ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ ವಿಕ್ರಾಂತ್ ರೋಣ…! ಇಂಗ್ಲೀಷ್ ಸೇರಿ 6 ಭಾಷೆ ಪೋಸ್ಟರ್ ರಿಲೀಸ್…!!

ವಿಕ್ರಾಂತ್ ರೋಣ ಸದ್ಯ ಮನೆಮಾತಾದ ಹೆಸರು. ಫ್ಯಾಂಟಮ್ ನಿಂದ ವಿಕ್ರಾಂತರೋಣ ಅವತಾರ ನೀಡಿದ ಚಿತ್ರ ಈಗ ಆರು ಭಾಷೆಯ ಪೋಸ್ಟರ್ ರಿಲೀಸ್ ಮಾಡಿದೆ.

ದುಬೈನಲ್ಲಿ ವಿಕ್ರಾಂತ್ ರೋಣ ಬಗ್ಗೆ ವಿವರಣೆ ನೀಡುವ ವೇಳೆ ಕಿಚ್ಚಸುದೀಪ್ ಇದು ಪ್ಯಾನ್ ಇಂಡಿಯಾ ಸಿನಿಮಾವಲ್ಲ ಬದಲಾಗಿ ಪ್ಯಾನ್ ವರ್ಲ್ಡ್ ಸಿನಿಮಾ ಎಂದಿದ್ದರು.

ಈ ಮಾತು ನಿಜವಾಗಿದೆ. ವರ್ಲ್ಡ್ ಲ್ಯಾಂಗ್ವೇಜ್ ಎಂದು ಕರೆಯಿಸಿಕೊಳ್ಳೋ ಇಂಗ್ಲೀಷ್ ನಲ್ಲೂ ವಿಕ್ರಾಂತ್ ರೋಣ ಪೋಸ್ಟರ್ ರಿಲೀಸ್ ಆಗಿದೆ.‌ ಸುದೀಪ್ ಪೋಸ್ಟರ್ ಜೊತೆ ಟ್ವೀಟ್ ಮಾಡಿದ್ದಾರೆ.

ಸಪ್ಟೆಂಬರ್ ವೇಳೆಗೆ ತೆರೆಗೆ ಬರಲಿರುವ ವಿಕ್ರಾಂತ್ ರೋಣ ಒಟ್ಟು ೧೧ ಭಾಷೆಯಲ್ಲಿ ತೆರೆಗ ಬರಲಿದೆ ಎನ್ನಲಾಗಿದೆ. ಈ ಪೈಕಿ ಕನ್ನಡ,ಹಿಂದಿ,ಇಂಗ್ಲೀಷ್, ಮಲೆಯಾಳಂ ,ತಮಿಳು,ತೆಲುಗು ಪೋಸ್ಟರ್ ರಿಲೀಸ್ ಆಗಿದೆ.

ಈ ಹಿಂದೆಯೇ ಬಹು ಭಾಷೆಯಲ್ಲಿ ಸಿನಿಮಾ ತೆರೆಗೆ ತರೋದಾಗಿ ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದರು. ಈಗ ಇದರ ಮೊದಲ ಹಂತವಾಗಿ ಚಿತ್ರತಂಡ ೬ ಭಾಷೆಯಲ್ಲಿ ಪೋಸ್ಟರ್ ಬಿಟ್ಟಿದೆ.

ಜ.೩೧ ರಂದು ದುಬೈನ ಎತ್ತರದ ಕಟ್ಟಡ ಬುರ್ಜ್ ಖಲೀಫಾ ದಲ್ಲಿ ವಿಕ್ರಾಂತ್ ರೋಣ ಲೋಗೋಲಾಂಚ್ ನಡೆದಿದ್ದು, ಸುದೀಪ್ ಕಟೌಟ್ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಇನ್ನು ಹಾಲಿವುಡ್ ತಂತ್ರಜ್ಞರನ್ನು ಒಳಗೊಂಡ ಚಿತ್ರತಂಡ ಶೂಟಿಂಗ್ ಮುಗಿಸಿದ್ದು, ೩ ಹಾಡುಗಳ ಶೂಟಿಂಗ್ ಮುಗಿಸಿ ಚಿತ್ರತಂಡ ಸಪ್ಟೆಂಬರ್ ವೇಳೆಗೆ ಚಿತ್ರವನ್ನು ತೆರೆಗೆ ತರೋ ಸಾಧ್ಯತೆ ಇದೆ.

Comments are closed.