ಆ ದಿನಕ್ಕೆ ಒಂದು ವರ್ಷ….! ಚಿರು ಜೊತೆಗಿನ ಕೊನೆಯ ದಿನ ನಡೆದಿದ್ದೇನು…!! ಮೇಘನಾ ದಾಖಲಿಸಿದ ನೆನಪು…!!

 

ಕೊರೋನಾ ನಡುವೆಯೂ 2020 ನೇ ವರ್ಷ ನಮ್ಮ ಮರೆಯಲಾರದ ವರ್ಷವಾಗಿತ್ತು.ಕಾರಣ ನಾನು ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದೆ. ಈ ಸುದ್ದಿಯನ್ನು ವಿಭಿನ್ನವಾಗಿ ಅಭಿಮಾನಿಗಳೊಂದಿಗೆ,ಆಪ್ತರೊಂದಿಗೆ ಹಂಚಿಕೊಳ್ಳುವ ಆಸೆ ನಮಗಿತ್ತು. ಆದರೆ ಆ ದಿನ ಅನೀರಿಕ್ಷಿತವಾಗಿ ಹೇಗೇಗೋ ಬಂದಿದ್ದು ಮಾತ್ರ ನನ್ನನ್ನು ಸದಾ ಕಾಡುತ್ತದೆ.

https://kannada.newsnext.live/karnataka-petrol-price-hike/

ಹೀಗೆ ತಮ್ಮ ಮನದಾಳವನ್ನು , ಪತಿ ಅಗಲಿಕೆಯ ದಿನದ ನೆನಪನ್ನು ಹಂಚಿಕೊಂಡಿದ್ದಾರೆ ಮೇಘನಾ ರಾಜ್. ಅಭಿಮಾನಿಗಳಿಗೆ ಸಿಹಿಸುದ್ದಿ ನೀಡುವ ಆಸೆಯಲ್ಲಿದ್ದ ನಮ್ಮಿಬ್ಬರಿಗೆ ಜೂನ್ 7 2020 ರಂದು ಅನೀರಿಕ್ಷಿತ ಆಘಾತ ಕಾದಿತ್ತು.

ಆ ದಿನವೂ ಎಂದಿನಂತೆ ಆರಂಭವಾಗಿತ್ತು. ನಾನು ಚಿರು, ಪ್ರೇರಣಾ, ಧ್ರುವ್ ಸರ್ಜಾ ಎಲ್ಲರೂ ಮನೆಯಲ್ಲೇ ಇದ್ದೇವು. ಊಟ ಮಾಡಿ ನಾನು ಪ್ರೇರಣಾ, ಧ್ರುವ್  ಮನೆಯ ಹೊರಗಡೆ ಮಾತನಾಡುತ್ತಿದ್ದೇವು. ಈ ವೇಳೆ ಮಾವ ಕಿರುಚಿದರು. ಒಳಕ್ಕೆ ಹೋಗಿ ನೋಡಿದರೇ ಚಿರು ಪ್ರಜ್ಞೆಯಿಲ್ಲದೇ ಬಿದ್ದಿದ್ದ.

ಚಿರುವನ್ನು ಆ ಸ್ಥಿತಿಯಲ್ಲಿ ನಾನು ನೋಡಿದ್ದು ಅದೇ ಮೊದಲು. ನನಗೆ ಏನು ಮಾಡಬೇಕೆಂಬುದು ಅರ್ಥವೇ ಆಗಿಲ್ಲ. ನಾವೆಲ್ಲರೂ ಅಂಬುಲೆನ್ಸ್ ಗಾಗಿ ಕರೆ ಮಾಡಿದೇವು. ಮತ್ತೆ ಅಂಬುಲೆನ್ಸ್ ಗಾಗಿ ಕಾಯುವುದು ಬೇಡ ಎಂದು ತಕ್ಷಣ ನಮ್ಮ ಕಾರಿನಲ್ಲೇ ಚಿರುವನ್ನು ಆಸ್ಪತ್ರೆಗೆ ಕರೆದೊಯ್ದೇವು.

ಈ ವೇಳೆ ಚಿರುಗೆ ಸ್ವಲ್ಪ ಪ್ರಜ್ಞೆ ಬಂದಿತ್ತು. ನನಗೇನು ಆಗೋದಿಲ್ಲ. ನೀನು ಹೆದರಬೇಡ. ನಾನು ಬೇಗ ಹುಶಾರಾಗುತ್ತೇನೆ ಎಂದಿದ್ದರು. ಅದೇ ನನ್ನ ಚಿರು ನನ್ನೊಂದಿಗೆ ಆಡಿದ ಕೊನೆ ಮಾತು ಎಂದು ನೆನಪಿಸಿಕೊಂಡಿದ್ದಾರೆ ಮೇಘನಾರಾಜ್.

https://kannada.newsnext.live/karnataka-petrol-price-hike/

ಬಳಿಕ ವೈದ್ಯರು ಮ್ಯಾಸಿವ್ ಹಾರ್ಟ್ ಅಟ್ಯಾಕ್ ಆಗಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲ ಚಿರು ಇನ್ನಿಲ್ಲ ಎಂಬ ಆಘಾತದ ಸುದ್ದಿಯನ್ನು ಹೇಳಿದರು. ಅಷ್ಟೇ ನನಗೆ ಏನಾಯಿತು ಎಂದೇ ಅರ್ಥವಾಗಿಲ್ಲ. ಚಿರು ನನ್ನೊಂದಿಗಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ನನಗೆ ತುಂಬ ಸಮಯ ಬೇಕಾಯಿತು.

ಈಗ ಚಿರುನ ಕನಸು, ಅವರ ನಗು,ಅವರ ನಾಳೆ ಜ್ಯೂನಿಯರ್ ಚಿರು ನನ್ನ ಜೊತೆಗಿದ್ದಾನೆ. ಜ್ಯೂನಿಯರ್ ಚಿರುವಿನಲ್ಲೇ ಚಿರುವನ್ನು ನೋಡುತ್ತೇನೆ. ಚಿರು ಕನಸಿನಂತೆ ಮಗನನ್ನು ಬೆಳೆಸುವುದಷ್ಟೇ ಈಗ ನನ್ನ ಗುರಿ ಎಂದು ಮೇಘನಾ ರಾಜ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Comments are closed.