ಸೋಮವಾರ, ಏಪ್ರಿಲ್ 28, 2025
HomeBreakingಮೊಮ್ಮಗನ ಭೇಟಿಗೆ ಬಂದ್ರು ಅಜ್ಜ-ಅಜ್ಜಿ…! ಜೊತೆಯಲ್ಲಿ ಮೇಘನಾ-ಚಿರು ಅಭಿಮಾನಿಗಳಿಗೆ ಕೊಟ್ರು ಸಿಹಿಸುದ್ದಿ…!!

ಮೊಮ್ಮಗನ ಭೇಟಿಗೆ ಬಂದ್ರು ಅಜ್ಜ-ಅಜ್ಜಿ…! ಜೊತೆಯಲ್ಲಿ ಮೇಘನಾ-ಚಿರು ಅಭಿಮಾನಿಗಳಿಗೆ ಕೊಟ್ರು ಸಿಹಿಸುದ್ದಿ…!!

- Advertisement -

ಜ್ಯೂನಿಯರ್ ಚಿರು ಸರ್ಜಾ ಹಾಗೂ ಮೇಘನಾ ರಾಜ್ ಕುಟುಂಬದ ಕಣ್ಣೀರು ಒರೆಸುವ ದೇವರಂತೆ ಧರೆಗೆ ಬಂದು ಅದಾಗಲೇ ನಾಲ್ಕು ತಿಂಗಳು ಕಳೆದಿದೆ.  ಮುದ್ದು-ಮುದ್ದಾಗಿ ಅಮ್ಮನ ಮಡಿಲಲ್ಲಿ ಬೆಳೆಯುತ್ತಿರೋ ಜ್ಯೂನಿಯರ್ ಚಿರು ನೋಡೋಕೆ ಚಿರಂಜೀವಿ ಸರ್ಜಾ ಹೆತ್ತವರು ಮೇಘನಾ ರಾಜ್ ಮನೆಗೆ ಬಂದಿದ್ದು, ಜೊತೆಯಲ್ಲೇ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.

ಮೇಘನಾ ರಾಜ್ ಪತಿಯನ್ನು ಕಳೆದುಕೊಂಡ ಬಳಿಕ ತವರಿನಲ್ಲೇ ಇದ್ದು ಅಕ್ಟೋಬರ್ 22 ರಂದು ಗಂಡುಮಗುವಿಗೆ ಜನ್ಮ ನೀಡಿದ್ದರು. ಸಂಪ್ರದಾಯದಂತೆ ತವರಿನಲ್ಲೇ ಬಾಳಂತನ ಮಾಡಿಕೊಂಡ ಮೇಘನಾ ನಾಮಕರಣದ ಬಳಿಕ ಸರ್ಜಾ ನಿವಾಸಕ್ಕೆ ತೆರಳಲಿದ್ದಾರೆ.

ಈ ಮಧ್ಯೆ ತಮ್ಮ ಮುದ್ದಾದ ಮೊಮ್ಮಗನ ಭೇಟಿಗೆ ಬಂದ ಚಿರಂಜೀವಿ ಸರ್ಜಾ ಹೆತ್ತವರು ಮೊಮ್ಮಗನ ಜೊತೆ ಆಟ ಆಡಿ ಅವನ ತುಂಟಾಟಗಳನ್ನು ನೋಡಿ ಫುಲ್ ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ ಆದಷ್ಟು ಬೇಗ ಮೊಮ್ಮಗನನ್ನು ಮನೆಗೆ ಕರೆದೊಯ್ಯುವ ಆತುರವನ್ನು ವ್ಯಕ್ತಪಡಿಸಿದ್ದಾರಂತೆ.

ಮೂಲಗಳ ಪ್ರಕಾರ ಮಾರ್ಚ್ ನಲ್ಲಿ ಅದ್ದೂರಿಯಾಗಿ ಜ್ಯೂನಿಯರ್ ಚಿರು ನಾಮಕರಣ ನಡೆಯಲಿದ್ದು, ಬಳಿಕ ಮೇಘನಾ ರಾಜ್ ತೊಟ್ಟಿಲ ಜೊತೆ ಸರ್ಜಾ ನಿವಾಸಕ್ಕೆ ಮರಳಲಿದ್ದಾರಂತೆ. ಸರ್ಜಾ ಹೆತ್ತವರು ಮೇಘನಾ ರಾಜ್ ಮನೆಯಲ್ಲಿ ಈ ಕುರಿತು ಮಾತುಕತೆ ನಡೆಸಿದ್ದು, ಮಾರ್ಚ್ ನಲ್ಲೇ ನಾಮಕರಣ ನಡೆಸಲು ತೀರ್ಮಾನಿಸಿದ್ದಾರಂತೆ.

ಫೆಬ್ರವರಿ ತಿಂಗಳಿನಲ್ಲಿ ಜ್ಯೂನಿಯರ್ ಚಿರು ನಾಮಕರಣ ಎನ್ನಲಾಗಿತ್ತು. ಆದರೆ ಫೆಬ್ರವರಿ ತಿಂಗಳಿನಲ್ಲಿ ಧ್ರುವ್ ಸರ್ಜಾ ಪೊಗರು ರಿಲೀಸ್ ಸೇರಿದಂತೆ ಹಲವು ಸಿನಿಮಾ ಚಟುವಟಿಕೆಗಳು ಇದ್ದಿದ್ದರಿಂದ ನಾಮಕರಣ ಮುಂದೂಢಲಾಗಿತ್ತು. ಈಗ ಸಧ್ಯದಲ್ಲೇ ಜ್ಯೂನಿಯರ್ ಚಿರು ನಾಮಕರಣ ನಡೆಯೋದು ಖಚಿತವಾಗಿದ್ದು, ದಿನಾಂಕ ಘೋಷಣೆಯೊಂದೇ ಬಾಕಿ ಇದೆ.

RELATED ARTICLES

Most Popular