ಅಹಮದಾಬಾದ್ ಸ್ಪೋಟಕ್ಕೂ ಸಪ್ಲೈ ಆಗಿತ್ತಾ ಸ್ಪೋಟಕ : ಶಿವಮೊಗ್ಗದ ಕಲ್ಲುಕ್ವಾರಿಗೂ ಭೇಟಿಕೊಟಿದ್ರಾ ಉಗ್ರರು..!

ಶಿವಮೊಗ್ಗ : ಹಣಸೋಡು ಸ್ಪೋಟ ಪ್ರಕರಣದ ಬೆನ್ನಲ್ಲೇ ಕ್ಲಲುಕ್ವಾರಿಗಳ ಕರಾಳತೆ ಬಯಲಾಗುತ್ತಿದೆ. ಅಕ್ರಮವಾಗಿ ಸ್ಪೋಟಕ ಸಾಗಾಟದ ಜಾಲವೂ ಪತ್ತೆಯಾಗಿದೆ. ಈ ನಡುವಲ್ಲೇ ಜಿಲೆಟಿನ್ ಕಡ್ಡಿ ಸಂಗ್ರಹ್ಕಕಾಗಿ ಶಿವಮೊಗ್ಗದ ಕಲ್ಲುಕ್ವಾರಿಗಳಿಗೆ ಉಗ್ರರು ಭೇಟಿಕೊಟ್ಟಿದ್ದಾರೆ ಅನ್ನೋ ಸ್ಪೋಟಕ ಮಾಹಿತಿ ಬಯಲಾಗಿದೆ.

ಶಿವಮೊಗ್ಗ ಜಿಲ್ಲೆಯ ಹಣಸೋಡು ಸ್ಪೋಟ ಪ್ರಕರಣಕ್ಕೆ ಮಲೆನಾಡ ಮಂದಿ ಬೆಚ್ಚಿಬಿದ್ದಿದ್ದರು. ಜನರು ಸ್ಪೋಟಕದ ಭೀಕರತೆಯಿಂದ ಹೊಬರೋದಕ್ಕೂ ಭಯಪಡುತ್ತಿದ್ದಾರೆ. ಈ ನಡುವಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಮಲೆನಾಡಿಗರು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊರವಲಯದ ಹಣಸೋಡು ಮಾತ್ರವಲ್ಲ ಕಲ್ಲಗಂಗೂರು, ದೇವಕತಿಕೊಪ್ಪ, ಗಜ್ಜೆನಹಳ್ಳಿ, ಬಸವಗಂಗೂರು, ಮೊಜಪ್ಪನ ಹೊಸೂರು ಮುಂತಾದ ಕಡೆಗಳಲ್ಲಿ ಸುಮಾರು 150ಕ್ಕೂ ಅಧಿಕ ಕಲ್ಲಿನ ಕ್ವಾರಿಗಳು ಹಾಗೂ ಕ್ರಷರ್ ಗಳು ಕಾರ್ಯನಿರ್ವಹಿಸುತ್ತಿವೆ. ಆಗಾಗ ಕಲ್ಲಿನ ಕ್ವಾರಿಗಳಲ್ಲಿ ಸ್ಪೋಟಕಗಳನ್ನು ಸಿಡಿಸುವುದರಿಂದ ಸುತ್ತಮುತ್ತಿನ ಜನರು ಭಯದಲ್ಲಿಯೇ ಬದುಕುತ್ತಿದ್ದಾರೆ.

ಇಂತಹ ಕಲ್ಲಿನ ಕ್ವಾರಿಗಳಿಗೆ ಸ್ಪೋಟಕಗಳು ಅಕ್ರಮವಾಗಿ ಸಪ್ಲೈ ಆಗುತ್ತಿರೋದು ಬಯಲಾಗಿದೆ. ಅಲ್ಲದೇ 2008ರಲ್ಲಿ ಗುಜರಾತ್ನ ಅಹಮದಾಬಾದ್ ನಲ್ಲಿ ಸಂಭವಿಸಿದ ಸ್ಫೋಟಕ್ಕೆ ಇದೇ ಶಿವಮೊಗ್ಗ ಜಿಲ್ಲೆಯ ಕಲ್ಲಿನ ಕ್ವಾರಿಗಳಿಂದಲೇ ಉಗ್ರರು ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹ ಮಾಡಿದ್ದರು ಅನ್ನೋದು ಬಯಲಾಗಿದೆ.

ಅಹಮದಾಬಾದ್ ಬಾಂಬ್ ಬ್ಲಾಸ್ಟ್ ಪ್ರಕರಣದ ಮಾಸ್ಟರ್ ಮೈಂಡ್ ಉಗ್ರ ಯಾಸಿನ್ ಭಟ್ಕಳ್ ತನಿಖೆ ವೇಳೆ ಇಂತಹ ಆಘಾತಕಾರಿ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಅಲ್ಲದೇ ಇಲ್ಲಿನ ಕಲ್ಲಿನ ಕ್ವಾರಿಗಳಿಂದ ಇತರ ದುಷ್ಕೃತ್ಯಕ್ಕೆ ಸ್ಪೋಟಕ ಸಪ್ಲೈ ಆಗಿತ್ತಾ ಅನ್ನೋ ಬಗ್ಗೆಯೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಣಸೋಡು ಸ್ಪೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಸ್ಪೋಟದ ತನಿಖೆಗಾಗಿ ಈಗಾಗಲೇ 6 ತಂಡಗಳನ್ನು ರಚಿಸಿದೆ. ಈ ನಡುವೆ ಕಲ್ಲುಕ್ವಾರಿಗಳಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಅಪಾರ ಪ್ರಮಾಣದ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್, ಅಮೋನಿಯಂ ನೈಟ್ರೇಟ್ ಗಳು ಪತ್ತೆಯಾಗಿದೆ ಎನ್ನಲಾಗುತ್ತಿದೆ.

ಪೊಲೀಸ್ ಇಲಾಖೆ ಕೂಡ ಹಣಸೋಡು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದೆ. ಸ್ಪೋಟದ ಇನ್ನಷ್ಟು ಭೀಕರತೆ ಅನಾವರಣವಾಗೋದ್ರ ಜೊತೆಗೆ ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆಯೂ ಇದೆ.

Comments are closed.