ದೇಶದ ಸಿನಿಪ್ರಿಯರು ಕಾತುರರಾಗಿ ಕಾಯ್ತಿರೋ ಕೆಜಿಎಫ್-೨ ಶೂಟಿಂಗ್ ಮುಗಿದಿದೆ. ಅಷ್ಟೇ ಯಾಕೆ ಟೀಸರ್ ರಿಲೀಸ್ ಡೇಟ್ ಕೂಡ ಫೈನಲ್ ಆಗಿದೆ. ಆದರೆ ಶೂಟಿಂಗ್ ಅಂತ ಮನೆ ಬಿಟ್ಟ ಹೀರೋ ಮಾತ್ರ ಇನ್ನೂ ಮನೆ ಸೇರಿಲ್ಲ.

ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್-೨ ಸಾಕಷ್ಟು ಕುತೂಹಲ ಗಳನ್ನು ಹುಟ್ಟುಹಾಕಿದೆ. ಅಷ್ಟೇ ಅಲ್ಲ ಚಿತ್ರ ಶೂಟಿಂಗ್ ಆರಂಭವಾದಾಗಿ ನಿಂದ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗ್ತಿದೆ. ಸಧ್ಯ ಶೂಟಿಂಗ್ ಮುಗಿದಿದ್ದು,ಕ್ಲೈಮ್ಯಾಕ್ಸ್ ನಲ್ಲಿ ಸಂಜಯ್ ದತ್ ಮತ್ತು ಯಶ್ ನಡುವಿನ ಫೈಟ್ ಸೀನ್ ಶೂಟ ಮಾಡಿದ ತಂಡ ವರ್ಕ್ ಎಂಡಿಂಗ್ ಸೆಲ್ಫಿ ಕೂಡ ಶೇರ್ ಮಾಡಿದೆ.

ಇಷ್ಟೆಲ್ಲ ಬ್ಯುಸಿ ಶೆಡ್ಯೂಲ್ ಮುಗಿಸಿ ಎಲ್ಲರೂ ಮನೆಗೆ ತೆರಳಿದ್ದರೇ, ರಾಕಿಂಗ್ ಸ್ಟಾರ್ ಯಶ್ ಮಾತ್ರ ಮನೆಗೆ ಹೋಗಿ ಮನೆಲಿರೋ ಮುದ್ದಾದ ಮಕ್ಕಳು ಹೆಂಡತಿ ಜೊತೆ ಸಮಯ ಕಳೆಯೋದು ಬಿಟ್ಟು ನಗರದ ಐಷಾರಾಮಿ ಹೊಟೇಲ್ ಸೇರಿದ್ದಾರಂತೆ.

ಇದಕ್ಕೆ ಕಾರಣ ಭಯ. ಯಶ್ ಕೆಜಿಎಫ್-೨ ಶೂಟಿಂಗ್ ಗಾಗಿ ಹೈದ್ರಾಬಾದ್ ಗೆ ತೆರಳಿದ್ದರು. ಅಲ್ಲಿ ಶೂಟಿಂಗ್, ಫೈಟ್,ಕ್ಲ್ಯೈಮ್ಯಾಕ್ಸ್ ಅಂತೆಲ್ಲ ಪ್ರತಿನಿತ್ಯ ನೂರಾರು ಜನರನ್ನು ಭೇಟಿ ಮಾಡಿದ್ದಾರೆ ಒಡನಾಡಿದ್ದಾರೆ. ಹೀಗಾಗಿ ಯಶ್ ಗೆ ಕೊರೋನಾ ಭೀತಿ ಎದುರಾಗಿದೆ.

ಮನೆಯಿಂದ ಹೊರಗಿರುವ ನಾನು ಮನೆಗೆ ಹೋಗಿ ಮಕ್ಕಳಿಗೆ ಮತ್ತು ವಯಸ್ಸಾದ ತಾಯಿ-ತಂದೆಯವರಿಗೆ ಈ ರೋಗ ಹತ್ತಿಸೋ ಬದಲು ಹೊಟೇಲ್ ನಲ್ಲೇ ಒಂದಿಷ್ಟು ದಿನ ಇದ್ದು ಹೋಗೋ ನಿರ್ಧಾರಕ್ಕೆ ಬಂದಿದ್ದಾರಂತೆ.

ಈಗಾಗಲೇ ಒಮ್ಮೇ ಯಶ್ ಕೊರೋನಾ ಟೆಸ್ಟ್ ಮಾಡಿಸಿದ್ದು ರಿಪೋರ್ಟ್ ನೆಗೆಟಿವ್ ಬಂದಿದೆ. ಆದರೂ ಇನ್ನು ೧೪ ದಿನಗಳ ಕಾಲ ಹೊಟೇಲ್ ನಲ್ಲೇ ಇದ್ದು ಬಳಿಕ ಮತ್ತೆ ಪರೀಕ್ಷೆ ಮಾಡಿಸಿಕೊಂಡು ಮನೆಗೆ ತೆರಳೋ ಚಿಂತನೆಯಲ್ಲಿದ್ದಾರಂತೆ ಯಶ್.

ಅಷ್ಟೇ ಅಲ್ಲ ಈಗ ಮನೆಗೆ ಹೋದರು ಕೆಜಿಎಫ್-2 ಗೆ ಸಂಬಂಧಿಸಿದ ಕೆಲಸಗಳಿಗೆ ಆಗಾಗ ಹೊರಗೆ ಬರಲೇ ಬೇಕು. ಹೀಗಾಗಿ ಎಲ್ಲ ಕೆಲಸ ಮುಗಿಸಿ ಮನೆ ಸೇರೋ ಪ್ಲ್ಯಾನ್ ಅಲ್ಲಿದ್ದಾರೆ ಯಶ್.