ಸ್ಯಾಂಡಲ್ ವುಡ್ ನಲ್ಲಿ ಆರಂಭವಾಯ್ತು ಸಿನಿಸುಗ್ಗಿ…! ತೆರೆಗೆ ಬರ್ತವ್ರೇ ಇನ್ಸಪೆಕ್ಟರ್ ವಿಕ್ರಂ…!!

ಸಂಕ್ರಾಂತಿ ಮುಗಿದಿದ್ದೇ ತಡ ಸ್ಯಾಂಡಲ್ ವುಡ್ ನಲ್ಲಿ ಸಿನಿಸುಗ್ಗಿ ಆರಂಭವಾಗಿದೆ. ಯುವರತ್ನ,ರಾಬರ್ಟ,ಪೊಗರು ಬಳಿಕ ಈಗ ನಿಮ್ಮ ಮುಂದೇ ಬರ್ತಿದ್ದಾರೆ ಇನ್ಸಪೆಕ್ಟರ್ ವಿಕ್ರಂ.

ಕೊರೋನಾದಿಂದ ಸಿದ್ಧವಾಗಿದ್ದರೂ ತೆರೆಗೆ ಬರದೇ ಬಾಕ್ಸಾಫಿಸ್ ನಲ್ಲೇ ಉಳಿದಿದ್ದ ಸ್ಟಾರ್ ಗಳ ಚಿತ್ರಗಳು ಒಂದೊಂದಾಗಿ ತೆರೆಗೆ ಬರೋಕೆ‌ ಮುಹೂರ್ತ ಫಿಕ್ಸ್ ಆಗತೊಡಗಿದೆ‌.ಥಿಯೇಟರ್ ಗೆ ಕೇವಲ ೫೦ ರಷ್ಟು ಜನರಿಗೆ ಅವಕಾಶ ನೀಡಲಾಗಿದೆ ಎಂಬ ಕಾರಣಕ್ಕೆ ಎಲ್ಲರೂ ಯೋಚಿಸುತ್ತಿರುವಾಗಲೇ ಯುವರತ್ನ ರಿಲೀಸ್ ಗೆ ಚಿತ್ರತಂಡ ಡೇಟ್ ಅನೌನ್ಸ್ ಮಾಡಿತ್ತು.

ಒಂದು ಬಿಗ್ ಬಜೆಟ್ ಸಿನಿಮಾ ಅನೌನ್ಸ್ ಆಗಿದ್ದೇ ತಡ ಸಾಲು ಸಾಲು ಚಿತ್ರಗಳು ತೆರೆಗೆ ಬರಲು ಟೈಂ ಫಿಕ್ಸ್ ಮಾಡಿಕೊಂಡು ಸಿನಿರಸಿಕರಿಗೆ ರಸದೌತಣ ನೀಡ್ತಿವೆ.

ಎಪ್ರಿಲ್ ೧ ರಂದು ಯುವರತ್ನ, ಮಾರ್ಚ್ ೧೧ ರಂದು ರಾಬರ್ಟ್, ಫೆ.೧೯ ರಂದು ಪೊಗರು ಈಗ ಫೆ.೫ ರಂದು ಡೈನಾಮಿಕ್ ಪ್ರಿನ್ಸ್ ಅಭಿನಯದ ಇನ್ಸಪೆಕ್ಟರ್ ವಿಕ್ರಂ ತೆರೆಗೆ ಬರಲಿದೆ.ಸೋಷಿಯಲ್ ಮೀಡಿಯಾ ದಲ್ಲಿ ಲೈವ್ ಬಂದು ಮಾತನಾಡಿದ ಚಿತ್ರದ ನಾಯಕ ಪ್ರಜ್ವಲ್ ದೇವರಾಜ್ ಚಿತ್ರ ಫೆ.೫ ರಂದು ರಿಲೀಸ್ ಆಗಲಿದೆ ಅನ್ನೋ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಂದು ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ದರ್ಶನ್ ಅಣ್ಣನ ಜೊತೆ ನಟಿಸುವುದೇ ಒಂದು ಅದ್ಭುತ. ಅಣ್ಣನ ಜೊತೆ ತೆರೆ ಹಂಚಿಕೊಂಡಿದ್ದಕ್ಕೆ ಖುಷಿಯಾಗಿದೆ. ಅಣ್ಣನ ಪಾತ್ರ ತೆರೆ ಮೇಲೆ ನೋಡಿ ಆನಂದಿಸಿ ಎಂದಿದ್ದಾರೆ.

ಶಿವಣ್ಣನನ್ನು ನೆನಪಿಸುವ ಇನ್ಸಪೆಕ್ಟರ್ ವಿಕ್ರಂ ಪೋಲಿಯಾದರೂ ಕರ್ತವ್ಯದಲ್ಲಿ ನಿಷ್ಠನಾಗಿರೋ ಅಧಿಕಾರಿಯ ಕತೆ ಎಂದು ತಮ್ಮ ಚಿತ್ರದ ಬಗ್ಗೆ ಹೇಳಿದ್ದಾರೆ.

ರಘು ಮುಖರ್ಜಿ ಸೇರಿದಂತೆ ಹಲವು ನಟ-ನಟಿಯರು ಮಿಂಚಿರೋ ಸಿನಿಮಾದ ಟ್ರೇಲರ್ ಗಣರಾಜ್ಯೋತ್ಸವದಂದು ರಿಲೀಸ್ ಆಗಲಿದೆ‌.ಇನ್ಸಪೆಕ್ಟರ್ ವಿಕ್ರಂ ದಲ್ಲಿ ಇದೆ ಮೊದಲ ಬಾರಿಗೆ ಪ್ರಜ್ವಲ್ ಗೆ ಭಾವನಾ ಜೋಡಿ ಯಾಗಿದ್ದು ಶ್ರೀನರಸಿಂಹ್ ನಿರ್ದೇಶಿಸಿದ್ದು ಅನೂಪ್ ಸೀಳಿನ್ ಸಂಗೀತವಿದೆ.


ಒಟ್ಟಿನಲ್ಲಿ ಮುಂದಿನ ತಿಂಗಳಿನಿಂದ ಸ್ಯಾಂಡಲ್ ವುಡ್ ಸಿನಿಪ್ರಿಯರಿಗೆ ಸಿನಿಮಾಗಳ ಹಂಗಾಮಾ ಶುರುವಾಗಲಿದ್ದು ಅಭಿಮಾನಿಗಳು ಮಾತ್ರ ಸಖತ್ ಖುಷಿಯಾಗಿದ್ದಾರೆ‌.

Comments are closed.