ಪತಿಯನ್ನು ಕಳೆದುಕೊಂಡ ನೋವಿನಲ್ಲೇ ಹೊಸಜೀವವೊಂದಕ್ಕೆ ಜನ್ಮನೀಡಿದ ಮೇಘನಾ ರಾಜ್ ಇದೀಗ ಮಗನೊಂದಿಗೆ ದಿನಕಳೆಯುತ್ತ ಎಲ್ಲ ನೋವನ್ನು ಮರೆಯುತ್ತಿದ್ದಾರೆ.

ಈಮಧ್ಯೆ ಜ್ಯೂನಿಯರ್ ಚಿರು ಈಗಾಗಲೇ 7 ತಿಂಗಳಿಗೆ ಕಾಲಿಟ್ಟಿದ್ದು, ಈ ಸಂಭ್ರಮವನ್ನು ಜ್ಯೂನಿಯರ್ ಚಿರು ಹಾಗೂ ಮೇಘನಾಚಿರು ಅಭಿಮಾನಿಗಳು ಸಖತ್ತಾಗಿ ಆಚರಿಸಿದ್ದಾರೆ.

ಜ್ಯೂನಿಯರ್ ಚಿರು ಹಾಗೂ ಚಿರಂಜೀವಿ ಸರ್ಜಾ ಸೂಪರ್ ಮ್ಯಾನ್ ಕಾಸ್ಟ್ಯೂಮ್ ನಲ್ಲಿ ನಿಂತಿರುವಂತೆ ಎಡಿಟ್ ಮಾಡಿದ್ದರೇ, ಇನ್ನು ಹಲವು ಪೋಟೋ ದಲ್ಲಿ ಚಿರು,ಮೇಘನಾ ಹಾಗೂ ಜ್ಯೂನಿಯರ್ ಜೊತೆಗಿನ ಫುಲ್ ಫ್ಯಾಮಿಲಿ ಪೋಟೋ ಸಿದ್ಧಪಡಿಸಿದ್ದಾರೆ.

ಮೇಘನಾ ಅಭಿಮಾನಿಗಳ ಈ ಖುಷಿ ಗೆ ಹಾಗೂ ಅಭಿಮಾನಕ್ಕೆ ಮತ್ತಷ್ಟು ಉತ್ಸಾಹ ತುಂಬಿದ್ದು ಅಭಿಮಾನಿಗಳು ಎಡಿಟ್ ಮಾಡಿದಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಸದ್ಯ ಮೇಘನಾರಾಜ್ ತಮ್ಮ ತವರು ಮನೆಯಲ್ಲೇ ಇದ್ದು ಜ್ಯೂನಿಯರ್ ಚಿರು ತೊಟ್ಟಿಲ ಶಾಸ್ತ್ರದ ಬಳಿಕ ಚಿರು ಮನೆಗೆ ತೆರಳಲಿದ್ದಾರಂತೆ.
ಕಳೆದ ಫೆಬ್ರವರಿಯಲ್ಲೇ ನಡೆಯಬೇಕಿದ್ದ ಜ್ಯೂನಿಯರ್ ಚಿರು ತೊಟ್ಟಿಲ ಶಾಸ್ತ್ರ ಹಾಗೂ ನಾಮಕರಣಕ್ಕೆ ಕೊರೋನಾ ಅಡ್ಡಿಯಾಗಿದ್ದು ಕೊರೋನಾ ಅಬ್ಬರ ತಗ್ಗಿದ ಬಳಿಕ ಸಮಾರಂಭ ನಡೆಯಲಿದೆ.