ಹುಟ್ಟುಹಬ್ಬಕ್ಕೂ ಮುನ್ನವೇ ರಾಕಿಂಗ್ ಸ್ಟಾರ್ ಸ್ಪೆಶಲ್ ಸಂದೇಶ‌…! ಯಶ್ ಬಿಡುಗಡೆಮಾಡಿದ ವಿಡಿಯೋದಲ್ಲೇನಿದೆ ಗೊತ್ತಾ…?!

ಸ್ಟಾರ್ ಗಳ ಹುಟ್ಟುಹಬ್ಬ ಅಂದ್ರೇ ಅಭಿಮಾನಿಗಳಿಗೇ ಸ್ಪೆಶಲ್ ಸಂಭ್ರಮ. ಅದರಲ್ಲೂ ರಾಕಿಂಗ್ ಸ್ಟಾರ್ ಈ ವರ್ಷದ ಬರ್ತಡೇಯನ್ನು ಕೆಜಿಎಫ್-೨ ಟೀಸರ್ ರಿಲೀಸ್ ಮತ್ತಷ್ಟು ಸ್ಪೆಶಲ್ ಮಾಡಿದೆ.

ಅಭಿಮಾನಿಗಳು ಜನವರಿ 8 ಕ್ಕೆ ಯಶ್ ಬರ್ತಡೇ ಅದ್ದೂರಿಯಾಗಿ ಆಚರಿಸೋಕೆ ಕಾಯುತ್ತಿರುವಾಗಲೇ ವಿಡಿಯೋವೊಂದನ್ನು ರಿಲೀಸ್ ಮಾಡಿರೋ ರಾಕಿ ಬಾಯ್ ಅಭಿಮಾನಿಗಳಿಗೆ ಸ್ಪೆಶಲ್ ಸಂದೇಶ ನೀಡಿದ್ದಾರೆ.


ಹೌದು ಕೊರೋನಾ ಜೊತೆ ಜೊತೆಗೆ ಬದುಕಬೇಕಾಗಿರುವ ಹೊತ್ತಿನಲ್ಲಿ ಮೈಮರೆಯಬಾರದು ಎಂಬ ಸಾಮಾಜಿಕ ಕಳಕಳಿ ಮೆರೆದಿರೋ ಯಶ್ ತಮ್ಮ ಹುಟ್ಟುಹಬ್ಬವನ್ನು ಯಾರೂ ಎಲ್ಲೂ ಗುಂಪುಗುಡುವ ಮೂಲಕ ಆಚರಿಸಬೇಡಿ ಎಂದು ಮನವಿ ಮಾಡಿದ್ದಾರೆ.


ಹೌದು ಕೊರೋನಾ ಜೊತೆ ಜೊತೆಗೆ ಬದುಕಬೇಕಾಗಿರುವ ಹೊತ್ತಿನಲ್ಲಿ ಮೈಮರೆಯಬಾರದು ಎಂಬ ಸಾಮಾಜಿಕ ಕಳಕಳಿ ಮೆರೆದಿರೋ ಯಶ್ ತಮ್ಮ ಹುಟ್ಟುಹಬ್ಬವನ್ನು ಯಾರೂ ಎಲ್ಲೂ ಗುಂಪುಗುಡುವ ಮೂಲಕ ಆಚರಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಈ ಕುರಿತು ತಮ್ಮ ಹೇಳಿಕೆಯನ್ನು ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಜನವರಿ 5 ಮಂಗಳವಾರ ಸಂಜೆ ರಿಲೀಸ್ ಮಾಡಿರುವ ಯಶ್ , ನನಗೆ ನಿಮ್ಮ ಆರೋಗ್ಯವೂ‌ ಮುಖ್ಯ. ಹೀಗಾಗಿ ಗುಂಪುಗೂಡೂದು ಬೇಡ. ಎಲ್ಲಿದ್ದೀರೋ ಅಲ್ಲಿಂದಲೇ ಶುಭ ಹಾರೈಸಿ, ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳಸಿ.‌ದಯವಿಟ್ಟು ಮನೆಮುಂದೇ ಗುಂಪುಗೂಡುವುದು ಸೇರಿದಂತೆ ಯಾವುದೇ ಅನಾರೋಗ್ಯಕರ ಕಾರ್ಯ ಬೇಡ ಎಂದಿದ್ದಾರೆ.

ಅಲ್ಲದೇ ಜನವರಿ 8 ರಂದು ರಿಲೀಸ್ ಆಗೋ ತಮ್ಮ ಬಹುನೀರಿಕ್ಷಿತ ಚಿತ್ರ ಕೆಜಿಎಫ್-೨ ಟೀಸರ್ ನೋಡಿ ಹರಸುವಂತೆಯೂ ಕೋರಿದ್ದಾರೆ.

ತಮಗೆ ಹುಟ್ಟುಹಬ್ಬವನ್ನು ಆಚರಿಸುವ ಪದ್ಧತಿ ಇರಲಿಲ್ಲ. ಆದರೇ ನೀವೆಲ್ಲ ಆಚರಿಸಲು ಪ್ರಾರಂಭಿಸಿದ ಮೇಲೆ ನಿಮ್ಮನ್ನೆಲ್ಲ ಹತ್ತಿರದಿಂದ ನೋಡಲು ಖುಷಿಯಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬೇರೆಯೇ ಇದೆ.ಹೀಗಾಗಿ ಈ ಭಾರಿ ಆಚರಣೆ ಬೇಡ ಎಂದು ಮನವಿ ಮಾಡಿದ್ದಾರೆ.

Comments are closed.