ಮಂಗಳವಾರ, ಏಪ್ರಿಲ್ 29, 2025
HomeBreakingಕಬ್ಜನಿಗೆ ಕಿಚ್ಚ್ ನ ಸಾಥ್.....! 7 ಭಾಷೆಯಲ್ಲಿ ಸದ್ದು ಮಾಡಲಿದೆ ರಿಯಲ್ ಸ್ಟಾರ್ ಮೂವಿ...!!

ಕಬ್ಜನಿಗೆ ಕಿಚ್ಚ್ ನ ಸಾಥ್…..! 7 ಭಾಷೆಯಲ್ಲಿ ಸದ್ದು ಮಾಡಲಿದೆ ರಿಯಲ್ ಸ್ಟಾರ್ ಮೂವಿ…!!

- Advertisement -

ಬಹುಕಾಲದ‌ ನಂತರ ಕಮರ್ಷಿಯಲ್ ಸಿನಿಮಾಗೆ ಮರಳಿರುವ ರಿಯಲ್ ಸ್ಟಾರ್ ಉಪೇಂದ್ರ ದೊಡ್ಡ ಸಿಹಿಸುದ್ದಿಯೊಂದಿಗೆ ಅಭಿಮಾನಿಗಳ ಸಂಕ್ರಾಂತಿ ಸಂಭ್ರಮವನ್ನು ಡಬ್ಬಲ್‌ಮಾಡಿದ್ದಾರೆ.

ಮೊದಲೆ‌ ಹೇಳಿದಂತೆ ಕಬ್ಜ ಚಿತ್ರತಂಡ ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದು ಕಬ್ಜನ ಜೊತೆ ಕಿಚ್ಚ್ ನಟಿಸ್ತಿರೋ ಬ್ರೇಕಿಂಗ್ ನ್ಯೂಸ್ ನೀಡಿದೆ.


80 ರ ದಶಕದ ಅಂಡರ್ ವರ್ಲ್ಡ್ ಮಾಫಿಯಾ ಆಧರಿಸಿ ನಿರ್ಮಾಣವಾಗುತ್ತಿರುವ ಆರ್.ಚಂದ್ರು ನಿರ್ದೇಶನದ ಸಿನಿಮಾ ಕೆಜಿಎಫ್ ಬಳಿಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವ ಮತ್ತೊಂದು ಕನ್ನಡ ಸಿನಿಮಾ ಆಗೋ ಎಲ್ಲ ಮುನ್ಸೂಚನೆ ನೀಡಿದೆ.

ಮಾಫಿಯಾ ಡಾನ್ ಪಾತ್ರದಲ್ಲಿ ಉಪೇಂದ್ರ ಮಿಂಚಲಿದ್ದರೇ,‌ಮಾಫಿಯಾವನ್ನು ಕೊನೆಗೊಳಿಸುವ ಸೂಪರ್ ಕಾಪ್ ರೂಪದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ತೆರೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕಾಗಿ‌ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದು ಇದರಲ್ಲಿ ಸುದೀಪ್ ಹಿಂದೆಂದೂ ಕಾಣದ ವಿಭಿನ್ನ ಲುಕ್‌ನಲ್ಲಿ ಮೂಡಿಬಂದಿದ್ದಾರೆ.

ಸುದೀಪ್ ಈ‌ ಚಿತ್ರದಲ್ಲಿ ಭಾರ್ಗವ್ ಭಕ್ಷಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 5ಕ್ಕೂ ಹೆಚ್ಚುಭಾಷೆಯಲ್ಲಿ ರಿಲೀಸ್ ಆಗಲಿರೋ ಈ ಚಿತ್ರಕ್ಕಾಗಿ ಚಿತ್ರತಂಡ ಸಖತ್ ವರ್ಕೌಟ್ ಮಾಡಿದ್ದು, ವಿಭಿನ್ನ ಪೋಟೋಶೂಟ್ ಗಳ‌ ಮೂಲಕವೇ ಸಂಚಲನ‌ ಮೂಡಿಸುತ್ತಿದೆ.

ಈ ಹಿಂದೆ ಮುಕುಂದ ಮುರಾರಿಯಲ್ಲಿ ಒಟ್ಟಿಗೆ ನಟಿಸಿದ್ದ ಸುದೀಪ್ ಹಾಗೂ ಉಪೇಂದ್ರ ಮತ್ತೊಮ್ಮೆ ಈ ಚಿತ್ರದಲ್ಲಿ ಸಖತ್‌ ಡಿಫರೆಂಟ್ ಸ್ಟೋರಿ ಹೇಳೋಕೆ ಬರ್ತಿದ್ದಾರೆ.

RELATED ARTICLES

Most Popular