ಕಿರುತೆರೆ ಮೂಲಕ ಬೆಳ್ಳಿತೆರೆಗೆ ಹಾರಿದ ಚಂದನವನದ ನಟಿ ಮಯೂರಿ ತಾಯಾದ ಸಂಭ್ರಮದಲ್ಲಿದ್ದು, ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಸ್ವತಃ ಮಯೂರಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಈ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.

ಮಗುವಿನ ಪುಟ್ಟ ಕೈಗಳ ಪೋಟೋ ಹಂಚಿಕೊಂಡಿರುವ ಮಯೂರಿ, ಈ ಸುಂದರ ಅನುಭವವನ್ನು ಹಂಚಿಕೊಳ್ಳಲು ಪದಗಳೇ ಸಿಗುತ್ತಿಲ್ಲ. ಮತ್ತೊಂದು ಸುಂದರ ಪಯಣ ಶುರುವಾಗಿದೆ.ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದಿದ್ದಾರೆ.

ಕಿರುತೆರೆಯ ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಪ್ರಚಲಿತಕ್ಕೆ ಬಂದ ನಟಿ ಮಯೂರಿ ಧಾರಾವಾಹಿಯಲ್ಲಿ ಜೆಕೆಗೆ ಜೋಡಿಯಾಗಿ ಸಖತ್ ಅಭಿಮಾನಿಗಳನ್ನು ಗಳಿಸಿದ್ದರು. ಹೆಂಡ್ತಿ ಎಂದೇನೇ ಫೇಮಸ್ ಆಗಿದ್ದ ಮಯೂರಿ ಬಳಿಕ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದರು.

ಇತ್ತೀಚಿಗಷ್ಟೇ ಟ್ರೆಡಿಶನಲ್ ಹಾಗೂ ಸಖತ್ ಹಾಟ್ ಬೇಬಿಬಂಪ್ ಪೋಟೋಶೂಟ್ ಮಾಡಿಸಿದ್ದ ಮಯೂರಿ ಅಭಿಮಾನಿಗಳ ಜೊತೆ ಪೋಟೋ ಹಂಚಿಕೊಂಡಿದ್ದರು. ಇದೀಗ ಆರೋಗ್ಯಕರವಾಗಿ ಗಂಡುಮಗುವಿಗೆ ಜನ್ಮನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದೇವೆ ಎಂದಿದ್ದಾರೆ.

ತಮ್ಮ ಬಹುಕಾಲದ ಸ್ನೇಹಿತ ಹಾಗೂ ಪ್ರೇಮಿ ಅರುಣ ಜೊತೆ ಮಯೂರಿ ಜೆ.ಪಿ.ನಗರದ ವೆಂಕಟೇಶ್ವರ್ ದೇವಾಲಯದಲ್ಲಿ ಮಯೂರಿ ಸರಳವಾಗಿ ಮದುವೆಯಾಗಿದ್ದರು. ಜೆಕೆಯವರ ತಂದೆ-ತಾಯಿ ಮಯೂರಿಯವರನ್ನು ಧಾರೆ ಎರೆದು ಕೊಟ್ಟಿದ್ದು, ಮದುವೆಯ ವಿಶೇಷವಾಗಿತ್ತು.