ನಾನು ಅವಲಂಬಿಸುವ ಏಕೈಕ ಭುಜ ನಿಮ್ಮದು…! ಮೇಘನಾರಾಜ್ ಭಾವುಕ ಸಂದೇಶ ಯಾರಿಗೆ ಗೊತ್ತಾ…?!

ನಟಿ ಮೇಘನಾರಾಜ್ ನಿಧಾನಕ್ಕೆ ತಮ್ಮ ಬದುಕಿಗೆ ಮರಳುತ್ತಿದ್ದಾರೆ. ಅಗಲಿದ ಪತಿಯ ನೆನಪಿನ ಸವಿಬುತ್ತಿಯ ಜೊತೆ ಜ್ಯೂನಿಯರ್ ಚಿರು ಸಾಂಗತ್ಯದಲ್ಲಿ ದಿನಕಳೆಯುತ್ತಿರುವ ಮೇಘನಾ ರಾಜ್ ಸದ್ಯಸೋಷಿಯಲ್ ಮೀಡಿಯಾದಲ್ಲಿ ಭಾವುಕ ಸಾಲುಗಳ ಮೂಲಕ ತಮ್ಮ ಭಾವನೆ ಬಿಚ್ಚಿಟ್ಟಿದ್ದಾರೆ.

ಎಲ್ಲ ಹೆಣ್ಣುಮಕ್ಕಳಿಗೂ ಅಪ್ಪ ನೇ ಸೂಪರ್ ಹೀರೋ. ಮೇಘನಾರಾಜ್ ಕೂಡ ಇದಕ್ಕೆ ಹೊರತಲ್ಲ. ಸದ್ಯ ತಾಯ್ತನದ ಸಂಭ್ರಮದಲ್ಲಿರೋ ಮೇಘನಾ ರಾಜ್ ತಂದೆಯ ಹುಟ್ಟುಹಬ್ಬಕ್ಕೆ ಭಾವುಕ ಸಾಲುಗಳ ಜೊತೆ ಶುಭಕೋರಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಮೇಘನಾರಾಜ್, ಪ್ರೀತಿಯ ಅಪ್ಪಾ…ನಾನು ಅವಲಂಬಿಸುವ ಏಕೈಕ ಭುಜ ನಿಮ್ಮದು. ಈ ಸಂಗತಿಯನ್ನು ನಾನು ನಿಮ್ಮ ಜನ್ಮದಿನದಂದು ಹೇಳಲು ಇಚ್ಛಿಸುತ್ತೇನೆ.ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಲವ್ ಯೂ ಅಪ್ಪಾ ಕುಟ್ಟಿಮಾ. ಎಂದು ಬರೆದಿದ್ದಾರೆ.

https://www.instagram.com/p/CKy_oXyLTrK/?igshid=1wqcgwb1rxrhw

ಮೇಘನಾ ರಾಜ್ ಗೆ ತಂದೆ ಹಾಗೂ ತಾಯಿ ಪ್ರೀತಿಯಿಂದ ಕುಟ್ಟಿಮಾ ಎಂದು ಕರೆಯುತ್ತಾರೆ. ಇವರಿಬ್ಬರನ್ನು ಬಿಟ್ಟರೇ ಚಿರು ಕೂಡ ಕುಟ್ಟಿಮಾ ಎಂದೇ ಕರೆಯುತ್ತಿದ್ದರು.

ಮೇಘನಾರಾಜ್ ಹಾಗೂ ಚಿರು ಮತ್ತು ಸುಂದರ ರಾಜ್ ಇರುವ ಪೋಟೋ ಹಂಚಿಕೊಂಡಿರುವ ಮೇಘನಾ ತಂದೆಗೆ ಶುಭಕೋರಿದ್ದಾರೆ. ಅಷ್ಟೇ ಅಲ್ಲ ಮೇಘನಾರಾಜ್ ಬಾಲ್ಯದಲ್ಲಿ ತಾಯಿಯೊಂದಿಗೆ ಇರುವ ಪೋಟೋ ಹಂಚಿಕೊಂಡು ತಂದೆಯೇ ಪೋಟೋಗ್ರಾಫರ್ ಆಗಿರೋವಾಗ ಪೋಟೋ ಪೋಸ್ ಕೊಡಲು ಕಷ್ಟವೇ ಎಂದಿದ್ದಾರೆ.

ಹೆರಿಗೆ ನಂತರ ತಂದೆ ಮನೆಯಲ್ಲೇ ಇರುವ ಮೇಘನಾರಾಜ್ ಮಗುವಿನ ಜೊತೆ ಕಾಲ ಕಳೆಯುತ್ತಿದ್ದಾರೆ.ಅಳಿಯನ ಸಾವಿನ ನಂತರ ಸಾಕಷ್ಟು ಕುಗ್ಗಿದ್ದ ನಟಸುಂದರ್ ರಾಜ್ ಈಗ ಕೊಂಚ ಚೇತರಿಸಿಕೊಂಡಿದ್ದು ಮಗಳು ಹಾಗೂ ಪತ್ನಿಯೊಂದಿಗೆ ಮನೆಯಲ್ಲೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

೬೯ ವಸಂತಗಳನ್ನು ಪೊರೈಸಿದ ಸುಂದರ ರಾಜ್ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿದ್ದು ವಿಭಿನ್ನ ಪಾತ್ರಗಳ ಮೂಲಕ ಜನರ ಮನಸೆಳೆದಿದ್ದಾರೆ.

Comments are closed.