ಪತಿಯನ್ನು ಕಳೆದುಕೊಂಡು ಒಂದು ವರ್ಷ ಕಳೆಯುವಷ್ಟರಲ್ಲೇ ತಮ್ಮ ಹಾಗೂ ಚಿರುನ ಪ್ರೀತಿಯ ಒಡನಾಡಿಯನ್ನು ಕಳೆದುಕೊಂಡು ಮೇಘನಾ ಕಣ್ಣಿರಿಟ್ಟಿದ್ದಾರೆ. ಅದುಮತ್ಯಾರು ಅಲ್ಲ ಮೇಘನಾ ಹಾಗೂ ಚಿರು ಪ್ರೀತಿಯ ನಾಯಿ ಬ್ರುನೋ.

ಮೇಘನಾ ರಾಜ್ ಮನೆಯ ನಾಯಿ ಬ್ರುನೋ ಅನಾರೋಗ್ಯದಿಂದ ಗುರುವಾರ ಸಾವನ್ನಪ್ಪಿದೆ.ಚಿರು ಹಾಗೂ ಮೇಘನಾ ಪ್ರೀತಿಯ ಸಾಕು ನಾಯಿಯಾಗಿದ್ದ ಬ್ರುನೋ ಅಗಲಿಕೆಗೆ ಮೇಘನಾ ಕಣ್ಣೀರಾಗಿದ್ದು ಇನ್ ಸ್ಟಾಗ್ರಾಂ ನಲ್ಲಿ ಬ್ರುನೋ ಬಗ್ಗೆ ಹಲವು ಸಂಗತಿಹಂಚಿಕೊಂಡಿದ್ದಾರೆ.

ನೀನು ಇನ್ನೂ ಜ್ಯೂನಿಯರ್ ಚಿರು ಜೊತೆ ಆಡಬೇಕಿತ್ತು. ಆಗಲೇ ಹೋಗಿಬಿಟ್ಟೆ ಎಂದಿದ್ದಾರೆ. ತುಂಬಾ ಕಳೆದುಕೊಂಡೆ. ಅವನ ಬಗ್ಗೆ ಪರಿಚಯದ ಅಗತ್ಯವಿಲ್ಲ. ಬ್ರುನೋ ಎಂದರೇ ಸಾಕು. ಬ್ರುನೋ ನನ್ನ ಅತ್ಯುತ್ತಮ ಸ್ನೇಹಿತ,ಆತ್ಮೀಯ ಸ್ನೇಹಿತ.ಇಂದು ಕೊನೆಯುಸಿರೆಳೆದ ಎಂದು ಬರೆದು ಕೊಂಡಿದ್ದಾರೆ.
https://www.instagram.com/p/CPFlqh8rxic/?utm_medium=copy_link
ಬ್ರುನೋ ಸ್ವಭಾವದ ಬಗ್ಗೆ ಬರೆದಿರುವ ಮೇಘನಾ, ಬ್ರುನೋ ಗೆ ಸಾಮಾನ್ಯವಾಗಿ ಮಕ್ಕಳು ಎಂದರೇ ಆಗೋದಿಲ್ಲ.ಆದರೆ ಅದು ಹೇಗೋ ಆತ ಜ್ಯೂನಿಯರ್ ಚಿರು ಜೊತೆ ಹೊಂದಿಕೊಂಡಿದ್ದ, ಆತ ತನ್ನ ಯಜಮಾನ ಎಂಬ ಕಲ್ಪನೆ ಆತನಿಗೆ ಇತ್ತು ಎನ್ನಿಸುತ್ತದೆ ಎಂದಿದ್ದಾರೆ ಮೇಘನಾ.

ಬ್ರುನೋ ನೀನಿಲ್ಲದೇ ಮನೆ ಮತ್ತೆ ಮೊದಲಿನಂತೆ ಇರೋದಿಲ್ಲ. ಯಾರು ಬಂದರೂ ಬ್ರುನೋ ಎಲ್ಲಿ ಎಂದು ವಿಚಾರಿಸುತ್ತಿದ್ದರು. ನಾವೆಲ್ಲರೂ ನಿನ್ನನ್ನು ಮಿಸ್ ಮಾಡುತ್ತೇವೆ ಎಂದು ಭಾವುಕರಾಗಿದ್ದಾರೆ ಮೇಘನಾ.

ಚಿರುಗೂ ಇಷ್ಟವಾಗಿದ್ದ ಬ್ರುನೋ ಸತ್ತುಚಿರು ಜೊತೆಗೆ ಸೇರಿದ್ದಾನೆ ಎಂಬರ್ಥದಲ್ಲಿ ತಮ್ಮ ಬರಹ ಹಂಚಿಕೊಂಡಿರುವ ಮೇಘನಾ,
ಬಹುಷಃ ನೀನು ಚಿರು ಜೊತೆ ಇರ್ತಿಯಾ ಹಾಗೂ ಅವರಿಗೆ ತೊಂದರೆ ಕೊಡ್ತಿಯಾ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಮುಂದಿನ ತಿಂಗಳು ಅಂದ್ರೇ ಜೂನ್ 7 ಕ್ಕೆ ಚಿರು ನಿಧನವಾಗಿ ಒಂದು ವರ್ಷ ಕಳೆಯಲಿದೆ.
