ಸೆಲಿಬ್ರೆಟಿಯಾಗಿದ್ದರೂ ಆಕ್ಷಿಜನ್ ಗೆ ಪರದಾಟ….! ಕೊರೋನಾ ಕರಾಳತೆ ಬಿಚ್ಚಿಟ್ಟ ನಟ,ನಿರ್ದೇಶಕ ಸಾಧುಕೋಕಿಲ್…!!

ಕೊರೋನಾ ಎರಡನೇ ಅಲೆ‌ದೇಶ ಹಾಗೂ ರಾಜ್ಯವನ್ನು ಅಕ್ಷರಷಃ ಆತಂಕಕ್ಕೀಡು ಮಾಡಿದೆ. ಸ್ಯಾಂಡಲ್ ವುಡ್ ನ ಹಲವರು ಸೋಂಕಿಗೆ ತುತ್ತಾಗಿರುವ ಬೆನ್ನಲ್ಲೇ ನಟ,ಸಂಗೀತ ನಿರ್ದೇಶಕ ಸಾಧುಕೋಕಿಲ್ ಕೊರೋನಾ ಕರಾಳತೆ‌ತೆರೆದಿಟ್ಟಿದ್ದಾರೆ.

ಕೊರೋನಾ ದಿನೇ ದಿನೇ ತನ್ನ ಕರಾಳ ಛಾಯೆಯನ್ನು ಹೆಚ್ಚಿಸುತ್ತಲೇ ಇದೆ. ಕೊರೋನಾ ಸೋಂಕಿನ ಕಪಿಮುಷ್ಟಿಗೆ ಸಿಲುಕಿದವರಿಗೆ ಮಾತ್ರ ಅದರ ರೌದ್ರತೆ ಅರಿವಾಗುತ್ತಿದೆ.ಹೀಗೆ ಕೊರೋನಾ ಸೋಂಕಿನಿಂದ ಸಮಸ್ಯೆಗೆ ಒಳಗಾದ ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಕೊರೋನಾ ಎಫೆಕ್ಟ್ ಜೋರಾಗಿದೆ. ನನ್ನ ಅಣ್ಣನ ಮಗನಿಗೆ ಸೋಂಕು ತಗುಲಿತ್ತು. ಈಗ ಹುಶಾರಾಗಿದೆ. ಅದರೆ ಸೋಂಕು ತಗುಲಿದ ಸಂದರ್ಭದಲ್ಲಿ ನಾನು ಒಬ್ಬ ಸೆಲಿಬ್ರೆಟಿಯಾಗಿದ್ದರೂ ಆಕ್ಷಿಜನ್ ಸಿಲೆಂಡರ್ ಗಾಗಿ ಪರದಾಡಿದ್ದೇನೆ.

ಒಂದಿಡಿ ದಿನ ಒದ್ದಾಡಿದ ಮೇಲೆ ಸಿಲೆಂಡರ್ ಸಿಕ್ಕಿದೆ. ಹೀಗಾಗಿ ಕರೋನಾ ವನ್ನು ಕಡೆಗಣಿಸಬೇಡಿ. ಹುಶಾರಾಗಿರಿ. ಅಗತ್ಯ ಕಾಳಜಿ ವಹಿಸಿ. ಜಾತ್ರೆ,ತೇರು,ಮದುವೆ,ಜಾಥಾ ಇಂತ‌ಸಮಾರಂಭಗಳಿಗೆ ಹೋಗಬೇಡಿ ಎಂದು ಸಾಧು ಕಿವಿಮಾತು ಹೇಳಿದ್ದಾರೆ.

ನಮ್ಮ ರಾಜ್ಯದಲ್ಲಿ ರಾಜಕಾರಣ ಬ್ಯುಸಿನೆಸ್ ಆಗಿದೆ. ಹೀಗಾಗಿ ಕೊರೋನಾ ಉಲ್ಬಣಿಸಿದೆ. ಹೀಗಾಗಿ ನಿಮ್ಮ ಕಾಳಜಿ ನೀವೆ ವಹಿಸಬೇಕು. ಟಿವಿಯಲ್ಲಿ ತೋರಿಸೋದೆಲ್ಲ ಸುಳ್ಳು ಎಂದುಕೊಳ್ಳಬೇಡಿ. ಎಚ್ಚರ ಇರಲಿ ಅಂತ ಸಾಧು ಸಲಹೆ ನೀಡಿದ್ದಾರೆ.

ಉಪೇಂದ್ರ ನಾಯಕರಾಗಿರುವ ಲಗಾಮ್ ಚಿತ್ರಕ್ಕೆ ಸಾಧು ಸಂಗೀತ ನೀಡುತ್ತಿದ್ದು, ಸಿನಿಮಾದ ಮುಹೂರ್ತದ ವೇಳೆ ತಮ್ಮ ಕೊರೋನಾ ಅನುಭವದ ಕತೆ ಹೇಳಿದ್ದಾರೆ.

Comments are closed.