Megha shetty: ಜೊತೆ ಜೊತೆಯಲಿ ಪಯಣ ಅರ್ಧಕ್ಕೆ ನಿಲ್ಲಿಸಿದ್ರಾ ಅನುಸಿರಿಮನೆ…?! ಮೇಘಾ ಶೆಟ್ಟಿ ಹೇಳಿದ್ದೇನು ಗೊತ್ತಾ?!

ಕನ್ನಡ ಕಿರುತೆರೆ ಲೋಕದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ. ತಮ್ಮ ಮುಗ್ಧ ಮುಖ ಹಾಗೂ ಸರಳ ಅಭಿನಯದ ಮೂಲಕ ಧಾರಾವಾಹಿಗೆ ಜೀವ ತುಂಬಿದ ನಟಿ ಮೇಘಾ ಶೆಟ್ಟಿ. ಆದರೆ ಈಗ ಅನುಸಿರಿಮನೆ ಪಾತ್ರಧಾರಿ ಮೇಘಾ ಶೆಟ್ಟಿ ಸೀರಿಯಲ್ ತೊರೆಯಲಿದ್ದಾರೆ ಅನ್ನೋ ಮಾತು ಕೇಳಿಬರಲಾರಂಭಿಸಿದ್ದು, ಈ ಸುದ್ದಿಗೆ ಸ್ವತಃ ಮೇಘಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸದ್ದು ಮಾಡುತ್ತಿರುವ ಜೊತೆ ಜೊತೆಯಲಿ ಸೀರಿಯಲ್ ಕುರಿತ ಗಾಸಿಪ್ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಲೈವ್ ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಎಲ್ಲಾ ಕುಟುಂಬದಲ್ಲೂ ಇರುವಂತೆ ನಮ್ಮ ಜೊತೆ ಜೊತೆಯಲಿ ಸೀರಿಯಲ್ ಕುಟುಂಬದಲ್ಲೂ ಸಣ್ಣ ಭಿನ್ನಾಭಿಪ್ರಾಯ ಉಂಟಾಗಿತ್ತು.

https://www.youtube.com/watch?v=JvHDuZx2BLQ

ಅದರಿಂದಾಗಿ ನಾನು ಜೊತೆ ಜೊತೆಯಲಿ ಸೀರಿಯಲ್ ತೊರೆಯುತ್ತಿದ್ದೇನೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದು ಸುಳ್ಳು. ನಾನು ಜೊತೆ ಜೊತೆಯಲಿ ಸೀರಿಯಲ್  ನಿಂದ ಹೊರಬಂದಿಲ್ಲ.

ಚಿಕ್ಕಪುಟ್ಟ ಗೊಂದಲ ಸೃಷ್ಟಿಯಾಗಿದ್ದು, ಅದು ಈಗ ಕ್ಲಿಯರ್ ಆಗಿದೆ. ಹೀಗಾಗಿ ಇನ್ಮುಂದೆ ಜೊತೆ ಜೊತೆಯಲಿ ಸೀರಿಯಲ್ ಮುಗಿಯುವರೆಗೂ ನಾನು ಈ ಧಾರಾವಾಹಿಯಲ್ಲಿ ನಟಿಸುತ್ತೇನೆ ಎಂದಿದ್ದಾರೆ.

ಅಲ್ಲದೇ ತನ್ನನ್ನು ಸದಾ ಪ್ರೋತ್ಸಾಹಿಸುವ ಜಗದೀಶ್ ಆಲೂರು ಹಾಗೂ ಸೀರಿಯಲ್ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.

ಒಟ್ಟಿನಲ್ಲಿ ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ಬರೋ ಸುದ್ದಿ ಕೇಳಿ ಕೆಲ ದಿನಗಳಿಂದ ಬೇಸರಗೊಂಡಿದ್ದ ಪ್ರೇಕ್ಷಕರಿಗೆ ಈಗ ಸಮಾಧಾನ ಆಗಿದ್ದು, ಅನು ಸಿರಿಮನೆ ಹಾಗೂ ಆರ್ಯ್ ಮದುವೆ ಕಣ್ತುಂಬಿಕೊಳ್ಳೋಕೆ ಪ್ರೇಕ್ಷಕರು ಸಿದ್ಧವಾಗುತ್ತಿದ್ದಾರೆ.  

Comments are closed.