಮುಂಜಾನೆ ರಾಗ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರೋ ಅಖಿಲಾ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

ಧನಂಜಯ ಶರ್ಮಾ ಎಂಬುವವರ ಜೊತೆ ಅಖಿಲಾ ಪಜಮಣ್ಣು ಸಪ್ತಪದಿ ತುಳಿಯಲಿದ್ದಾರೆ.

ಧನಂಜಯ ಶರ್ಮ ಸಾಫ್ಟವೇರ್ ಇಂಜೀನಿಯರ್ ಆಗಿದ್ದು, ಸಧ್ಯ ಕಂಪನಿ ಕೆಲಸದ ನಿಮಿತ್ತ ವಿದೇಶದಲ್ಲಿದ್ದಾರೆ ಎನ್ನಲಾಗಿದೆ. ಅಖಿಲಾ ಕನ್ನಡ ಕೋಗಿಲೆ ಬಳಿಕ ಹಲವು ವಿಡಿಯೋ ಸಾಂಗ್ ಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು.