ಶ್ರೀರಾಮನ ಬಗ್ಗೆ ವಾಟ್ಸಾಪ್ ಸ್ಟೇಟಸ್ ಹಾಕಿದ್ದಕ್ಕೆ ಯುವಕನ ಮನೆ ಮೇಲೆ ದಾಳಿ : ಮೂವರ ಬಂಧನ

ಮಂಗಳೂರು : ವಾಟ್ಸಾಪ್ ನಲ್ಲಿ ಯುವಕನೋರ್ವ ರಾಮನ ಬಗ್ಗೆ ಸ್ಟೇಟಸ್ ಹಾಕಿದ್ದಕ್ಕೆ ಯುವಕನ ಮೇಲೆ ದಾಳಿ ನಡೆಸಿದ ಐವರ ವಿರುದ್ದ ಉಪ್ಪಿಂಗಡಿ ಪೊಲೀಸರು ದೂರು ದಾಖಲಿಸಿದ್ದು, ಮೂವರನ್ನು ಬಂಧಿಸಿದ್ದಾರೆ.

ತಿಂಗಳ ಹಿಂದೆಯಷ್ಟೆ ಯುವಕನೋರ್ವ ತನ್ನ ವಾಟ್ಸಾಪ್ ನಲ್ಲಿ ರಾಮನ ಬಗ್ಗೆ ಸ್ಟೇಟಸ್ ಹಾಕಿಕೊಂಡಿದ್ದ. ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ನೆಕ್ಕಿಲಾಡಿ ನಿವಾಸಿಗಳಾದ ಉಬೈದ್ ಹಾಗೂ ಮುಕುಂದ್ ನಡುವೆ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮಾರ್ಚ್ 2ರಂದು ಫರ್ಜಿನ್, ರಶೀದ್ ಸೇರಿದಂತೆ ಇಬ್ಬರು ಎಸ್ಡಿಪಿಐ ಕಾರ್ಯಕರ್ತರು ಮುಕುಂದನ ಮನೆಗೆ ಬಳಿ ಬಂದು ದಾಳಿ ನಡೆಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಉಬೈದ್ ಗೇಟ್ ಕಿತ್ತು ಹಾಕಿ, ನಿಲ್ಲಿಸಿದ ಕಾರಿನ ಲೈಟ್ ಒಡೆದು ಹಾಕಿದ್ದು, ಮುಕುಂದ್ ನನ್ನು ಮನ ಬಂದತ್ತೆ ನಿಂದಿಸಿದ್ದಾನೆಂದು ಪೊಲೀಸರಿಗೆ ದೂರು ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಠಾಣೆಯ ಪೊಲೀಸರು ಐದು ಮಂದಿಯ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ. ತಲೆ ಮರೆಯಿಸಿಕೊಂಡಿರುವ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಶ್ರೀರಾಮನ ಬಗ್ಗೆ ಸ್ಟೇಟಸ್ ಹಾಕಿರೋ ಬಗ್ಗೆ ಈ ದಾಳಿ ನಡೆದಿದ್ದು, ಆರೋಪಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಲು ಡಿಜಿಪಿ ಹಾಗೂ ಎಸ್ ಪಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಟ್ವಿಟ್ ಮಾಡಿದ್ದಾರೆ.

https://twitter.com/ShobhaBJP/status/1367146889997553667

Comments are closed.