ಭಾನುವಾರ, ಏಪ್ರಿಲ್ 27, 2025
HomeBreakingನಟನೆ ಬಳಿಕ ಹೊಸ ಸಾಹಸಕ್ಕೆ ಸೈ ಎಂದ ಯಶ್…! ಅಭಿಮಾನಿಗಳಿಗೆ ಕಾದಿದೆ ಮತ್ತಷ್ಟು ಸರ್ಪ್ರೈಸ್ …!!

ನಟನೆ ಬಳಿಕ ಹೊಸ ಸಾಹಸಕ್ಕೆ ಸೈ ಎಂದ ಯಶ್…! ಅಭಿಮಾನಿಗಳಿಗೆ ಕಾದಿದೆ ಮತ್ತಷ್ಟು ಸರ್ಪ್ರೈಸ್ …!!

- Advertisement -

ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ನದ್ದೇ ಹವಾ. ಬಿಡುಗಡೆಯಾದ ಗಂಟೆಗಳಲ್ಲೇ ಲೈಕ್ಸ್ ಮೂಲಕ ವಿಶ್ವದಾಖಲೆ ನಿರ್ಮಿಸಿರುವ ಕೆಜಿಎಫ್-2 ಟೀಸರ್ ಇನ್ನಷ್ಟು ದಾಖಲೆಗಳನ್ನು ನಿರ್ಮಿಸುತ್ತ ಸಾಗಿದೆ. ಈ ಮಧ್ಯೆ ಕೆಜಿಎಫ್-2 ರಿಲೀಸ್ ಮುನ್ನವೇ ಯಶ್ ಅಖಾಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.

ಸ್ಯಾಂಡಲ್ ವುಡ್ ಸೇರಿದಂತೆ ಈಗ ಫ್ಯಾನ್ ಇಂಡಿಯಾ ಸ್ಟಾರ್ ಆಗಿರೋ ಯಶ್ ಓಡುವ ಕುದುರೆ. ಕೆಜಿಎಫ್-2 ಸೃಷ್ಟಿಸಿರೋ ಹವಾದಿಂದ ಬಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗದಿಂದಲೂ ಯಶ್ ಗೆ ಸಖತ್ ಬೇಡಿಕೆ ಇದೆ. ಹೀಗಾಗಿ  ಯಶ್ ಇನ್ಮುಂದೆ ಸಾಲು-ಸಾಲು ಚಿತ್ರಗಳಲ್ಲಿ ಅದರಲ್ಲೂ ಫ್ಯಾನ್ ಇಂಡಿಯಾ ಸಿನಿಮಾಗಳಲ್ಲೇ ತೊಡಗಿಸಿಕೊಂಡ್ರು ಅಚ್ಚರಿಯೇನಿಲ್ಲ.

ಹೀಗೆ ಯಶ್ ಅಭಿಮಾನಿಗಳಿಗೆ 2021 ಆರಂಭದಲ್ಲೇ ಬಂಪರ್ ಖುಷಿ ಸಿಕ್ಕಿರುವಾಗಲೇ ಇನ್ನೊಂದು ಸಖತ್ ಬ್ರೇಕಿಂಗ್ ಯಶ್ ಅಡ್ಡಾದಿಂದ ಬಂದಿದೆ. ನಟ ಯಶ್ ಪ್ರಮೋಶನ್ ಪಡೆಯಲಿದ್ದಾರಂತೆ.

ಹೌದು ನಟನೆಯಿಂದ ನಿರ್ದೇಶನಕ್ಕೆ ಇಳಿಯೋದು ಸಹಜ. ಆದರೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರೋ ಯಶ್ ನಿರ್ಮಾಪಕರಾಗಲಿದ್ದಾರಂತೆ.

 ಈ ವಿಚಾರವನ್ನು  ಸ್ವತಃ ಯಶ್ ಆಪ್ತರೇ ಖಚಿತಪಡಿಸುತ್ತಿದ್ದು, ಇನ್ನು ಮುಂದೇ ಯಶ್ ತಮ್ಮ ಚಿತ್ರಗಳನ್ನು ಸ್ವಂತ ಬ್ಯಾನರ್ ನಲ್ಲಿ ನಿರ್ಮಿಸಲು ನಿರ್ಧರಿಸಿದ್ದಾರಂತೆ. ಕೆಜಿಎಫ್-2 ರಿಲೀಸ್ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಎಲ್ಲ ಅಂದುಕೊಂಡಂತೆ ಆದರೇ ಯಶ್ ಇನ್ಮುಂದೆ ತಮ್ಮ ಎಲ್ಲ ಚಿತ್ರವನ್ನು ತಾವೇ ನಿರ್ಮಿಸಿಕೊಳ್ಳಲಿದ್ದಾರಂತೆ.

ಯಶ್ ಮಫ್ತಿ ನಿರ್ದೇಶಕ ನರ್ತನ್ ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದ್ದು, ಅದನ್ನು ಹೊರತುಪಡಿಸಿದ್ರೆ ಕಿರಾತಕ-2 ಹಾಗೂ ರಾಣಾ ಸಿನಿಮಾಗಳು ಯಶ್ ಬಳಿ ಇದೆ.

ಕೆಜಿಎಫ್-2 ಇನ್ನು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸಿನಿಮಾ ರಿಲೀಸ್ ಆದ ಮೇಲೆ ಯಶ್  ತೀರ್ಮಾನ ಹೊರಬೀಳಲಿದೆ.

RELATED ARTICLES

Most Popular