ಕೆಜಿಎಫ್ -2 ಅಂಗಳದಿಂದ ಹೊರಬಿತ್ತು ಶಾಕಿಂಗ್ ನ್ಯೂಸ್….! ಸಿನಿಮಾ ರಿಲೀಸ್ ಗೆ ಕಾದಿದ್ದ ಅಭಿಮಾನಿಗಳಿಗೆ ನಿರಾಸೆ…!!

ಕಳೆದ ಎರಡು ವರ್ಷದಿಂದ ದೇಶ ಹಾಗೂ ವಿದೇಶದಲ್ಲಿ ಸ್ಯಾಂಡಲ್ ವುಡ್ ಚರ್ಚೆಗೀಡಾಗುವಂತೆ ಮಾಡಿದ ಸಿನಿಮಾ ಕೆಜಿಎಫ್. ಮೊದಲ ಸಿನಿಮಾದಂತೆ ಕೆಜಿಎಫ್-2 ಕೂಡಾ ರಿಲೀಸ್ ಗೆ ಮುನ್ನವೇ ಸಾಕಷ್ಟು  ಸುದ್ದಿ ಮಾಡಿದೆ. ಆದರೆ ಇನ್ನೇನು ತೆರೆಗೆ ಬರಬೇಕಿದ್ದ ಸಿನಿಮಾ ರಿಲೀಸ್ ಅನಿರ್ದಿಷ್ಟ ಅವಧಿಗೆ ಮುಂದೂಡಿಕೆಯಾಗಲಿದೆ ಅನ್ನೋ ಶಾಕಿಂಗ್ ಸುದ್ದಿ ಹೊರಬಿದ್ದಿದೆ.

ಜುಲೈ 16 ರಂದು ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್-2  ಭಾರತ ಸೇರಿದಂತೆ ವಿಶ್ವದಾದ್ಯಂತ ಒಟ್ಟು 5 ಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆ ಕಾಣಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಭಾರತದ ಹಲವು ರಾಜ್ಯಗಳು ಹಾಗೂ ವಿಶ್ವದ ಹಲವು ರಾಷ್ಟ್ರಗಳು ಮನೋರಂಜನಾ ಕ್ಷೇತ್ರಗಳನ್ನು ಸಂಪೂರ್ಣ ಲಾಕ್ ಮಾಡಿದೆ.

https://kannada.newsnext.live/sanitizer-use-produce-drinks-arrest-6-persons-chennai/

ಮೂಲಗಳ ಮಾಹಿತಿ ಪ್ರಕಾರ ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ಅಗಸ್ಟ್ ವರೆಗೂ ಚಿತ್ರಮಂದಿರಗಳ ಮೇಲಿನ ನಿರ್ಬಂಧ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಕೆಜಿಎಫ್-2 ಇನ್ನೊಂದು ನಾಲ್ಕು ತಿಂಗಳು ರಿಲೀಸ್ ಆಗೋ ಸಾಧ್ಯತೆಯೇ ಇಲ್ಲ.

ಕೊರೋನಾ ಎರಡನೇ ಅಲೆಯ ಕಾರಣಕ್ಕೆ ಈಗಾಗಲೇ ಮನೋರಂಜನಾ ಕ್ಷೇತ್ರದ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿದೆ. ಹೀಗಾಗಿ ಕೆಜಿಎಫ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಸ್ಥಗಿತಗೊಂಡಿದೆ.

https://kannada.newsnext.live/bangalore-police-corona-vaccine-free-sale-dr-pushpeetha-arrest/

ಅಲ್ಲದೇ ಚಿತ್ರತಂಡ ಚಿತ್ರದ ಪ್ರಮೋಶನ್ ಗಾಗಿ ದೊಡ್ಡ ಮಟ್ಟದ ಪ್ಲ್ಯಾನ್ ಮಾಡಿದ್ದು, ಇವೆಲ್ಲವನ್ನು ಮುಗಿಸಿಕೊಂಡು ಚಿತ್ರ ರಿಲೀಸ್ ಮಾಡೋ ಪ್ಲ್ಯಾನ್ ನಲ್ಲಿದೆ. ಹೀಗಾಗಿ ಕೆಜಿಎಫ್-2 ಚಿತ್ರ ರಿಲೀಸ್ ಸಧ್ಯಕ್ಕಿಲ್ಲ ಎನ್ನಲಾಗಿದ್ದು, ಅಭಿಮಾನಿಗಳಿಗೆ ತೀವ್ರ ನಿರಾಸೆ ಎದುರಾಗಿದೆ.

Comments are closed.