1980-90 ರ ದಶಕದಲ್ಲಿ ಹಿರೋಯಿನ್ ಆಗಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ ಮಹಾಲಕ್ಷ್ಮಿ ಬಹುದೊಡ್ಡ ಬ್ರೇಕ್ ಬಳಿಕ ಚಂದನವನಕ್ಕೆ ಮರಳಿದ್ದಾರೆ. ಅಷ್ಟೇ ಅಲ್ಲ ತಮ್ಮ ಸುತ್ತ ಹಬ್ಬಿದ ಗಾಸಿಪ್ ಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.

1980-90 ದಶಕದಲ್ಲಿ ನಾಯಕಿಯಾಗಿ ಮಿಂಚಿದ ಮಹಾ ಲಕ್ಷ್ಮೀ ವಯೋಸಹಜವಾದ ಬ್ರೇಕ್ ಪಡೆದುಕೊಂಡು ಮದುವೆ,ಮಕ್ಕಳು ಸಂಸಾರ ಎಂದು ಕಳೆದುಹೋಗಿದ್ದರು.

ಆದರೂ ಸ್ಯಾಂಡಲ್ ವುಡ್ ಕಡೆಗೆ ಅವರ ತುಡಿತ ಕಡಿಮೆಯಾಗಿರಲಿಲ್ಲ. ಈಗ ಬರೋಬ್ಬರಿ 30 ವರ್ಷಗಳ ಬಳಿಕ ಮಹಾಲಕ್ಷ್ಮಿ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಈ ಭಾರಿ ನಾಯಕಿಯಾಗಿ ಅಲ್ಲ ಬದಲಾಗಿ ನಾಯಕನ ತಾಯಿಯಾಗಿ.ಟಿಆರ್ಪಿ ರಾಮ ಎಂಬ ಕನ್ನಡ ಚಿತ್ರದಲ್ಲಿ ಮಹಾಲಕ್ಷ್ಮಿ ನಾಯಕನ ತಾಯಿ ಪಾತ್ರದಲ್ಲಿ ನಟಿಸಲಿದ್ದಾರೆ. ಟಿಆರ್ಪಿ ರಾಮ ರವಿ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ.

ಇತ್ತೀಚಿಗಷ್ಟೇ ಚಿತ್ರದ ಮುಹೂರ್ತ ನೆರವೇರಿದ್ದು, ಚಿತ್ರಸಾಹಿತಿ ಹಾಗೂ ನಿರ್ದೇಶಕ ಕವಿರಾಜ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದಾರೆ. ಅಮ್ಮನ ಪಾತ್ರದಲ್ಲಿ ಮಹಾಲಕ್ಷ್ಮಿ ಮಿಂಚಿದ್ದಾರೆ.ಮಹಾಲಕ್ಷ್ಮಿ ವೈವಾಹಿಕ ಬದುಕು ಸರಿಯಿಲ್ಲ ಎಂಬ ಊಹಾಪೋಹಗಳು ಸೃಷ್ಟಿಯಾಗಿರೋದರ ಬಗ್ಗೆ ಮನಬಿಚ್ಚಿ ಮಾತನಾಡಿದ ಮಹಾಲಕ್ಷ್ಮಿ ಎಲ್ಲವೂ ಸರಿಯಾಗಿದೆ. ನಾನು ಬದುಕಿನಲ್ಲಿ ಸುಖವಾಗಿದ್ದೇನೆ.

ನಾನು ಚೈನೈನಲ್ಲೇ ಇದ್ದು ಅಲ್ಲಿನ ಚರ್ಚ್ ವೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಆ ಕಾರಣಕ್ಕೆ ನನ್ನ ಬದುಕು ಸರಿಯಿಲ್ಲ ಎಂಬ ಗಾಸಿಪ್ ಗಳು ಸೃಷ್ಟಿಯಾಗಿದೆ. ಆದರೆ ನಾನು ಸನ್ಯಾಸಿ ಅಲ್ಲ ಸಂಸಾರಿ ಎಂದಿದ್ದಾರೆ.ಬೇಡಿಕೆ ಇದ್ದಾಗ ನಟಿಸಿದೆ. ಎಲ್ಲ ಹಿರಿಯ ನಟರ ಜೊತೆ ನನಗೆ ನಟಿಸುವ ಅವಕಾಶ ಸಿಕ್ಕಿತ್ತು. ಬಳಿಕ ಮದುವೆ ಮಕ್ಕಳು ಎಂದು ಬ್ಯುಸಿಯಾಗಿದ್ದೆ. ಈಗ ಮತ್ತೆ ನಟನೆಗೆ ಅವಕಾಶವಿರುವಂತ ಪಾತ್ರ ಸಿಕ್ಕಿದೆ. ಹೀಗಾಗಿ ನಟನೆಗೆ ಮರಳಿದ್ದೇನೆ ಎಂದಿದ್ದಾರೆ.