ಸೋಮವಾರ, ಏಪ್ರಿಲ್ 28, 2025
HomeBreakingರಿಮೇಕ್ ಚಿತ್ರದಲ್ಲಿ ಪವರ್ ಸ್ಟಾರ್...! ಡಾರ್ಲಿಂಗ್ ಕೃಷ್ಣನ್ ಗೆ ಜೊತೆಯಾದ ಪುನೀತ್ ರಾಜಕುಮಾರ್....!!

ರಿಮೇಕ್ ಚಿತ್ರದಲ್ಲಿ ಪವರ್ ಸ್ಟಾರ್…! ಡಾರ್ಲಿಂಗ್ ಕೃಷ್ಣನ್ ಗೆ ಜೊತೆಯಾದ ಪುನೀತ್ ರಾಜಕುಮಾರ್….!!

- Advertisement -

ಲವ್ ಮಾಕ್ಟೇಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ಡಾರ್ಲಿಂಗ್ ಕೃಷ್ಣ್ ಈಗ ಸ್ಯಾಂಡಲ್ ವುಡ್ ಬಹುಬೇಡಿಕೆಯ ನಟ. ಸಾಲು-ಸಾಲು ಚಿತ್ರಕ್ಕೆ ಸಹಿ ಹಾಕಿರುವ‌ ಕೃಷ್ಣಾ ಈಗ ಪವರ್ ಜೊತೆಗೂ ಕಾಣಿಸಿಕೊಳ್ಳೋ ಅವಕಾಶ ಪಡೆದಿದ್ದಾರೆ.

ಲವ್ ಮಾಕ್ಟೇಲ್ ಸಿಕ್ವೆನ್ಸ್ ೨ ಹಾಗೂ ಇನ್ನಷ್ಟು ಚಿತ್ರದಲ್ಲಿ ಬ್ಯುಸಿಯಾಗಿರೋ ಡಾರ್ಲಿಂಗ್ ಕೃಷ್ಣ್ ಫೆ. ೧೪ ರಂದು ಹಸೆಮಣೆ ಏರಲಿದ್ದಾರೆ. ಈ ಸಿಹಿಸುದ್ದಿ ಮಧ್ಯೆ ಮತ್ತೊಂದು ಖುಷಿ ವಿಷ್ಯ ಕೃಷ್ಣನ್ ಅಂಗಳದಿಂದ‌ಹೊರಬಿದ್ದಿದ್ದು, ಡಾರ್ಲಿಂಕ್ ಕೃಷ್ಣ್ ನ ಜೊತೆ ಪುನೀತ್ ನಟಿಸಲಿದ್ದಾರೆ.

ನಿರ್ದೇಶಕ ನಾಗೇಂದ್ರ್ ಪ್ರಸಾದ್ ತಮಿಳಿನ ಓ ಮೈ ಕಡವುಲೆ ಸಿನಿಮಾವನ್ನು ಕನ್ನಡಕ್ಕೆ ರಿಮೇಕ್ ಮಾಡಲಿದ್ದು, ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ್ ನಾಯಕರಾಗಿದ್ದಾರೆ.

ಈ ಚಿತ್ರದ ವಿಶೇಷ ಪಾತ್ರವೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಣ್ಣ ಹಚ್ಚಲಿದ್ದು, ಸಧ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ.

ಮೂಲ ಸಿನಿಮಾದಲ್ಲಿ ಅಶೋಕ್ ಸೆಲ್ವನ್ ಹಾಗೂ ರಿತೀಕಾ ಸಿಂಗ್ ಕಾಣಿಸಿಕೊಂಡಿದ್ದು, ಅತಿಥಿ ಪಾತ್ರದಲ್ಲಿ ವಿಜಯ್ ಸೇತುಪತಿ ಮಿಂಚಿದ್ದರು. ಕನ್ನಡದಲ್ಲಿ ವಿಜಯ್ ಸೇತುಪತಿ ಪಾತ್ರದಲ್ಲಿ ಪುನೀತ್ ರಾಜಕುಮಾರ್ ಕಾಣಿಸಲಿದ್ದು ಕುತೂಹಲ ಇಮ್ಮುಡಿಸಿದೆ.

ಈಗಾಗಲೇ ಪುನೀತ್ ರಾಜ್ ಕುಮಾರ್ ಜೊತೆ ಎರಡು ಸುತ್ತಿನ ಮಾತುಕತೆ ನಡೆದಿದ್ದು, ಸಧ್ಯದಲ್ಲೇ ಚಿತ್ರತಂಡ ಸಿನಿಮಾ ಕುರಿತು ಸುದ್ದಿಗೋಷ್ಟಿ ನಡೆಸಲಿದೆ.

ಫೆ.೧೪ ರಂದು ಮಿಲನಾ ನಾಗರಾಜ್ ಜೊತೆ ಹೊಸಬದುಕಿಗೆ ಪ್ರವೇಶಿಸುತ್ತಿರುವ ಡಾರ್ಲಿಂಗ್ ಕೃಷ್ಣ್ ಅಂದು ತಮ್ಮ ಲವ್ ಮಾಕ್ಟೆಲ್ -೨ ದ ವಿಡಿಯೋ ಸಾಂಗ್ ಗಳನ್ನು ರಿಲೀಸ್ ಮಾಡಲಿದ್ದಾರೆ.

RELATED ARTICLES

Most Popular