ಸಾಂಪ್ರದಾಯಿಕ ಉಡುಗೆಯಲ್ಲಿ 6 ಮಂತ್ಸ್ ಸೆಲಿಬ್ರೇಶನ್…! ಜ್ಯೂನಿಯರ್ ಚಿರು ಸ್ಪೆಶಲ್ ಪೋಟೋ ಹಂಚಿಕೊಂಡ ಮೇಘನಾರಾಜ್….!!

ತಾಯಿ ಪಾಲಿಗೆ ಮಗುವಿನ ಜೊತೆ ಕಳೆಯುವ ಪ್ರತಿಕ್ಷಣವೂ ಅವಿಸ್ಮರಣೀಯವೇ. ಅದರಲ್ಲೂ ಸ್ಯಾಂಡಲ್ ವುಡ್ ನ ಕುಟ್ಟಿಮಾ ಮೇಘನಾ ರಾಜ್ ಅಂತೂ ಎಲ್ಲವನ್ನು ಮರೆತು ಮಗನ ಜೊತೆ ಪ್ರತಿಕ್ಷಣವನ್ನು ಎಂಜಾಯ್ ಮಾಡ್ತಿದ್ದು, ಜ್ಯೂನಿಯರ್ ಚಿರು ಎನ್ನುತ್ತ ಸಂಭ್ರಮಿಸುತ್ತಿದ್ದಾರೆ. ಮೊನ್ನೆಯಷ್ಟೇ 6 ತಿಂಗಳು ಪೊರೈಸಿದ ಜ್ಯೂನಿಯರ್ ಚಿರುನ ಅರ್ಧವಾರ್ಷಿಕ ಸಂಭ್ರಮ ಹೇಗಿತ್ತು…? ಇಲ್ಲಿದೆ ಡಿಟೇಲ್ಸ್…

ಬದುಕಿನ ಅತ್ಯಂತ ಸಂದಿಗ್ಧ ಸ್ಥಿತಿಯಲ್ಲಿ ತನ್ನ ಮಗುವಿಗೆ ಜನ್ಮ ನೀಡಿ ದರು ಮೇಘನಾ ರಾಜ್. 10 ವರ್ಷಗಳ ಪ್ರೀತಿ ಹಾಗೂ ಎರಡು ವರ್ಷದ ದಾಂಪತ್ಯವನ್ನು ಒಂದು ಕ್ಷಣದಲ್ಲಿ ಕಳೆದುಕೊಂಡ ಮೇಘನಾ ಪಾಲಿಗೆ ತಾಯ್ತನ ಅನ್ನೋದು ಸಿಹಿ-ಕಹಿ ತುಂಬಿದ ಬುತ್ತಿಯಾಗಿತ್ತು. ಆದರೆ ಅಕ್ಟೋಬರ್ 22 ರಂದು ಗಂಡುಮಗುವಿಗೆ ಜನ್ಮ ನೀಡಿದ ಕುಟ್ಟಿಮಾ ಸದ್ಯ ಮಗುವಿನ ಮುಖ ನೋಡಿ ಎಲ್ಲ ದುಃಖ ಮರೆತಿದ್ದಾರೆ.

ಜ್ಯೂನಿಯರ್ ಚಿರು ಎಂದೇ ಕರೆಸಿಕೊಂಡ ಮೇಘನಾ ಪುತ್ರ ಚಿಂಟು, ಧರೆಗೆ ಬಂದು ಅದಾಗಲೇ 6 ತಿಂಗಳು ಕಳೆದು ಹೋಗಿದೆ. ಹೀಗಾಗಿ ಒಂದು ವರ್ಷದ ಹಾದಿಯಲ್ಲಿ ಅರ್ಧ ಸವೆಸಿದ ಮಗನ ಜರ್ನಿಯನ್ನು ಮೆಮೋರೆಬಲ್ ಮಾಡೋಕೆ ಮೇಘನಾ ಸಣ್ಣ ಪಾರ್ಟಿಯನ್ನೇ ಆಯೋಜಿಸಿ ಸಂಭ್ರಮಿಸಿದ್ದಾರೆ.

ತೆಳುನೀಲಿ ಮತ್ತು ಕಪ್ಪು ಬಣ್ಣದ ಬಲೂನ ಜೊತೆಗೆ ಶೃಂಗರಿಸಲಾದ ಟೇಬಲ್ ಮೇಲೆ ಆಯ್ ಎಮ್ ಹಾಫ್ ವೇ ಟೂ ಒನ್ ಎಂಬ ಟ್ಯಾಗ್ ಲೈನ್ ಜೊತೆ ಕೇಕ್ ಸಿದ್ಧಪಡಿಸಲಾಗಿತ್ತು. ಅಷ್ಟೇ ಅಲ್ಲ ಇದೇ ಮೊದಲ ಬಾರಿಗೆ ಜ್ಯೂನಿಯರ್ ಚಿರು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.

ತೆಳುನೀಲಿ ಬಣ್ಣದ ಶರ್ವಾನಿ ಹಾಗೂ ಪ್ಯಾಂಟ್ ನಲ್ಲಿ ಜ್ಯೂನಿಯರ್ ಚಿರು ಹಾಗೂ ಯೆಲ್ಲೋ ಗೋಲ್ಡನ್ ಡಿಸೈನ್ ಸಲ್ವಾರ್ ನಲ್ಲಿ ಮೇಘನಾ ಮಗನಿಗೆ ಸಾಥ್ ನೀಡಿದರು. ಕೊರೋನಾ ಹಿನ್ನೆಲೆಯಲ್ಲಿ ಮನೆಯಲ್ಲೇ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮೇಘನಾ ಈ ಪಾರ್ಟಿ ಆಯೋಜಿಸಿದ್ದು, ಜ್ಯೂನಿಯರ್ ಚಿರು ಕೇಕ್ ಕತ್ತರಿಸಿ ತನ್ನ ಅರ್ಧ ವರ್ಷಾಚರಣೆಯನ್ನು ಸೆಲಿಬ್ರೇಟ್ ಮಾಡಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಮೇಘನಾ, ನಿನಗೀಗ ಆರು ತಿಂಗಳು ಮುಗಿದಿದೆ. ಈಗ ನೀನು ಎಲ್ಲವನ್ನು ಹೇಳಲಾರಂಭಿಸಿದ್ದೀಯಾ. ನಾನು ಮತ್ತು ಅಪ್ಪ ನಿನ್ನನ್ನು ತುಂಬ ಪ್ರೀತಿಸುತ್ತೇವೆ ಎಂದಿದ್ದಾರೆ. ಅಲ್ಲದೇ ಜ್ಯೂನಿಯರ್ ಚಿರು ಹಾಗೂ ಜ್ಯೂನಿಯರ್ ಸಿಂಬಾ ಎಂದು ಕರೆದಿದ್ದಾರೆ.

ಕೊರೋನಾದಿಂದ ಜ್ಯೂನಿಯರ್ ನಾಮಕರಣದ ದಿನಾಂಕ ನಿಗದಿ ಯಾಗದೇ ಮುಂದೂಡಿಕೆಯಾಗುತ್ತಿದ್ದು, ಅದ್ದೂರಿಯಾಗಿ ಕಾರ್ಯಕ್ರಮ ಮಾಡೋ ಆಸೆಯಲ್ಲಿದೆ ಸರ್ಜಾ ಕುಟುಂಬ. ಸದ್ಯಕ್ಕೆ ಮಗುಗೆ ಸುಂದರ್ ರಾಜ್ ಚಿಂಟು ಎಂದು ಕರೆಯುತ್ತಿದ್ದರೇ, ಕುಟುಂಬಸ್ಥರು, ಆಪ್ತರು ಜ್ಯೂನಿಯರ್ ಚಿರು ಎಂದೇ ಕರೆಯುತ್ತಿದ್ದಾರೆ.

6 ತಿಂಗಳು ಮುಗಿಸಿ 7 ನೇ ತಿಂಗಳಿಗೆ ಕಾಲಿಟ್ಟಿರುವ ಜ್ಯೂನಿಯರ್ ಚಿರು ಪೋಟೋವನ್ನು ಮೇಘನಾ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಮಗುವಿಗೆ ಹಾರೈಸಿ ಸಂಭ್ರಮಿಸುತ್ತಿದ್ದಾರೆ.

Comments are closed.