ಸ್ಯಾಂಡಲ್ ವುಡ್ ನಟಿ ಹಾಗೂ ನ್ಯೂ ಮಮ್ಮಿ ಮೇಘನಾರಾಜ್ ಸದಾ ಇನ್ ಸ್ಟಾಗ್ರಾಂ ನಲ್ಲಿ ಸಖತ್ ಆಕ್ಟಿವ್. ಸದಾ ಒಂದಿಲ್ಲೊಂದು ವಿಡಿಯೋ ಹಂಚಿಕೊಳ್ಳೋ ಮೇಘನಾರಾಜ್ ಅಭಿಮಾನಿ ಕಳಿಸಿದ ಸ್ಪೆಶಲ್ ವಿಡಿಯೋ ಶೇರ್ ಮಾಡಿದ್ದಾರೆ.

ಅಭಿಮಾನಿಗಳು ಸದಾ ಮೇಘನಾ ರಾಜ್ ಹಾಗೂ ಚಿರು ವಿಡಿಯೋ,ಪೋಟೋ ಹಂಚಿಕೊಳ್ಳುತ್ತಿರುತ್ತಾರೆ. ಈ ಪೋಟೋಗಳನ್ನು ತಪ್ಪದೇ ಅಭಿಮಾನಿಗಳ ವಾಲ್ ನಲ್ಲಿ ಗಮನಿಸಿ ತಮ್ಮ ಪೇಜ್ ಗೆ ಶೇರ್ ಮಾಡುತ್ತಾರೆ ಮೇಘನಾ.

ಇತ್ತೀಚೆಗೆ ಮೇಘನಾ ಅಭಿಮಾನಿಯೊಬ್ಬರು expectation and reality ಎಂಬ ಟ್ಯಾಗ್ ಲೈನ್ ಅಡಿ ವಿಡಿಯೋ ಸಿದ್ಧಪಡಿಸಿದ್ದರು. ಇದರಲ್ಲಿ ಮೇಘನಾ ಹಾಗೂ ಚಿರು ಹಳೆಯ ಪೋಟೋ ವಿಡಿಯೋ ಬಳಸಲಾಗಿತ್ತು.

ಬೆಳಗಿನ ಮೊದಲ ಒಂದು ಗಂಟೆ ಎಂಬ ಶೀರ್ಷಿಕೆಯಡಿ Expectation ಅಲ್ಲಿ ಚಿರು ಮತ್ತು ಮೇಘನಾ ವರ್ಕೌಟ್ ಮಾಡುತ್ತಿರುವ ವಿಡಿಯೋ ಹಾಕಲಾಗಿದ್ದರೇ reality ಯಲ್ಲಿ ಮೇಘನಾ ಮೊಬೈಲ್ ನೋಡುತ್ತಿರುವ ವಿಡಿಯೋ ಹಾಕಲಾಗಿದೆ.
https://www.instagram.com/p/CO4VH8sAupl/?
ಅಭಿಮಾನಿಯು ಸಿದ್ಧಪಡಿಸಿದ ಈ ವೀಡಿಯೋವನ್ನು ಮೇಘನಾ ಶೇರ್ ಮಾಡಿದ್ದು accurate ಎಂದಿದ್ದಾರೆ.ಒಟ್ಟಿನಲ್ಲಿ ಮೇಘನಾ ಸದಾ ತಮ್ಮ ಹಾಗೂ ಚಿರು ಪೋಟೋ,ವಿಡಿಯೋಗಳನ್ನು ಹಂಚಿಕೊಳ್ಳುತ್ತ ತಮ್ಮ ನೋವನ್ನು ಮರೆಯುವ ಪ್ರಯತ್ನದಲ್ಲಿರುತ್ತಾರೆ.

ಕಳೆದ 2020 ರ ಜೂನ್ 7 ರಂದು ಮೇಘನಾ ಪತಿ ಹಾಗೂ ನಟ ಚಿರಂಜೀವಿ ಸರ್ಜಾ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
