ಸೋಮವಾರ, ಏಪ್ರಿಲ್ 28, 2025
HomeBreakingನಿಧಿ ಸುಬ್ಬಯ್ಯ ಹಿಂದೆ ಬಿದ್ದಿದ್ರಾ ಯಶ್…!? ಬಿಗ್ ಬಾಸ್ ಮನೆಯಲ್ಲಿ ಬಯಲಾದ ಸತ್ಯವೇನು?!

ನಿಧಿ ಸುಬ್ಬಯ್ಯ ಹಿಂದೆ ಬಿದ್ದಿದ್ರಾ ಯಶ್…!? ಬಿಗ್ ಬಾಸ್ ಮನೆಯಲ್ಲಿ ಬಯಲಾದ ಸತ್ಯವೇನು?!

- Advertisement -

ಬಿಗ್ ಬಾಸ್ ಮನೆ ಅನ್ನೋದು ಒಂಥರಾ ಪವಾಡಗಳನ್ನು ಬಯಲು ಮಾಡೋ ಕಾರ್ಯಕ್ರಮವಿದ್ದಂತೆ. ಬೇಕೋ ಬೇಡವೋ ಒಳಗಿರೋ ಸ್ಪರ್ಧಿಗಳು ಬಿಚ್ಚಿಡೋ ಕತೆಗಳು ಕೆಲವೊಮ್ಮೆ ಹೊರಗಿರೋ ಸೆಲಿಬ್ರೆಟಿಗಳ ಬದುಕನ್ನು ಪ್ರಶ್ನಿಸುವಂತೆ ಮಾಡಿಬಿಡುತ್ತೆ. ತಮ್ಮ ಕೋಣೆಗೆ ಪಟಾಕಿ ಎಸೆಯೋ ಕತೆ ಹೇಳಿದ ನಟಿ ನಿಧಿ ಸುಬ್ಬಯ್ಯ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಾಕಷ್ಟು ಕಾಲದಿಂದ ಅವಕಾಶಗಳಿಲ್ಲದೇ ಸೈಲೆಂಟ್ ಆಗಿದ್ದ ನಟಿ ನಿಧಿ ಸುಬ್ಬಯ್ಯ, ಅಷ್ಟೇ ಸೈಲೆಂಟ್ ಆಗಿ ಬಿಗ್ ಬಾಸ್ ಮನೆ ಸೇರಿದ್ದಾರೆ. ಆದರೆ ಒಳಗೆ ಹೋದ ನಿಧಿ ತೆರೆದಿಟ್ಟ ವಿಚಾರವೊಂದು ಹೊರಗಿರೋ ರಾಕಿಂಗ್ ಸ್ಟಾರ್ ಯಶ್ ನೆಮ್ಮದಿ ಕೆಡಿಸೋದು ಪಕ್ಕಾ ಎನ್ನಲಾಗ್ತಿದೆ.

ಬಿಗ್ ಬಾಸ್ ಮನೆಯಲ್ಲಿ ತಮ್ಮ ಓದು ಹಾಗೂ ಕಾಲೇಜ್ ದಿನಗಳನ್ನು ನೆನಪಿಸಿಕೊಂಡ ನಿಧಿ ಸುಬ್ಬಯ್ಯ, ನಾನು ಮೈಸೂರಿನ ತಾತನ ಮನೆಯಲ್ಲಿದ್ದೆ. ಅಲ್ಲಿಗೇ ವ್ಯಾಲೆಂಟೇನ್ ಡೇ ಸಮಯದಲ್ಲಿ ರಾಶಿ ರಾಶಿ ಗುಲಾಬಿ ಹೂಗಳು ಬರುತ್ತಿದ್ದವು. ಇದರಿಂದ ನನಗೆ ಕಿರಿ ಕಿರಿಯಾಗುತ್ತಿತ್ತು ಎನ್ನೋ ಮೂಲಕ ತಾವೆಷ್ಟು ಫೇಮಸ್ ಅನ್ನೋದನ್ನು ಹೇಳಿಕೊಳ್ಳೋ ಪ್ರಯತ್ನ ಮಾಡಿದರು.

ಅಷ್ಟೇ ಅಲ್ಲ ಒಮ್ಮೆ ಒಂದಿಷ್ಟು ಹುಡುಗರು ಬೈಕ್ ನಲ್ಲಿ ಬಂದು ನನ್ನನ್ನು ಹೆದರಿಸೋಕೆ ನನ್ನ ಕೋಣೆ ಬಳಿ ಪಟಾಕಿ ಮಾಲೆ ಎಸೆದು ಹೋಗಿದ್ದರು. ಆದರೆ ಅದು ನನ್ನ ಕೋಣೆಯಾಗಿರಲಿಲ್ಲ. ಬದಲಾಗಿ ತಾತನ ಕೋಣೆಯಾಗಿತ್ತು. ಈ ಕಿಡಿಗೇಡಿ ಕೃತ್ಯದಲ್ಲಿ ತಾತನ ಕೋಣೆಯ ಕರ್ಟನ್ ಸುಟ್ಟು ಹೋಗಿತ್ತು ಎಂದರು.

ನಾನು ಆಘಟನೆಯನ್ನು ಮರೆತು ಬಿಟ್ಟಿದ್ದೆ. ಆದರೆ ಸ್ಯಾಂಡಲ್ ವುಡ್ ಗೆ ಬಂದ ಮೇಲೆ ಸ್ಟೇಜ್ ಶೋ ಒಂದರ ಸಮಯದಲ್ಲಿ ನನ್ನ ಬಳಿ ಬಂದ ಸೆಲಿಬ್ರೆಟಿಯೊಬ್ಬರು ಪಟಾಕಿ ಘಟನೆ ನೆನಪಿಸಿದರು. ಅಷ್ಟೇ ಅಲ್ಲ ಅದನ್ನು ಮಾಡಿದ್ದು ನಾವೇ ಎಂದು ಸ್ಸಾರಿ ಕೇಳಿದರು ಎಂದು ಹಳೆ ಘಟನೆ ಹಂಚಿಕೊಂಡಿದ್ದಾರೆ.

 ಈ ಘಟನೆ ಹಂಚಿಕೊಳ್ಳೋ ಭರದಲ್ಲಿ ನಿಧಿ ಸುಬ್ಬಯ್ಯ ಯಶ್ ಪಟಾಕಿ ಎಸೆದವರು ಹಾಗೂ ಸ್ಸಾರಿ ಕೇಳಿದವರು ಎಂದು ಹೇಳಿಕೊಂಡಿರೋದರಿಂದ  ಆ ದಿನಗಳಲ್ಲಿ ಯಶ್ ನಿಧಿ ಸುಬ್ಬಯ್ಯ ಹಿಂದೆ ಬಿದ್ದಿದ್ರಾ ಅನ್ನೋ ಪ್ರೇಕ್ಷಕರಿಗೆ, ವೀಕ್ಷಕರಿಗೆ ಸೃಷ್ಟಿಯಾಗಿದೆ.

ರಾಕಿಂಗ್ ಸ್ಟಾರ್ ಯಶ್ ಈಗ ದೇಶದಲ್ಲೇ ಫೇಮಸ್. ಹೀಗಾಗಿ ಇಂಥ ಫೇಮಸ್ ಸ್ಟಾರ್ ಒಂದು ಕಾಲದಲ್ಲಿ ನನ್ನ ಹಿಂದೆ ಬಿದ್ದಿದ್ದರು ಎನ್ನೋ ಮೂಲಕ ನಿಧಿ ಸುಬ್ಬಯ್ಯ ರಾಕಿಂಗ್ ಸ್ಟಾರ್ ಯಶ್ ಸಂಸಾರದಲ್ಲಿ ಹುಳಿ ಹಿಂಡಲು ಹಾಗೂ ಸ್ಕೋಪ್ ಪಡೆಯಲು ಯತ್ನಿಸುತ್ತಿದ್ದಾರೆ ಅಂತ ಯಶ್ ಅಭಿಮಾನಿಗಳು ನಿಧಿ ವಿರುದ್ಧ ತಿರುಗಿಬಿದ್ದಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಆರಂಭವಾದ ಎರಡು-ಮೂರು ದಿನದಲ್ಲಿ ಹಲವು ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Most Popular