ಸ್ಯಾಂಡಲ್ ವುಡ್ ನಲ್ಲಿ ಸದ್ಯ ಮಂಗಳವಾದ್ಯ ಹಾಗೂ ಲಾಲಿ ಹಾಡಿನ ಸದ್ದೇ ಜೋರಾಗಿದೆ. ನಟಿ ಮಯೂರಿ ತಾಯಿಯಾದ ಬೆನ್ನಲ್ಲೇ, ಇದೀಗ ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಖ್ಯಾತಿಯ ನಯನಾ ಪುಟ್ಟಸ್ವಾಮಿ ಮಗುವಿಗೆ ಜನ್ಮ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ಪ್ಯಾಟೇ ಹುಡುಗಿರ ಹಳ್ಳಿ ಲೈಫ್ ಸೇರಿದಂತೆ ಹಲವು ರಿಯಾಲಿಟಿ ಶೋ ಹಾಗೂ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ನಟಿ ನಯನಾ ಪುಟ್ಟಸ್ವಾಮಿ ಅಮೇರಿಕಾದಲ್ಲಿ ನೆಲೆಸಿದ್ದು, ಅಲ್ಲೇ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.

ಅಮೇರಿಕಾದ ಟೆಂಪಲ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ನಯನಾ ಪುಟ್ಟಸ್ವಾಮಿ ಗಂಡುಮಗುವಿಗೆ ಜನ್ಮನೀಡಿದ್ದು, ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಸಮೇತ ಹಂಚಿಕೊಂಡಿದ್ದಾರೆ.

ಮದುವೆ ಬಳಿಕ ಸ್ಯಾಂಡಲ್ ವುಡ್ ಹಾಗೂ ನಟನೆಯಿಂದ ದೂರ ಉಳಿದಿರುವ ನಯನಾ ಪುಟ್ಟಸ್ವಾಮಿ ಪತಿ ಚರಣ್ ಜೊತೆ ಅಮೇರಿಕಾದಲ್ಲಿ ವಾಸವಾಗಿದ್ದಾರೆ.

ಅಮೇರಿಕಾದಲ್ಲಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಯನಾ ಮಗು ಜನಿಸಿದ ಕೆಲವೇ ಗಂಟೆಗಳಲ್ಲಿ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಖಾಸಗಿ ವಾಹಿನಿಯ ಪ್ಯಾಟೇ ಹುಡುಗಿಯರ ಹಳ್ಳಿ ಲೈಫ್ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ನಯನಾ ಹಲವು ಚಿತ್ರದಲ್ಲಿ ನಟಿಸಿದ್ದು, ಕೊನೆಯದಾಗಿ ವಿನಯ್ ರಾಜಕುಮಾರ್ ನಟನೆಯ ಸಿದ್ಧಾರ್ಥ್ ದಲ್ಲಿ ನಟಿಸಿದ್ದರು.

2018 ರಲ್ಲಿ ಚರಣ್ ಜೊತೆ ಸಪ್ತಪದಿ ತುಳಿದ ನಯನಾ ಅಮೇರಿಕಾಕ್ಕೆ ಹಾರಿದ್ದು, ಅಲ್ಲಿಯೇ ವಾಸವಾಗಿದ್ದಾರೆ.