ತುಂಬು ಗರ್ಭಿಣಿ ಕರೀನಾ ಕಪೂರ್ ಹೊಸ ಸಾಹಸ…! ಪೋಟೋ ನೋಡಿ ಬೆರಗಾದ ಅಭಿಮಾನಿಗಳು…!!

ಸಿನಿಮಾ ನಟಿಯರು ಒಂದಿಲ್ಲೊಂದು ಚಟುವಟಿಕೆ ಮೂಲಕ ಸುದ್ದಿಯಾಗೋದು ಮಾಮೂಲು. ಅನುಷ್ಕಾ ಬಳಿಕ ನಟಿ ಕರೀನಾ ಕಪೂರ್ ತುಂಬು ಗರ್ಭಿಣಿಯಾಗಿದ್ದಾಗಲೂ ಯೋಗಾಭ್ಯಾಸ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿಯ ಪೋಟೋಗೆ ಲೈಕ್ ಕಮೆಂಟ್ ಮಾಡಿ ಮುಂದಿನ  ದಿನಗಳಿಗೆ ಶುಭಹಾರೈಸುತ್ತಿದ್ದಾರೆ.

ನಟಿ ಕರೀನಾ ಕಪೂರ್ ಎರಡನೇ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ತಾವು ಮತ್ತೊಮ್ಮೆ ತಾಯಿಯಾಗುತ್ತಿರುವ ಸಂಗತಿ ಹೇಳಿಕೊಂಡಾಗಿನಿಂದಲೂ ಆಕ್ಟೀವ್ ಆಗಿ ಸಾಕಷ್ಟು ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಕರೀನಾ, ಹೆರಿಗೆಗೆ ದಿನಗಣನೆ ನಡೆದಿರುವಾಗಲೂ ಯೋಗಾಭ್ಯಾಸ ಮಾಡುತ್ತ ಪೋಟೋಗೆ ಪೋಸ್ ನೀಡಿದ್ದಾರೆ.

ಸೈಫ್ ಹಾಗೂ ಕರೀನಾ ದಂಪತಿಗೆ ಈಗಾಗಲೇ 4 ವರ್ಷದ ಮಗನಿದ್ದಾನೆ. ಎರಡನೇ ಭಾರಿ ತಾಯಾಗುತ್ತಿರುವ ಕರೀನಾ ಬೇಬಿಬಂಪ್ ಜೊತೆ ಸಾಕಷ್ಟು ಜಾಹೀರಾತುಗಳಲ್ಲಿ ಪಾಲ್ಗೊಂಡಿದ್ದು, ಈ ಹಿಂದೆ ನಾವಿಬ್ಬರು ಶೂಟಿಂಗ್ ನಲ್ಲಿದ್ದೇವೆ ಎಂದು ಪೋಸ್ಟ್ ಹಾಕಿದ್ದರು.

ಈಗವೈದ್ಯರ ಸಲಹೆ ಮೇರೆಗೆ ಕರೀನಾ ಯೋಗಾಭ್ಯಾಸದಲ್ಲಿ ತೊಡಗಿಕೊಂಡಿದ್ದು, ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಪ್ರಗೆನ್ಸಿಯಲ್ಲೂ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದ ಕರೀನಾ ತಮ್ಮ ಕೊನೆಯ ಚಿತ್ರ ಲಾಲ್ ಸಿಂಗ್ ಚಡ್ಡಾ ಡಬ್ಬಿಂಗ್ ಮುಗಿಸಿಕೊಟ್ಟಿದ್ದಲ್ಲದೇ ಹಲವು ಚಾಟ್ ಶೋ, ಜಾಹೀರಾತಿನಲ್ಲಿ ಭಾಗವಹಿಸಿದ್ದರು.

ಕೆಲ ದಿನಗಳ ಹಿಂದೆಯಷ್ಟೇ ಹೆಣ್ಣುಮಗುವಿಗೆ ಜನ್ಮನೀಡಿದ ನಟಿ ಅನುಷ್ಕಾ ಕೂಡ ಡೆಲಿವರಿಗೆ ಕೆಲ ದಿನಗಳಿದ್ದಾಗ ಯೋಗಾಭ್ಯಾಸ ಮಾಡಿ ಶೀರ್ಷಾಷನ ಭಂಗಿಯಲ್ಲಿ ಪೋಸ್ ನೀಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ಈಗ  ಈ ಸಾಲಿಗೆ ಕರೀನಾ ಕೂಡ ಸೇರ್ಪಡೆಗೊಂಡಿದ್ದು,  ಪೋಟೋ ನೋಡಿದ ಅಭಿಮಾನಿಗಳು ಬೆಸ್ಟ್ ಆಫ್ ಲಕ್ ಬೇಬೋ ಅಂತಿದ್ದಾರೆ.  

Comments are closed.