ಸೋಮವಾರ, ಏಪ್ರಿಲ್ 28, 2025
HomeBreakingಯುವಸಾಮ್ರಾಟ್ ನ ಆತ್ಮರಹಸ್ಯ....! ಹುಲಿಕಲ್ ನಟರಾಜ್ ಬಯಲು ಮಾಡಿದ್ರು ಸತ್ಯ...!!

ಯುವಸಾಮ್ರಾಟ್ ನ ಆತ್ಮರಹಸ್ಯ….! ಹುಲಿಕಲ್ ನಟರಾಜ್ ಬಯಲು ಮಾಡಿದ್ರು ಸತ್ಯ…!!

- Advertisement -

ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ್ ಚಿರು ಇನ್ನಿಲ್ಲವಾಗಿ ತಿಂಗಳುಗಳೇ ಕಳೆದಿದೆ. ಆದರೂ ಅಭಿಮಾನಿಗಳು,ಆಪ್ತರು ಈ ಸತ್ಯ ಅರಗಿಸಿಕೊಳ್ಳಲಾಗದೇ ಪರದಾಡುತ್ತಿದ್ದಾರೆ.‌ಈ ಮಧ್ಯೆ ಚಿರು ಆತ್ಮ ಮಾತನಾಡಿದೆ ಎಂಬ ವದಂತಿಗಳು ಜೋರಾಗಿದ್ದು , ಈ ಊಹಾಪೋಹದ ಸತ್ಯ ಹೊರಬಿದ್ದಿದೆ.

ಚಿರಂಜೀವಿ ಸರ್ಜಾ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ ಕೆಲ ದಿನದಲ್ಲಿಯೇ ಅವರ ಆತ್ಮವನ್ನು ಮಾತನಾಡಿಸಲಾಯಿತು ಎಂಬ ವದಂತಿಯೊಂದು ಜೀವ ಪಡೆದುಕೊಂಡಿತು.

ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ತೀವ್ರ ಸಂಚಲನ ಮೂಡಿಸಿದ ಈ ಆತ್ಮದ ಮಾತುಕತೆಯ ಸತ್ಯವನ್ನು ಪವಾಡ ಬಯಲು ಮಾಡುವ ಕರ್ನಾಟಕದ ವೈಜ್ಞಾನಿಕ ಚಿಂತಕ ನಟರಾಜ್ ಹುಲಿಕಲ್ ಬಿಚ್ಚಿಟ್ಟಿದ್ದಾರೆ.

ವಿದೇಶಿ ಪ್ಯಾರಾನಾರ್ಮಲ್ ವಿಜ್ಞಾನಿಯೊಬ್ಬರು ಚಿರು ಸಾವಿನ ಕುರಿತು ಅವರ ಆತ್ಮವನ್ನು ಮಾತನಾಡಿಸಿದ್ದೇವೆ ಎಂದು ಹೇಳಿಕೊಂಡಿದ್ದಲ್ಲದೇ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದರು.ಆ ವಿಡಿಯೋ ಸ್ಪಷ್ಟವಿಲ್ಲದ ಆಡಿಯೋವೊಂದನ್ನು ಒಳಗೊಂಡಿದ್ದು ಅದನ್ನೇ ಚಿರು ಅತ್ಮದ ಮಾತು ಎಂದು ಬಿಂಬಿಸಲಾಗಿತ್ತು. ಆದರೆ ಇದು ಸತ್ಯವಲ್ಲ ಎಂದು ಹುಲಿಕಲ್ ನಟರಾಜ್ ಹೇಳಿದ್ದಾರೆ.

ಯಾರೂ ಕೂಡ ಆತ್ಮದ ಜೊತೆ ಮಾತನಾಡಲು ಸಾಧ್ಯವಿಲ್ಲ. ವಿದೇಶಿ ಪ್ಯಾರಾ ನಾರ್ಮಲ್ ತಜ್ಞ ಹೇಳಿದ್ದು ಸುಳ್ಳು, ರೆಡಿಯೋ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ಕೃತಕ‌ಧ್ವನಿ ಸೃಷ್ಟಿಸಲಾಗಿದೆ ಎಂದಿದ್ದಾರೆ.

ಆತ್ಮದ‌ ಜೊತೆಗೆ ಮಾತಾನಾಡುವುದಾಗಿ ನಂಬಿಸಿ ಕುಟುಂಬ ಹಾಗೂ ಆಪ್ತ ರಿಗೆ ವಂಚಿಸುವ ಪ್ರಯತ್ನ ಇದು.‌ಇಂತವಹಕ್ಕೆಲ್ಲ ಮಹತ್ವ ನೀಡಬಾರದು ಎಂದು ನಟರಾಜ್ ಅಭಿಪ್ರಾಯಿಸಿದ್ದಾರೆ.

RELATED ARTICLES

Most Popular