ಸೈನಿಕನ ಸಚಿವ ಸ್ಥಾನಕ್ಕೆ ಸಪಕ್ಷಿಯರೇ ಮುಳ್ಳು…! ದೂರು ಹೊತ್ತು ಹೈಕಮಾಂಡ್ ಭೇಟಿಗೆ ತೆರಳಿದ ರೇಣುಕಾಚಾರ್ಯ..!!

ಬಿಜೆಪಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆದ ಸೈನಿಕ ಸಿ.ಪಿ.ಯೋಗೇಶ್ವರ್ ಗೆ ಮಂತ್ರಿಗಿರಿಯೇ ಮುಳುವಾಗುವ  ಲಕ್ಷಣ ದಟ್ಟವಾಗಿದೆ.

ಮೂಲ ಬಿಜೆಪಿಗರನ್ನು ಕಡೆಗಣಿಸಿ ಸಿ.ಪಿ.ಯೋಗೇಶ್ವರ್ ಗೆ ಮಣೆ ಹಾಕಿರೋದು ಶಾಸಕರ ಅಸಮಧಾನಕ್ಕೆ ಕಾರಣವಾಗಿದ್ದು ಬಹಿರಂಗವಾಗಿಯೇ ಸೈನಿಕನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆರಂಭದಿಂದಲೂ ಯೋಗೇಶ್ವರ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿತ್ತಲೇ ಬಂದಿದ್ದ ಶಾಸಕ ರೇಣುಕಾಚಾರ್ಯ, ಒಂದು ಹೆಜ್ಜೆ ಮುಂದೇ ಹೋಗಿದ್ದು ಯೋಗೇಶ್ವರ್  ಅಕ್ರಮಗಳ  ದಾಖಲೆ ಬಿಚ್ಚಿಡೋದಾಗಿ ಎಚ್ಚರಿಸಿದ್ದಾರೆ.

ಈಗಾಗಲೇ ಅಸಮಧಾನ ಹಾಗೂ ಯೋಗೇಶ್ವರ ವಿರುದ್ಧ ದೂರು ಹೊತ್ತು ರೇಣುಕಾಚಾರ್ಯ ದೆಹಲಿಗೆ ದೌಡಾಯಿಸಿದ್ದು, ವರಿಷ್ಠರ ಭೇಟಿ ಕಸರತ್ತು ಆರಂಭಿಸಿದ್ದಾರೆ. ಅಮಿತ್ ಶಾ ಹಾಗೂ ನಡ್ಡಾ ಭೇಟಿ ಮಾಡಿ, ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿರೋದರ ಬಗ್ಗೆ ಹಾಗೂ ಅವರು ಈ ಹಿಂದೆ ಸಿಎಂ ವಿರುದ್ಧ ಮಾಡಿದ ಪಿತೂರಿಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.

ತಮಗೆ ಸಚಿವ ಸ್ಥಾನ ಸಿಗದೇ ಇರೋದರಿಂದ ತೀವ್ರ ಅಸಮಧಾನ ಹಾಗೂ ಆಘಾತ ಎದುರಿಸಿರೋ ರೇಣುಕಾಚಾರ್ಯ ಹೈಕಮಾಂಡ್ ಭೇಟಿ ಮಾಡಿ ಸ್ಥಾನಕ್ಕಾಗಿ ಮನವಿ ಮಾಡಲಿದ್ದಾರೆ ‌ಎನ್ನಲಾಗುತ್ತಿದೆ. ಆದರೆ ಅಳೆದು ಸುರಿದು ತೂಗಿ ಸಾಕಷ್ಟು ವಿಳಂಬವಾಗಿ ಸಂಪುಟ ವಿಸ್ತರಣೆಗೆ ಅಸ್ತು ಎಂದಿರುವ ಬಿಜೆಪಿ ಹೈಕಮಾಂಡ್ ರೇಣುಕಾಚಾರ್ಯ ಅಸಮಧಾನಕ್ಕೆ ಸ್ಪಂದಿಸುತ್ತಾ ಇಲ್ವಾ ಅನ್ನೋದು ಗಮನಸಿಬೇಕಾದ ಸಂಗತಿ.

ಇನ್ನೊಂದೆಡೆ ಸಂಪುಟ ವಿಸ್ತರಣೆಯಾದಾಗಿನಿಂದ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುವ ರೇಣುಕಾಚಾರ್ಯ,  ರಾಮನಗರದಲ್ಲಿ ಕೂತು ಸಿಎಂ ವಿರುದ್ಧ ಸಂಚು ಮಾಡಿದವರು, ಮೆಗಾಸಿಟಿಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಮಾಡಿದವರೇ ಮಂತ್ರಿಗಳಾಗಿದ್ದಾರೆ ಎಂದು ಆರೋಪಿಸಿದ್ದಾರೆ.ಒಟ್ಟಿನಲ್ಲಿ ಕಾದು ಕಾದು ವಿಸ್ತರಣೆಯಾದ ಬಿಜೆಪಿ ಸಚಿವ ಸಂಪುಟ ಅಸಮಧಾನದ ಕಿಡಿ ಹೊತ್ತಿಸಿದ್ದು, ಎಲ್ಲಿಗೆ ಹೋಗಿ ತಲುಪುತ್ತೆ ಕಾದು ನೋಡಬೇಕಿದೆ.

Comments are closed.