ದಯಾನಂದ ಪೂಜಾರಿ ಅವರ ಮನೆಯ ಕೋಳಿ ಮರಿಗೆ 5 ಕಾಲು : ಜನರಿಗೆ ಅಚ್ಚರಿಯೋ ಅಚ್ಚರಿ…!

ಬಂಟ್ವಾಳ : ಸಾಮಾನ್ಯವಾಗಿ ಕೋಳಿಗೆ ಎಷ್ಟು ಕಾಲು ಅಂತಾ ಯಾರಲ್ಲಿ ಕೇಳಿದ್ರೂ ಬರುವ ಉತ್ತರ 2. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂನಾಡ್ ಗೋಡ್ ನಲ್ಲಿರುವ ದಂಡೆ ದಯಾನಂದ ಪೂಜಾರಿ ಅವರ ಮನೆಯಲ್ಲಿ ಹುಟ್ಟಿದ ಕೋಳಿ ಮರಿಗೆ ಮಾತ್ರ 5 ಕಾಲು.!

ದಯಾನಂದ ಪೂಜಾರಿ ಅವರ ಮನೆಯಲ್ಲಿ ಒಟ್ಟು 15 ಕೋಳಿ ಮೊಟ್ಟೆಗಳನ್ನು ಕಾವಿಗೆ ಕೂರಿಸಲಾಗಿತ್ತು. ಈ ಪೈಕಿ ಕೋಳಿ ನಿನ್ನೆ 12 ಮರಿಗಳಿಗೆ ಜನ್ಮ ನೀಡಿದೆ. ಇದರಲ್ಲಿ ಜನಿಸಿದ ಒಂದು ಕೋಳಿಯ ಮರಿಗೆ 5 ಕಾಲುಗಳಿವೆ. ಇದನ್ನು ನೋಡಿದ ಮನೆಯವರಿಗೆ ನಿಜಕ್ಕೂ ಅಚ್ಚರಿಯಾಗಿತ್ತು.

ಮೊದಲ ಬಾರಿಗೆ ಜನಿಸಿದ ಕೋಳಿಯ ಮರಿಗೆ 5 ಕಾಲುಗಳಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅಕ್ಕಪಕ್ಕದ ಮನೆಯವರೂ ಕೂಡ ದಯಾನಂದ ಪೂಜಾರಿ ಅವರ ಮನೆಗೆ ಆಗಮಿಸಿ ಕೋಳಿಯ ಮರಿಯನ್ನು ಅಚ್ಚರಿಯಿಂದಲೇ ನೋಡುತ್ತಿದ್ದಾರೆ.

ಮಾತ್ರವಲ್ಲ ದಯಾನಂದ ಪೂಜಾರಿ ಅವರ ಮನೆಯವರು ಕೂಡ ಸಂತಸಗೊಂಡಿದ್ದಾರೆ. ಒಟ್ಟಿನಲ್ಲಿ 5 ಕಾಲುಗಳಿರುವ ಕೋಳಿ ಮರಿ ಜನಿಸಿರುವುದು ನಿಜಕ್ಕೂ ನಿಸರ್ಗಕ್ಕೆ ಸವಾಲು ಎಸೆದಂತಾಗಿದೆ.

https://kannada.newsnext.live/7minutes-of-tearing-cake-came-to-kundapur-7th-heaven/

Comments are closed.