ನನ್ನ ತಾಳ್ಮೆ ಗೂ ಮಿತಿ ಇದೆ…! ದಯವಿಟ್ಟು ನಿಲ್ಲಿಸಿ…! ಮೇಘನಾ ರಾಜ್ ಈ ಆಕ್ರೋಶ ಕ್ಕೆ ಕಾರಣ ಏನು ಗೊತ್ತಾ..?!

ಕೆಲವೊಮ್ಮೆ ಸೆಲಿಬ್ರೆಟಿಗಳ ಬದುಕಿಗೆ ಮೂರು ಹೊತ್ತು ಕ್ಯಾಮರಾ ತೂರಿಸುವ ಪ್ರವೃತ್ತಿ ತೋರೋ ಮಾಧ್ಯಮಗಳಿಂದ ನಟ-ನಟಿಯರು ಗರಂ ಆಗೋದು ಸಹಜ. ಈಗ ಈ ಸಾಲಿಗೆ ನಟಿ ಮೇಘನಾರಾಜ್ ಸೇರಿದ್ದಾರೆ. ತಮ್ಮ ಮಗುವಿನ ಬಗ್ಗೆ ಬರ್ತಿರೋ ಸುಳ್ಳು ಸುದ್ದಿಗಳು ಮೇಘನಾ ರಾಜ್ ರೊಚ್ಚಿಗೆಬ್ಬಿಸಿವೆ.

ಮೇಘನಾ ರಾಜ್ ಐದು ತಿಂಗಳ ಗರ್ಭಿಣಿಯಾಗಿದ್ದಾಗ ದುರದೃಷ್ಟವಶಾತ್ ಚಿರುವನ್ನು ಕಳೆದುಕೊಂಡರು. ಆದರೂ ಮಗುವಿಗಾಗಿ ಎಲ್ಲ ನೋವು ಸಹಿಸಿಕೊಂಡು ನಗು ನಗುತ್ತ ಬಂದ ಮೇಘನಾ ರಾಜ್ ಸರ್ಜಾ ಅಕ್ಟೋಬರ್ 22 ರಂದು ಗಂಡು ಮಗುವಿಗೆ ಜನ್ಮನೀಡಿದ್ದಾರೆ.

ಥೇಟ್ ಚಿರುವಿನಂತೆ ಇರೋ ಮಗುವನ್ನು ನೋಡಿಕೊಳ್ಳುತ್ತ ಅವನ ಲಾಲನೆ-ಪಾಲನೆಯಲ್ಲಿ ದಿನದೂಡ್ತಿರುವ ಮೇಘನಾ ರಾಜ್ ಗೆ ಇತ್ತೀಚಿಗೆ ಮಾಧ್ಯಮಗಳೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹೌದು ಒಂದಾದ ಮೇಲೊಂದು ಸುಳ್ಳು ಸುದ್ದಿಗಳು, ಬೇರೆ ಬೇರೆ ಮಗುವಿನ ಪೋಟೋ ವಿಡಿಯೋಗಳನ್ನು ಚಿರ ಮಗು ಎಂದು ಹೇಳಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡೋದು.

ಕೊರೋನಾ ಪೀಡಿತ ಚಿರು ಮಗನ ಸ್ಥಿತಿ ಹೇಗಿದೆ ನೋಡಿ, ಚಿರು ಮಗನಿಗೆ ಐಸಿಯುನಲ್ಲಿ ಚಿಕಿತ್ಸೆ ಈ ರೀತಿ ಎಲ್ಲ ಹೆಡ್ಡಿಂಗ್ ನೀಡಿ ಯಾವುದೋ‌ ಮಗುವಿನ ಪೋಟೋ-ದೃಶ್ಯ ತೋರಿಸಿ ಸುಮ್ಮನೇ ಅಭಿಮಾನಿಗಳು ಹಾಗೂ ಜನರಿಗೆ ಆತಂಕ ಹುಟ್ಟಿಸುವ ತಪ್ಪು ಸಂದೇಶ ನೀಡುವ ಪ್ರಯತ್ನ ಮಾಡ್ತಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಗುಲಾಬಿ ಬಣ್ಣದ ಅಂಗಿಯಲ್ಲಿದ್ದ ಮಗುವಿನ ಪೋಟೋ ಶೇರ್‌ಮಾಡಿ ಸ್ಪಷ್ಟನೆ ನೀಡಿದ್ದ ಮೇಘನಾ ಮಗು ಮುದ್ದಾಗಿದೆ. ಆದರೇ ನಿರಾಸೆ ಕಾದಿದೆ ಆದರೇ ಈ ಪೋಟೋ ಚಿರು ಮಗನದ್ದಲ್ಲ ಎಂದಿದ್ದರು. ಅಷ್ಟೇ ಅಲ್ಲ ನಾಮಕರಣದ ನಳಿಕ ಮಗುವಿನ ಪೋಟೋ- ವಿಡಿಯೋ ರಿವೀಲ್ ಮಾಡೋದಾಗಿ‌ ಹೇಳಿದ್ದರು.

ಇಷ್ಟಾದರೂ ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಜನರನ್ನು ಯಾಮಾರಿಸುವ ಪ್ರಯತ್ನ‌ಮುಂದುವರೆದಿದ್ದು, ಚಿರು ಮಗುವಿನ ಹೆಸರಿನಲ್ಲಿ ಪ್ರತಿನಿತ್ಯ ಒಂದಿಲ್ಲೊಂದು‌ ವಿಡಿಯೋ,ಪೋಟೋ ಹರಿದು ಬರುತ್ತಲೇ ಇದೆ.

ಈ ವಿಚಾರಕ್ಕೆ ಸಿಟ್ಟಾಗಿರುವ ವೇಘನಾ ರಾಜ್. ನನ್ನ ತಾಳ್ಮೆಗೂ ಮಿತಿ.‌ದಯವಿಟ್ಟು ಈ ರೀತಿ ಆಭಿಮಾನಿಗಳನ್ನು,ಜನರನ್ನು ಫ್ಯಾನಿಕ್ ಮಾಡುವ ಪ್ರಯತ್ನ ಮಾಡಬೇಡಿ. ನನ್ನ ಮಗು ಸುರಕ್ಷಿತವಾಗಿ, ಆರೋಗ್ಯಕರವಾಗಿ ಇದ್ದಾನೆ. ಕಾಲ ಬಂದಾಗ ನಾನೇ ಅವನನ್ನು ನಿಮಗೆ ತೋರಿಸುತ್ತೇನೆ. ಅಲ್ಲಿಯವರೆಗೆ ದಯವಿಟ್ಟು ಕಾಯಿರಿ.

https://kannada.newsnext.live/chiranjeevi-sarja-is-appy-with-you-though-you-know-who-wrote-the-line-of-appealing/

ನನ್ನ‌ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿರುವುದು ನಿಜ‌‌. ಆದರೆ ಆತಂಕಪಡುವ ಅಗತ್ಯವಿಲ್ಲ. ನಾವೇ ಮನೆಯಲ್ಲಿ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತೇವೆ. ಆದಷ್ಟು ಬೇಗ ಜ್ಯೂನಿಯರ್ ಚಿರು ನಾಮಕರಣ ದಿನಾಂಕ ತಿಳಿಸುತ್ತೇವೆ ಎಂದಿದ್ದಾರೆ.

Comments are closed.